Belthangady News: ಧರ್ಮಸ್ಥಳ ಸಮೀಪ ಮತ್ತೆ ಬಂದಿದೆ ಕಾಡಾನೆಗಳ ಹಿಂಡು?! ಅರಣ್ಯ ನರ್ಸರಿ ಧ್ವಂಸ!!!

Dakshina Kannada news wild elephant entered again Dharmastala mundaje forest latest news

Dharmastala: ಧರ್ಮಸ್ಥಳ(Dharmastala) ಸಮೀಪದ ಮುಂಡಾಜೆ ಅರಣ್ಯ ನರ್ಸರಿಗೆ ಆನೆಗಳ ಹಿಂಡೊಂದು ನುಗ್ಗಿ ಸಸಿಗಳ ನಾಶ ಮಾಡಿರುವ ಘಟನೆಯೊಂದು ನಡೆದಿದೆ. ಇದು ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದು, ಸ್ಥಳೀಯರು ಕ್ರಮವಹಿಸಲು ಅರಣ್ಯ ಇಲಾಖೆಗೆ ಒತ್ತಾಯ ಮಾಡಿದ್ದಾರೆ. ಪ್ರವಾಸಿ ಕೇಂದ್ರವಾಗಿರುವ ಧರ್ಮಸ್ಥಳಕ್ಕೆ ಕಾಡಾನೆಗಳ ಉಪಟಳ ಹೆಚ್ಚಿರುವ ಸಾಧ್ಯತೆ ಇದೆ ಎಂದು ಹೇಳಬಹುದು.

ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಕಾಪುವಿನಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳು ನುಗ್ಗಿದ್ದು ನರ್ಸರಿ ಗಿಡಗಳಿಗೆ ಅಪಾರ ಪ್ರಮಾಣದ ಹಾನಿ ಉಂಟು ಮಾಡಿರುವ ಕುರಿತು ವರದಿಯಾಗಿದೆ. ಹಲಸು, ಬಿದಿರು, ಗಾಳಿ, ಹೆಬ್ಬಲಸು, ಬಲಿಂದ್ರ ಪಾಲೆ ಜಾತಿಯ ಸುಮಾರು 3,200ಕ್ಕೂ ಅಧಿಕ ಗಿಡಗಳ ಸಂರ್ಪೂರ್ಣ ಧ್ವಂಸವಾಗಿದೆ. ಅರಣ್ಯ ಪ್ರದೇಶದಲ್ಲಿ ನಾಟಿ ಮಾಡಲು ಇಟ್ಟ ಗಿಡಗಳು ಇವುಗಳು. ಕಳೆದ ವರ್ಷವೂ ಈ ನರ್ಸರಿಗೆ ಕಾಡಾನೆಗಳು ದಾಳಿ ಮಾಡಿದ್ದು, ಸಾವಿರಾಗು ಗಿಡ, ಹಾಗೂ ನರ್ಸರಿ ಸೊತ್ತು ಹಾನಿ ಮಾಡಿದ್ದವು.

ಆನೆಗಳು ಹೆದ್ದಾರಿ ಬದಿಯು ಸುಳಿದಾಡಿರುವ ಹೆಜ್ಜೆ ಗುರುತುಗಳು ಕಂಡು ಬಂದಿದೆ ಎಂದು ವರದಿಯಾಗಿದೆ. ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಸಿಬ್ಬಂದಿ ಸದಾನಂದ, ಉಮೇಶ್ ನರ್ಸರಿ ವಾಚರ್ ಭೇಟಿ ನೀಡಿ ವಲಯ ಅರಣ್ಯ ಅಧಿಕಾರಿ ಮೋಹನ್ ಕುಮಾರ್ ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಿಟ್ಲ: 4 ವರ್ಷದ ಪುಟ್ಟ ಬಾಲಕಿ ಸಾವು!

Leave A Reply

Your email address will not be published.