Crime News: ದತ್ತು ಪಡೆದ ಬಾಲಕಿಯನ್ನು ಅತ್ಯಾಚಾರಿ ಮಾಡಿ ಕೊಲೆಗೈದ ಪೋಷಕರು

Crime News: ದತ್ತು ಪಡೆದಿದ್ದ ಬಾಲಕಿಯನ್ನು ಅತ್ಯಾಚಾರ ಗೈದು ಕೊಲೆ ಮಾಡಿರುವ ಅಮಾನುಷ ಘಟನೆ ಮಧುರೈ ನಲ್ಲಿ ನಡೆದಿದೆ. 11 ವರ್ಷದ ಬಾಲಕಿಯ ಅನುಮಾನಾಸ್ಪದ ಸಾವಿನ ನಾಲ್ಕು ದಿನಗಳ ನಂತರ, ಮಧುರೈ ನಗರ ಪೊಲೀಸರು ಆಕೆಯ ದತ್ತು ಪಡೆದಿದ್ದ ಪೋಷಕರಾದ 48 ವರ್ಷದ ಮಾಜಿ ಸೈನಿಕ ಮತ್ತು ಆತನ ಪತ್ನಿಯನ್ನು ಮಗುವಿನ ಹತ್ಯೆ ಸಂಬಂಧ ಬಂಧಿಸಿದ್ದಾರೆ.

ಇದನ್ನೂ ಓದಿ: D K Shivakumar: ಮೇಕೆದಾಟು ವಿಚಾರದಲ್ಲಿ ದೇವೇಗೌಡರ ನಿಲುವನ್ನು ಬೆಂಬಲಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಸಾವನಪ್ಪಿದ ಬಾಲಕಿಯ ತಾಯಿ 2014ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ಆ ಸಮಯದಲ್ಲಿ ಬಾಲಕಿಗೆ ಕೇವಲ ಆರು ತಿಂಗಳ ವಯಸ್ಸಾಗಿತ್ತು. ಆಕೆಯ ತಂದೆ ಕೂಡ ಕುಟುಂಬವನ್ನು ತೊರೆದಿದ್ದ . ಈ ಸಂದರ್ಭದಲ್ಲಿ ಮಕ್ಕಳ ಚಿಕ್ಕಮ್ಮ ಮತ್ತು ಆಕೆಯ ಮಾಜಿ ಸೈನಿಕ ಪತಿ, ಮಕ್ಕಳನ್ನು ನೋಡಿಕೊಂಡರು ಮತ್ತು ಅವರನ್ನು ದತ್ತು ಪಡೆದು ಬೆಳೆಸಿದ್ದರು.

ಇದನ್ನೂ ಓದಿ: Puttur KSRTC Bus Stop: ಪುತ್ತೂರು ಬಸ್‌ಸ್ಟಾಪ್‌ನಲ್ಲಿ ಚೂರಿ ಇರಿತ

ಹುಡುಗಿಯ ಹಿರಿಯ ಸಹೋದರ ಕೂಡ ಕೆಲವು ತಿಂಗಳ ಹಿಂದೆ ಮಧುರೈಯಲ್ಲಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದ. ಮದುರೈನ ಶಾಲೆಯೊಂದರಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದ 11 ವರ್ಷದ ಬಾಲಕಿ , ದಂಪತಿಗಳೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದಳು. ಮಾರ್ಚ್ 21ರಂದು , ಆಕೆ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಹೇಳಿಕೊಂಡು ಆಕೆಯನ್ನು ಆಕೆಯ ಪೋಷಕರು ಆಸ್ಪತ್ರೆಗೆ ಕರೆತಂದಿದ್ದರು, ಆದರೆ ಅಷ್ಟರಲ್ಲಿ ಬಾಲಕಿ ಸತ್ತಿದ್ದಾಳೆ ಎಂದು ಘೋಷಿಸಲಾಯಿತು. ಆರಂಭದಲ್ಲಿ , ಕೂಡಲ್ ಪುದುರ್ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರು.

ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.ಈ ವೇಳೆ ಪೊಲೀಸರು ದಂಪತಿಗಳಿಬ್ಬರನ್ನು ವಿಚಾರಣೆ ನಡೆಸಿದ್ದು, ವಿಚಾರಣೆಯ ಸಮಯದಲ್ಲಿ, 48 ವರ್ಷದ ಸೇನಾ ಸುಬೇದಾ‌ರ್ ತನ್ನ 11 ವರ್ಷದ ದತ್ತು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಂತರ ಸ್ನಾನಗೃಹದೊಳಗೆ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ದಂಪತಿಗಳು ಒಪ್ಪಿ ಕೊಂಡಿದ್ದಾರೆ.

48 ವರ್ಷದ ಮಾಜಿ ಸೈನಿಕ ಮತ್ತು ಅವರ ಪತ್ನಿ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 201 ಮತ್ತು 302 ಹಾಗೂ ಸೆಕ್ಷನ್ 16, 17, 5 (23) (iv), 5 (2) (2) (2), 6 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಲೆ, ಸಾಕ್ಷ್ಯ ನಾಶ, ಹಾಗೆಯೇ ಲೈಂಗಿಕ ದೌರ್ಜನ್ಯ ಮತ್ತು ಅದನ್ನು ಮರೆಮಾಚುವಿಕೆ/ಪ್ರಚೋದನೆ ಸೇರಿದಂತೆ POCSO ಕಾಯಿದೆಯನ್ನು ದಾಖಲಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

3 Comments
  1. […] ಇದನ್ನೂ ಓದಿ: Crime News: ದತ್ತು ಪಡೆದ ಬಾಲಕಿಯನ್ನು ಅತ್ಯಾಚಾರಿ … […]

  2. […] ಇದನ್ನೂ ಓದಿ: Crime News: ದತ್ತು ಪಡೆದ ಬಾಲಕಿಯನ್ನು ಅತ್ಯಾಚಾರಿ … […]

Leave A Reply

Your email address will not be published.