SSLC ಗಣಿತ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಈ ಸಲಹೆ ನಿಮಗೆ ಉಪಕಾರಿ!!! ವಿದ್ಯಾರ್ಥಿಗಳೇ ತಪ್ಪದೇ ಓದಿ!!!

Education News preparation tips to Karnataka SSLC maths exam

SSLC Maths Exam: ಎಸೆಸೆಲ್ಸಿS(SLC l)ವಿದ್ಯಾರ್ಥಿಗಳೇ ಗಮನಿಸಿ, ನೀವೇನಾದರೂ ಗಣಿತ ಕಷ್ಟ ಎಂದು ಭಾವಿಸಿದ್ದರೆ, ಹೇಗಪ್ಪಾ ಎಸೆಸೆಲ್ಸಿ ಪರೀಕ್ಷೆಯಲ್ಲಿ (Mathematics Exam Tips)ಹೆಚ್ಚಿನ ಅಂಕ ಗಳಿಸುವುದು ಎಂದು ಚಿಂತಿಸುತ್ತಿದ್ದರೆ, ನಾವು ಹೇಳುವ ಸರಳ ಟಿಪ್ಸ್ ಫಾಲೋ ಮಾಡಿ!!

ವಿದ್ಯಾರ್ಥಿಗಳೇ ಗಮನಿಸಿ, 2023-24ನೇ ಸಾಲಿನ ಮಾರ್ಚ್‌ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ(SSLC Maths Exam)ಬರೆಯುವವರಾಗಿದ್ದರೆ, ಗಣಿತ ಪರೀಕ್ಷೆಯನ್ನು ಸುಲಭವಾಗಿ ಗೆಲ್ಲಲು, ಹೆಚ್ಚು ಅಂಕಗಳನ್ನು ಗಳಿಸಲು ಈ ಕೆಳಗಿನ ಟಿಪ್ಸ್‌ಗಳನ್ನು ಫಾಲೋ ಮಾಡಿದರೆ ಹೆಚ್ಚಿನ ಅಂಕ ಗಳಿಸಬಹುದು!!

# ಪ್ರತಿದಿನ ಅಭ್ಯಾಸ ಮಾಡಿ.
ಪ್ರತಿದಿನ ಕೆಲ ಗಂಟೆಯವರೆಗಾದರು ಮಿಸ್ ಮಾಡದೇ ಗಣಿತವನ್ನು ಅಭ್ಯಾಸ ಮಾಡಿರಿ. ಗಣಿತ ಕಷ್ಟ ಎಂದು ಓದದೇ ಇರಬೇಡಿ. ಪ್ರತಿದಿನ ಗಣಿತದಲ್ಲಿ ಏನಾದರೂ ಒಂದು ಸಮಸ್ಯೆಯನ್ನು ಅಭ್ಯಾಸ ಮಾಡಿ.

# ಗಣಿತ ಬುಕ್‌ ಸಂಪೂರ್ಣ ಓದಿರಿ
ನಿಮ್ಮ ಪರೀಕ್ಷೆಯ ಸಿಲೇಬಸ್ ಅನುಸಾರ, ಗಣಿತ ಬುಕ್‌ ಅನ್ನು ಅಲ್ಲಿ ನೀಡಿರುವ ಪ್ರತಿ ಉದಾಹರಣೆಯ ಜೊತೆಗೆ ಲೆಕ್ಕಗಳನ್ನು ಪರಿಹರಿಸಿ. ಇದರ ಜೊತೆಗೆ ಹೆಚ್ಚಿನ ಲೆಕ್ಕಗಳನ್ನು ಕಲಿಯಲು ಇತರೆ ಹೆಚ್ಚುವರಿ ಗೈಡ್‌ ಗಳನ್ನು ಬಳಕೆ ಮಾಡಿ.

# ಗಣಿತ ಎಂದರೆ ಭಯ ಪಡಬೇಡಿ
ಗಣಿತವನ್ನು ಕಬ್ಬಿಣದ ಕಡಲೆ ಎಂದೇ ಭಾವಿಸುವವರು ಹೆಚ್ಚು ಮಂದಿ. ಹೀಗಾಗಿ, ಗಣಿತ ಎಂದರೆ ಭಯಬೀತರಾಗಬೇಡಿ. ಒತ್ತಡ ಹಾಕಿಕೊಳ್ಳಬೇಡಿ. ಶಾಂತ ಚಿತ್ತರಾಗಿ ಓದಿ ಅಭ್ಯಾಸ ಮಾಡಿ.

# ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಅಭ್ಯಾಸ
ಹೆಚ್ಚಿನ ಸಂದರ್ಭಗಳಲ್ಲಿ ಹೆಚ್ಚು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು, ಸ್ಯಾಂಪಲ್ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ. ಅಲ್ಲಿ ಕಷ್ಟವಾಗುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ವಿಧಾನವನ್ನು ಶಿಕ್ಷಕರಲ್ಲಿ ಕೇಳಿ ತಿಳಿದುಕೊಳ್ಳಿ.

# ಸೂತ್ರಗಳು / ಹೆಚ್ಚಿನ ಅಂಕದ ಪ್ರಶ್ನೆಗಳು
ಮೊದಲು ಪರೀಕ್ಷೆ ಪತ್ರಿಕೆ ಮಾದರಿಯನ್ನು ಪೂರ್ಣವಾಗಿ ಗಮನಿಸಿ, ಯಾವೆಲ್ಲ ವಿಭಾಗಗಳಲ್ಲಿ ಎಷ್ಟು ಪ್ರಶ್ನೆಗಳಿಗೆ, ಎಷ್ಟು ಅಂಕದ ಯಾವ ಪ್ರಶ್ನೆಗಳಿವೆ ಎಂಬುದನ್ನು ನೋಡಿಕೊಳ್ಳಿ. ಯಾವುದು ಅತಿಮುಖ್ಯ, ಕಡ್ಡಾಯವಾಗಿ ಯಾವುದೆಲ್ಲ ಅಧ್ಯಾಯಗಳಲ್ಲಿ ಹೆಚ್ಚು ಅಂಕದ ಪ್ರಶ್ನೆ ಕೇಳಲಾಗುತ್ತದೆ ಎಂಬುದನ್ನು ಗಮನಿಸಬೇಕು.

# ಸೂತ್ರಗಳನ್ನು ಒಂದು ಕಡೆ ಬರೆದಿಟ್ಟು, ಪುನರಾವರ್ತನೆ ಮಾಡಿ
ಗಣಿತ ಪರೀಕ್ಷೆಯಲ್ಲಿ ನೀವು ಪ್ರತಿ ಸೂತ್ರಗಳನ್ನು ತಿಳಿದುಕೊಂಡಿರಬೇಕು. ನೀವು ಸೂತ್ರಗಳನ್ನು ನೆನಪಿಡಲು, ಎಲ್ಲ ಪಠ್ಯದ ಅತಿಮುಖ್ಯ ಸೂತ್ರಗಳನ್ನು ಒಂದು ಕಡೆ ಬರೆದುಕೊಂಡು, ನೀವು ಓದುವ ಕೋಣೆಯಲ್ಲಿ ಒಂದು ಕಡೆ ಅಂಟಿಸಿಕೊಳ್ಳಿ. ಆಗಾಗ ಈ ಸೂತ್ರಗಳನ್ನು ನೋಡಿಕೊಳ್ಳಿ. ಪರೀಕ್ಷೆಗೆ ಒಂದು ತಿಂಗಳ ಮೊದಲೇ ಪುನರಾವರ್ತನೆ ಮಾಡಿ.

#ಆದ್ಯತೆ ನೀಡಿ ಕಲಿಯಿರಿ.
ನಿಮಗೆ ಕಷ್ಟ ಎನಿಸುವ ಗಣಿತ ಅಧ್ಯಾಯಗಳು / ಲೆಕ್ಕಗಳನ್ನು ಮೊದಲು ಆದ್ಯತೆ ನೀಡಿ ಓದಲು ಆರಂಭಿಸಿ. ಪರೀಕ್ಷೆ ಹತ್ತಿರದ ದಿನಗಳಲ್ಲಿ ಇವುಗಳನ್ನು ಕಲಿಯಲು ಹೋದಾಗ ಒತ್ತಡ ಉಂಟಾಗಿ, ಕಲಿತಿರುವ ವಿಷಯಗಳು ಮರೆಯಬಹುದು. ಹೀಗಾಗಿ, ಮೇಲೆ ಹೇಳಿದ ಸರಳ ವಿಧಾನಗಳನ್ನು ಅನುಸರಿಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ.

ಇದನ್ನೂ ಓದಿ: Onion Price Hike:ಒಮ್ಮೆಲೆ ಏರಿಕೆ ಕಂಡ ಈರುಳ್ಳಿ – ರೇಟ್ ಕೇಳಿದ್ರೆ ಕಣ್ಣಲ್ಲಿ ನೀರು ಪಕ್ಕಾ!!

Leave A Reply

Your email address will not be published.