Actor Rajinikanth: ಅಳಿಯನಿಂದ ದೂರ ಇರುವಂತೆ ಹೆಬ್ಬುಲಿ ನಟಿ ಅಮಲಾ ಪೌಲ್‌ಗೆ ರಜನಿಕಾಂತ್‌ ಎಚ್ಚರಿಕೆ ?!

entertainment news kollywood news tamil critic cheyyaru balu said rajinikanth warned amala paul

Dhanush and Amala Paul relationship rumors: ಕಾಲಿವುಡ್ ಸ್ಟಾರ್ ದಂಪತಿಗಳೆಂದೇ ಖ್ಯಾತಿ ಪಡೆದಿದ್ದ ನಟ ಧನುಷ್ (Dhanush)ಮತ್ತು ಸೂಪರ್ ಸ್ಟಾರ್ ರಜನಿಕಾಂತ್(Rajanikanth) ಅವರ ಹಿರಿಯ ಪುತ್ರಿ ಐಶ್ವರ್ಯಾ 18 ವರ್ಷಗಳ ದಾಂಪತ್ಯ ಜೀವನಕ್ಕೆ 2022ರ ಜನವರಿ 17ರಂದು ಏಕಾಏಕಿ ಗುಡ್ ಬೈ ಹೇಳಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಸುದ್ದಿ ಸಿನಿಮಾ ರಂಗದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದ್ದು ಮಾತ್ರವಲ್ಲ ಎಷ್ಟೋ ಅಭಿಮಾನಿಗಳಿಗೆ ಆಘಾತ ಉಂಟುಮಾಡಿತ್ತು.

ನಟ ಧನುಷ್ ಮತ್ತು ಐಶ್ವರ್ಯ ವಿಚ್ಛೇದನಕ್ಕೆ ಕಾರಣವೇನು ಎಂಬುದು ಇಂದಿಗೂ ರಿವೀಲ್ ಆಗಿಲ್ಲ. ಇದರ ನಡುವೆಯೇ ಮತ್ತೊಂದು ಊಹಾಪೋಹ ಹರಿದಾಡುತ್ತಿವೆ. ಧನುಷ್‌ ಹಾಗೂ ಐಶ್ವರ್ಯ ನಡುವೆ ಬೇರೆ ನಟಿ ಬಂದಿದ್ದೇ ವಿಚ್ಛೇದನಕ್ಕೆ ಕಾರಣ ಎಂಬ ಮಾತು ಕೇಳಿಬರುತ್ತಿದೆ.ಇದಕ್ಕೆ ಇಂಬು ಕೊಡುವಂತಹ ಘಟನೆ ನಡೆದಿದೆ. ಇತ್ತೀಚೆಗೆ ತಮಿಳಿನ ಖ್ಯಾತ ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಚೆಯ್ಯಾರು ಬಾಲು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಆ ನಟಿ ಯಾರೆಂಬ ಸೀಕ್ರೆಟ್ ಅನ್ನು ರಿವೀಲ್‌ ಮಾಡಿದ್ದಾರೆ.

Image source Credit: JFW just for women

 

ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲಿ ಮಾತ್ರವಲ್ಲದೇ ಕನ್ನಡದಲ್ಲಿ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ ಅಮಲಾ ಪೌಲ್ ಮಲಯಾಳಂ ಚಿತ್ರರಂಗದಲ್ಲೂ ಕೂಡ ಸಕ್ರಿಯರಾಗಿದ್ದಾರೆ. ‘ವೇಳಯಿಲ್ಲ ಪಟ್ಟದಾರಿ’ ಸಿನಿಮಾ ಹಾಗೂ ಅದರ ಸೀಕ್ವೆಲ್‌ನಲ್ಲಿ ಧನುಷ್‌ ಹಾಗೂ ಅಮಲಾ ಪೌಲ್‌(Amala Paul) ಜೊತೆಯಾಗಿ ನಟಿಸಿದ್ದು, ಈ ಸಿನಿಮಾದಲ್ಲಿ ನಟಿಸುವ ಸಂದರ್ಭ ಇಬ್ಬರ ನಡುವೆ ಸ್ನೇಹ ಉಂಟಾಗಿ, ಇನ್ನಷ್ಟು ಹತ್ತಿರವಾಗಿದ್ದರು. ಈ ವಿಚಾರ ರಜನಿಕಾಂತ್‌ ಅವರ ಗಮನಕ್ಕೂ ಕೂಡ ಬಂದಿತ್ತಂತೆ. ಮಗಳ ಜೀವನದ ದೃಷ್ಟಿಕೋನದಿಂದ ಮಗಳ ಜೀವನ ಹಾಳಾಗಬಾರದು ಎಂಬ ಕಾರಣಕ್ಕೆ ಒಮ್ಮೆ ರಜನಿಕಾಂತ್‌ ಅವರೇ ಅಮಲಾ ಮನೆಗೆ ಹೋಗಿ, ಆಕೆಗೆ ಅಳಿಯನಿಂದ ದೂರ ಇರುವಂತೆ ವಾರ್ನಿಂಗ್(Rajanikanth scolded actress Amala Paul)ಮಾಡಿ ಬಂದಿದ್ದರಂತೆ.ಕಾಲಿವುಡ್ ಖ್ಯಾತ ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಸೆಯ್ಯಾರು ಬಾಲು ಅವರು ಸಂದರ್ಶನವೊಂದರಲ್ಲಿ, ಅಮಲಾಗೆ ಸೂಪರ್ಸ್ಟಾರ್ ರಜಿನಿಕಾಂತ್ ವಾರ್ನಿಂಗ್ ಮಾಡಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

Leave A Reply

Your email address will not be published.