Chaitra Kundapura Fraud Case: ಚೈತ್ರಾ ಕುಂದಾಪುರ ಪ್ರಕರಣ- ಗ್ಯಾಂಗ್ ನಲ್ಲಿ ಸಿಕ್ಕಿದ ಹಣವೆಷ್ಟು? ಅರೆಸ್ಟ್ ಆದೋರು ಯಾರೆಲ್ಲಾ ? ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಕಮಿಷನರ್

Chaitra Kundapura fraud case 8 accused arrested and 2 crore money seized says police commissioner Dayananda

Chaitra Kundapura fraud case: ಬಿಜೆಪಿ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ರೋಚಕ ಮಾಹಿತಿಗಳು ಹೊರ ಬೀಳುತ್ತಿವೆ. ಚೈತ್ರಾ ಕುಂದಾಪುರ (Chaitra Kundapura fraud case) ಮತ್ತು ಆಕೆಯ ಗ್ಯಾಂಗ್ನನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದು, ತನಿಖೆಯಲ್ಲಿ ದಿನಕ್ಕೊಂದು ಹೊಸ ಸ್ಫೋಟಕ ವಿಚಾರಗಳು ಬಯಲಾಗುತ್ತಿದೆ.

ಚೈತ್ರಾ ಕುಂದಾಪುರ & ಗ್ಯಾಂಗ್ನಿಂದ (Chaitra Kundapura And Gang) ₹5 ಕೋಟಿ ಡೀಲ್ ಕೇಸ್ ತನಿಖೆ ಬಿರುಸುಗೊಂಡಿದೆ. ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಹಣ ವಂಚನೆ ಪ್ರಕರಣದಲ್ಲಿ ಆರೋಪಿಗಳಿಂದ ಸಿಸಿಬಿ ಪೊಲೀಸರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟಿ-ಕೋಟಿ ಹಣ ವಶ ಪಡಿಸಿಕೊಂಡಿದ್ದಾರೆ.

ಈ ವಂಚನೆ ಪ್ರಕರಣದಲ್ಲಿ ಬಂಧನವಾದ ಆರೋಪಿಗಳು ಎಷ್ಟು? ಬೆಂಗಳೂರು ನಗರ ಪೊಲೀಸ್ ಆಯುಕ್ತ(Bengaluru police commissioner)ಬಿ.ದಯಾನಂದ ಅವರು ಇಲ್ಲಿಯವರೆಗೆ ಆರೋಪಿಗಳಿಂದ ಎಷ್ಟು ಹಣ ವಸೂಲಿ ಮಾಡುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Crime News: ದತ್ತು ಪಡೆದ ಬಾಲಕಿಯನ್ನು ಅತ್ಯಾಚಾರಿ ಮಾಡಿ ಕೊಲೆಗೈದ ಪೋಷಕರು

ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದರವರು, ಬೆಂಗಳೂರಿನಲ್ಲಿ ಇಂದು (ಸೆ.21) ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ವಂಚನೆ ಪ್ರಕರಣದಲ್ಲಿ ಇದುವರೆಗೆ 8 ಆರೋಪಿಗಳನ್ನು ಬಂಧಿಸಲಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಗಳಿಂದ ಚಿನ್ನ, ನಗದು, ಠೇವಣಿ ಹಣ ಒಳಗೊಂಡು ಒಟ್ಟು 2 ಕೋಟಿಗೂ ಹೆಚ್ಚು ಜಪ್ತಿ ಮಾಡಲಾಗಿದ್ದು, ಇನ್ನು ಈ ವಂಚನೆ ಪ್ರಕರಣದಲ್ಲಿ ಹಲವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಪ್ರಮುಖ ಆರೋಪಿ, ಚೈತ್ರಾ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ದ 1 ಕೋಟಿ 8 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಚೈತ್ರಾಳ ಬಾವ ಬ್ಯಾಂಕ್ ಮ್ಯಾನೇಜರ್ ಎನ್ನಲಾಗಿದ್ದು, ಇವರ ನೆರವಿನ ಮೂಲಕ ಠೇವಣಿ ಇಟ್ಟಿದ್ದರೆನ್ನಲಾಗಿದೆ. ಇದರ ಜೊತೆಗೆ,ಸಿಸಿಬಿ ಅಧಿಕಾರಿಗಳು ಚೈತ್ರಾಳ ಮನೆಯಲ್ಲಿದ್ದ ಸುಮಾರು 65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ.

Puttur KSRTC Bus Stop: ಪುತ್ತೂರು ಬಸ್‌ಸ್ಟಾಪ್‌ನಲ್ಲಿ ಚೂರಿ ಇರಿತ

ಇನ್ನು ಪ್ರಕರಣದ ಎರಡನೇ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀ ಒಡಿಶಾದ ಕಟಕ್ನಲ್ಲಿ ಬಂಧಿಸಲಾಗಿದ್ದು, ಇದೀಗ ಸ್ವಾಮೀಜಿಯ ವಿಚಾರಣೆ ನಡೆಯುತ್ತಿದೆ. ಸ್ವಾಮೀಜಿ ಅಕೌಂಟ್ ನಲ್ಲಿ ಇರುವ ಹಣ ಹಾಗೂ ಇತರೆ ಮಾಹಿತಿಗಳ ಬಗ್ಗೆ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ನೀಡಿದ ದೂರಿನ ಮೇರೆಗೆ, ಹಾಲಶ್ರೀ ಸ್ವಾಮೀಜಿಗೆ ಒಂದೂವರೆ ಕೋಟಿ ನೀಡಲಾಗಿದೆ ಎನ್ನಲಾಗಿದೆ. ಸದ್ಯ ಮಠದಲ್ಲಿ 56 ಲಕ್ಷ 3 ಸಾವಿರ ರೂಪಾಯಿ ದೊರೆತಿದ್ದು, ಇನ್ನುಳಿದ 44 ಲಕ್ಷ ರೂಪಾಯಿ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಚೈತ್ರಾಳ ಸ್ನೇಹಿತನಾಗಿರುವ ಶ್ರೀಕಾಂತ್ ಮನೆಯಲ್ಲಿ ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದರು. ಈ ವಂಚನೆ ಪ್ರಕರಣದ ಏಳನೇ ಆರೋಪಿಯಾಗಿರುವ ಶ್ರೀಕಾಂತ್ ಮನೆಯಲ್ಲಿ ಕೂಡ 45 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ.

ಇದನ್ನೂ ಓದಿ: Burqas Ban: ಹಿಜಾಬ್, ಬುರ್ಕಾ ಬ್ಯಾನ್- ಸರ್ಕಾರದಿಂದ ದಿಟ್ಟ ನಿರ್ಧಾರ !!

Leave A Reply

Your email address will not be published.