Puttur KSRTC Bus Stop: ಪುತ್ತೂರು ಬಸ್‌ಸ್ಟಾಪ್‌ನಲ್ಲಿ ಚೂರಿ ಇರಿತ

Puttur KSRTC Bus Stop: ಬೆಳಗಾಂ ಜಿಲ್ಲೆಯಿಂದ ಕೂಲಿ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನಿಗೆ ಇನ್ನೋರ್ವ ಕೂಲಿ ಕಾರ್ಮಿಕ ಚೂರಿಯಿಂದ ಇರಿದ ಘಟನೆಯೊಂದು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಈ ಘಟನೆ ಮಾ.25 (ನಿನ್ನೆ) ನಡೆದಿದೆ.

ಇದನ್ನೂ ಓದಿ: UAE Arrested 45 Beggars: ರಂಜಾನ್ ಸಮಯದಲ್ಲಿ ಯುಎಇಯಲ್ಲಿ 45 ಭಿಕ್ಷುಕರ ಬಂಧನ

ಬೆಳಗಾಂ ಜಿಲ್ಲೆಯ ಗೋಕಾಕ್‌ ತಾಲೂಕ್‌ ಮಲ್ಲಪುರ ನಿವಾಸಿ ಆನಂದ ಬಂದಾವಿ (35) ಎಂಬಾತನೇ ಚೂರಿ ಇರಿತಕ್ಕೊಳಗಾದ ವ್ಯಕ್ತಿ. ಇವರು ತನ್ನ ಪರಿಚಯದ ಅವಿನಾಶ್‌ ಎಂಬಾತನೇ ಆರೋಪಿ. ಮಾ.25 ರಂದು ಬೆಳಗ್ಗೆ ಕೂಲಿ ಕೆಲಸಕ್ಕೆಂದು ಆನಂದ್ ಬೆಳಗಾಂನಿಂದ ಪುತ್ತೂರಿಗೆ ಬಂದಿದ್ದಾರೆ.

ಇದನ್ನೂ ಓದಿ: PM Surya Ghar Yojana:‌ ಪ್ರತಿ ತಿಂಗಳು ನೀವು 300 ಯೂನಿಟ್ ವಿದ್ಯುತ್ ಖರ್ಚು ಮಾಡುವಿರಾದರೆ ಎಷ್ಟು ಕಿಲೋವ್ಯಾಟ್ ಸೋಲಾರ್‌ ಪ್ಯಾನೆಲ್ ಬೇಕಾಗುತ್ತವೆ?

ಅಲ್ಲಿ ಅವರಿಗೆ ಅವಿನಾಶ್‌, ನಾರಾಯಣ, ದುರ್ಗೇಶ್‌, ಹರೀಶ್‌ ಎಂಬ ಪರಿಚಯದವರು ಬಸ್‌ ನಿಲ್ದಾಣದಲ್ಲಿ ಸಿಕ್ಕಿದ್ದು, ಅವರ ಜೊತೆ ಕುಳಿತುಕೊಂಡು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಆರೋಪಿ ಅವಿನಾಶ್‌ ಏಕಾಏಕಿ ಬಂದು ಆನಂದ್‌ ಬಂದಾವಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡುತ್ತಾನೆ. ಅನಂತರ ಆನಂದ್‌ ಅವರು ಅಲ್ಲಿಂದ ತೆರಳಿದ್ದು, ಸ್ವಲ್ಪ ದೂರ ನಿಂತಿದ್ದಾರೆ. ಅಲ್ಲಿಗೆ ಕೂಡಾ ಬಂದ ಅವಿನಾಶ್‌ ಕೊಲೆ ಮಾಡುವುದಾಗಿ ಹೇಳಿ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾನೆ

ಕೂಡಲೇ ಇತರರು ಬರುವುದನ್ನು ಕಂಡು ಆರೋಪಿ ಅಲ್ಲಿಂದ ತೆರಳಿದ್ದಾನೆ. ಆನಂದ್‌ ಅವರನ್ನು ಚಿಕಿತ್ಸೆಗೆಂದು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆನಂದ್‌ ನೀಡಿದ ದೂರಿನನ್ವಯ ಕೇಸ್‌ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

1 Comment
  1. […] ಇದನ್ನೂ ಓದಿ: Puttur KSRTC Bus Stop: ಪುತ್ತೂರು ಬಸ್‌ಸ್ಟಾಪ್‌ನಲ್ಲಿ ಚ… […]

Leave A Reply

Your email address will not be published.