Chandrayaan-3: ವಿಕ್ರಮ್, ಪ್ರಗ್ಯಾನ್ ಎಚ್ಚರಗೊಳ್ಳೋದು ಯಾವಾಗ ?! ಬಿಗ್ ಅಪ್ಡೇಟ್ ನೀಡಿದ ಇಸ್ರೋ

Chandrayaan - 3 ISRO to wait 14 more days to establish contact with Vikram ,pragyan latest updates

Chandrayaan-3: ಚಂದ್ರಯಾನ-3 (Chandrayaan-3)ರ ಭಾಗವಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿರುವ ಲ್ಯಾಂಡರ್ ಹಾಗೂ ರೋವರ್ ಉಪಕರಣಗಳನ್ನು ‘14 ದಿನಗಳ ನಿದ್ರೆಯಿಂದ ಎಚ್ಚರಿಸಲು ವಿಕ್ರಂ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ಗಳನ್ನು ಮತ್ತೆ ಎಚ್ಚರಿಸುವ ಕಾರ್ಯವನ್ನು ಸೆ.22ರಂದು ಇಸ್ರೋ ಕೈಗೊಳ್ಳಲಿದ್ದು, ಇದರಲ್ಲಿ ಯಶಸ್ವಿಯಾದಲ್ಲಿ ಇನ್ನೂ 14 ದಿನಗಳ ಕಾಲ ಈ ಉಪಕರಣಗಳು ಕಾರ್ಯನಿರ್ವಹಿಸಲಿವೆ.

ವಿಕ್ರಮ್ ಲ್ಯಾಂಡರ್( Vikram Lander)ಮತ್ತು ಪ್ರಜ್ಞಾನ್ ಅನ್ನು ಪುನರುಜ್ಜಿವನಗೊಳಿಸುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಅಕ್ಟೋಬರ್ 6 ರಂದು ಮುಂದಿನ ಚಂದ್ರ ಸೂರ್ಯಾಸ್ತದವರೆಗೆ ಪ್ರಯತ್ನ ಮುಂದುವರೆಸುವ ಬಗ್ಗೆ ಮಾಹಿತಿ ನೀಡಿದ್ದಾರೆ.

“ಅದು ಯಾವಾಗ ಎಚ್ಚರಗೊಳ್ಳುತ್ತದೆ ಎಂದು ನಮಗೆ ತಿಳಿದಿಲ್ಲ. ಅದು ನಾಳೆ ಆಗಿರಬಹುದು ಅಥವಾ ಅದು ಚಾಂದ್ರಮಾನ ದಿನದ ಕೊನೆಯದಿನ ಕೂಡ ಆಗಿರಬಹುದು. ಆದರೆ ನಾವು ಪ್ರಯತ್ನಿಸುತ್ತಿದ್ದೇವೆ. ಲ್ಯಾಂಡರ್ ಮತ್ತು ಎಚ್ಚರಗೊಂಡರೆ ಅದು ನಮ್ಮ ದೊಡ್ಡ ಸಾಧನೆಯಾಗುತ್ತದೆ” ಎಂದು ಸೋಮನಾಥ್ ಅವರು ಹೇಳಿದ್ದಾರೆ. ಈ ಉಪಕರಣಗಳೊಂದಿಗಿನ ಸಂಪರ್ಕವನ್ನು ಯಾವಾಗ ಪುನಃ ಸ್ಥಾಪಿಸಲಾಗುತ್ತದೆ ಎಂಬುದರ ಕುರಿತು ಯಾವುದೇ ಖಚಿತತೆ ಇಲ್ಲ ಎಂದು ಕೂಡ ಹೇಳಿದ್ದಾರೆ.

200 ರಿಂದ -250 ಡಿಗ್ರಿ ಸೆಲ್ಸಿಯಸ್ನಷ್ಟು ಕಡಿಮೆ ತಾಪಮಾನದಲ್ಲಿ ಚಂದ್ರನ ದಿನವನ್ನು 14 ಭೂಮಿಯ ದಿನಗಳನ್ನು ಕಳೆದ ಬಳಿಕ ಲ್ಯಾಂಡರ್ ಮತ್ತು ರೋವರ್ ಪ್ರತಿಕ್ರಿಯೆ ನೀಡಬಹುದು ಅಥವಾ ನೀಡದೆ ಇರಬಹುದು. ಆದರೆ, ಚಂದ್ರನ ದಿನವು ಮುಂದುವರೆದಂತೆ ಮತ್ತು ಚಂದ್ರನ ಮೇಯಲ್ಲಿ ತಾಪಮಾನವು ಹೆಚ್ಚಾಗುತ್ತ ಹೋದಂತೆ ಪುನರುಜ್ಜಿವನದ ಸಾಧ್ಯತೆ ಕೂಡ ಹೆಚ್ಚಾಗುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Actress Padmini: ಆಟೋ ಚಾರ್ಜ್ ಕೊಡದೇ ಚಾಲಕನ ಜೊತೆಗೆ ಕಿರಿಕ್ ಮಾಡಿಕೊಂಡ ಪುನರ್ ವಿವಾಹ ನಟಿ!

Leave A Reply

Your email address will not be published.