Heart Attack: ವಯಸ್ಸಿನ ಹುಡುಗ-ಹುಡುಗಿಯರಿಗೆ ಹಾರ್ಟ್ ಅಟ್ಯಾಕ್ ಆಗಲು ಏನು ಕಾರಣ ? ಇದೊಂದು ತಪ್ಪನ್ನು ಎಂದಿಗೂ ಮಾಡಬೇಡಿ !!

health news heart attack in young adults reasons and causes for heart problems

Heart Attack: ಇತ್ತೀಚಿನ ದಿನಗಳಲ್ಲಿ (Now A Days) ಹೃದಯಾಘಾತ (Heart Attack) ಮತ್ತು ಹೃದಯ ಸ್ತಂಭನ (Cardiac Arrest) ಕಾಯಿಲೆ ಜನರನ್ನು ಹೆಚ್ಚು ಕಾಡುತ್ತಿದೆ. ವಯಸ್ಕರಲ್ಲಿ ಮಾತ್ರ ಹೃದಯ ಸ್ತಂಭನ ಸಂಭವಿಸುತ್ತಿಲ್ಲ ಬದಲಾಗಿ ಚಿಕ್ಕ ಚಿಕ್ಕ ಮಕ್ಕಳು(Childerns)ಹೃದಯ ಸ್ತಂಭನದಿಂದಾಗಿ ಸಾವನ್ನಪ್ಪುತ್ತಿರುವವರ (Death)ಸಂಖ್ಯೆ ಹೆಚ್ಚಾಗುತ್ತಿದೆ. ಅಷ್ಟಕ್ಕೂ ಹೃದಯಾಘಾತ ಉಂಟಾಗಲು ಕಾರಣವೇನು(Heart Attack Causes) ಗೊತ್ತಾ?

ಇತ್ತೀಚಿನ ವರ್ಷಗಳಲ್ಲಿ ಯುವಜನರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲಿಯೂ 30ರಿಂದ 45 ವರ್ಷದೊಳಗಿನವರಿಗೇ ಹೃದಯಾಘಾತ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಇದಕ್ಕೆ ಕಾರಣವೇನು ಎಂದು ಗಮನಿಸಿದರೆ,

# ಅನಾರೋಗ್ಯಕರ ಆಹಾರ ಪದ್ಧತಿ:
ಫಾಸ್ಟ್ ಫುಡ್ ಮತ್ತು ಜಂಕ್ ಫುಡ್‌ಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಹದಿಹರೆಯದವರಲ್ಲಿ ಅನಾರೋಗ್ಯಕರ ಆಹಾರ ಪದ್ಧತಿಗೆ ಕಾರಣವಾಗಿದೆ. ಹದಿಹರೆಯದವರ ಅನಾರೋಗ್ಯಕರ ಆಹಾರ ಪದ್ಧತಿಯು ಹೃದಯರಕ್ತನಾಳದ ಕಾಯಿಲೆಗಳು ಮತ್ತು ಹೃದಯಾಘಾತಗಳಿಗೆ ಕಾರಣವಾಗಬಹುದು. ಯುವಜನತೆ ಆರೋಗ್ಯಕರ ಆಹಾರ ಪದ್ಧತಿ ಬದಲಿಗೆ ಫಾಸ್ಟ್ ಫುಡ್ಗಳನ್ನು ಸೇವಿಸುವ ಪರಿಣಾಮ ದೇಹದ ಸರಿಯಾದ ಕಾರ್ಯನಿರ್ವಹಣೆಗೆ ಅಗತ್ಯವಾದ ಪೋಷಕಾಂಶಗಳ ಕೊರತೆಯಿಂದ ದೇಹ ದುರ್ಬಲವಾಗುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಕುಂಠಿತವಾಗಿ ರೋಗ ಲಕ್ಷಣಗಳು ಕಂಡುಬರುತ್ತವೆ.

# ಮಾದಕವ್ಯಸನ:
ಇತ್ತೀಚಿನ ದಿನಗಳಲ್ಲಿ ಯುವಜನತೆ ಒತ್ತಡ ಮಾನಸಿಕ ನೆಮ್ಮದಿಯ ಸಲುವಾಗಿ ಕೆಟ್ಟ ಚಟಗಳನ್ನು ಅಭ್ಯಾಸ ಮಾಡಿ ಕೊಳುತ್ತಾರೆ. ಇದರಲ್ಲಿ ಧೂಮಪಾನ ಮತ್ತು ಮದ್ಯಪಾನ ಕೂಡ ಒಂದು. ಇಲೆಕ್ಟ್ರಾನಿಕ್ ಸಿಗರೇಟ್‌ಗಳ ಬಳಕೆ ಕೂಡ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಉತ್ಪನ್ನಗಳು ನಿಕೋಟಿನ್ ಅಂಶವನ್ನು ಒಳಗೊಂಡಿರುತ್ತದೆ.ಹದಿಹರೆಯದವರಲ್ಲಿ ತಂಬಾಕು ಮತ್ತು ಎಲೆಕ್ಟ್ರಾನಿಕ್ ಸಿಗರೇಟುಗಳು ಹೃದಯಾಘಾತದ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಜೀವನಶೈಲಿಯಲ್ಲಿ ಬದಲಾವಣೆ:
ಇಂದಿನ ಜೀವನಶೈಲಿಯು ದೈಹಿಕ ಚಟುವಟಿಕೆಯನ್ನು ಕಡಿಮೆಯಾಗಿದ್ದು, ಯಂತ್ರಗಳನ್ನು ಹೆಚ್ಚು ಅವಲಂಬಿತರಾಗಿರುವುದು ಮಾಮೂಲಿಯಾಗಿದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ನಮ್ಮ ದೇಹಕ್ಕೆ ದೈಹಿಕ ಚಟುವಟಿಕೆಯ ಕೊರತೆಯಾದ ಸಂದರ್ಭ ದೇಹಕ್ಕೆ ಹೆಚ್ಚು ಒತ್ತಡ ಉಂಟಾಗಿ ಹೃದಯರಕ್ತನಾಳದ ಕಾಯಿಲೆಗಳು ಮತ್ತು ಹೃದಯಾಘಾತಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ.

ಹಳೆಯ ಆರೋಗ್ಯ ತೊಂದರೆಗಳು:
ಹದಿಹರೆಯದವರು ಸಾಮಾನ್ಯವಾಗಿ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ನಿರ್ಲಕ್ಷ್ಯ ಮಾಡುತ್ತಾರೆ. ಅಷ್ಟೇ ಸಾಲದು ಎಂಬಂತೆ ವೈದ್ಯರಿಂದ ಚಿಕಿತ್ಸೆ ಪಡೆಯುವ ಬದಲಿಗೆ ಸ್ವಯಂ ಔಷಧಿ ಮಾಡಿಕೊಳ್ಳುತ್ತಾರೆ. ಇದು ಹೆಚ್ಚು ತೀವ್ರವಾದ ಕಾಯಿಲೆಗಳಿಗೆ ಕಾರಣ ಉಂಟು ಮಾಡಬಹುದು. ಹೀಗಾಗಿ, ಯಾವುದೇ ಆರೋಗ್ಯ ಸಮಸ್ಯೆ ಎದುರಾದರೂ ವೈದ್ಯರ ಸಲಹೆ ಮೇರೆಗೆ ಔಷಧಿ ಸ್ವೀಕರಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಿ

Leave A Reply

Your email address will not be published.