Prajwal Revanna Case: ಪ್ರಜ್ವಲ್ ರೇವಣ್ಣ ವೈರಲ್ ವಿಡಿಯೋದಲ್ಲಿ 3 ಮಹಿಳಾ ಸರ್ಕಾರಿ ನೌಕರರು !!

Prajwal Revanna Case: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿ ಭಾರೀ ಚರ್ಚೆಗೆ ಕಾರಣವಾಗಿರುವ JDS ಸಂಸದ ಪ್ರಜ್ವಲ್‌ ರೇವಣ್ಣ(Prajwal Revanna)ಅವರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮತ್ತೊಂದು ಸತ್ಯ ಬಯಲಾಗಿದ್ದು ವೈರಲ್ ವಿಡಿಯೋಗಳಲ್ಲಿ ಮೂವರು ಮಹಿಳಾ ಸರ್ಕಾರಿ ನೌಕರರು ಇರುವುದನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಇದನ್ನೂ ಓದಿ: Tortured Her Husband: ಗಂಡನ ಜೊತೆ ಮೃಗದಂತೆ ವರ್ತಿಸಿದ ಪತ್ನಿ! ಗಂಡನಿಗೆ ನೀಡಿದ ಹಿಂಸೆ ಕೊನೆಗೂ ಬಯಲಾಯ್ತು!

ಹೌದು, ಪೆನ್‌ಡ್ರೈವ್‌ನಲ್ಲಿ ಸಿಕ್ಕಿರುವ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಹಾಗೂ ಅಶ್ಲೀಲ ಫೋಟೋಗಳ ಪರಿಶೀಲನೆ ವೇಳೆ ಮೂವರು ಮಹಿಳಾ ಸರ್ಕಾರಿ ನೌಕರರ(Ladys Government employees) ಗುರುತು ಪತ್ತೆಯಾಗಿದೆ. ಈ ಮೂವರು ಸಂತ್ರಸ್ತೆಯರನ್ನು ಸಂಪರ್ಕಿಸಿರುವ ಎಸ್‌ಐಟಿ(SIT) ಅಧಿಕಾರಿಗಳು, ದೂರು ನೀಡುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ; ಎಚ್‌ಡಿಡಿ, ಎಚ್‌ಡಿಕೆ ಹೆಸರು ಬಳಸುವಾಗಿಲ್ಲ; ಕೋರ್ಟ್‌ ತಡೆಯಾಜ್ಞೆ

ಅಂದಹಾಗೆ ಈಗಾಗಲೇ ಕೆಲವು ಸಂತ್ರಸ್ತೆಯರು ದೂರು ನೀಡಿದ್ದು, ಪ್ರಜ್ವಲ್ ರೇವಣ್ಣ ಅವರಿಗೆ ಕುಣಿಕೆ ಬಿದ್ದಿದೆ. ಆದರೆ ಈ ಮೂವರು ದೂರು ನೀಡಿದಲ್ಲಿ ಪ್ರಜ್ವಲ್‌ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎನ್ನಲಾಗಿದೆ. ಅಲ್ಲದೆ ಎಸ್‌ಐಟಿ ಅಧಿಕಾರಿಗಳು, ಆ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವುದಾಗಿ ದೈರ್ಯ ತುಂಬುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.