CNG Motorcycle: ಸಿಎನ್‌ಜಿ ಬೈಕ್‌ ಶೀಘ್ರ ಬಿಡುಗಡೆಯಾದರೆ ಸಿಗಲಿದೆ 2 ದೊಡ್ಡ ಪ್ರಯೋಜನ, 2 ದೊಡ್ಡ ಅನಾನುಕೂಲ!

Auto news CNG motorcycle Bajaj likely launch CNG bike in India complete detail is here

CNG Motorcycle: ನೀವು ಇಲ್ಲಿಯತನಕ ಕೇವಲ ಎಲೆಕ್ಟ್ರಿಕ್‌ ಮತ್ತು ಪೆಟ್ರೋಲ್‌ ಬೈಕ್‌ಗಳು ರಸ್ತೆಯಲ್ಲಿ ಓಡಾಡುವುದನ್ನು ಕಂಡಿರಬಹುದು. ಆದರೆ ಇನ್ನು ಮುಂದೆ ಅತಿ ಶೀಘ್ರದಲ್ಲೇ ಸಿಎನ್‌ಜಿ ಬೈಕ್‌ಗಳು ಕೂಡಾ ರಸ್ತೆಯಲ್ಲಿ ಸಂಚರಿಸುವುದನ್ನು ಕಾಣಬಹುದು. ಬಜಾಜ್‌ ಆಟೋ ಮ್ಯಾನೇಜಿಂಗ್‌ ಡೈರೆಕ್ಟರ್‌ ರಾಜೀವ್‌ ಬಜಾಜ್‌ ಕಂಪನಿಯು ಶೀಘ್ರದಲ್ಲೇ ಸಿಎನ್‌ಜಿ ಮೋಟಾರ್‌ಸೈಕಲ್‌( CNG Motorcycle)ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಕುರಿತು ಮಾಹಿತಿಯೊಂದನ್ನು ಹೇಳಿದ್ದಾರೆ.

ಈಗ ಸಿಎನ್‌ಜಿ ಬೈಕ್ ಮಾರುಕಟ್ಟೆಗೆ ಬಂದರೆ ಸಿಎನ್‌ಜಿ ಮೋಟಾರ್‌ಸೈಕಲ್‌ನಿಂದ ನೀವು ಏನು ಪ್ರಯೋಜನಗಳು ದೊರಕಬಹುದು ಎಂಬುವುದನ್ನು ಇಲ್ಲಿ ನೀಡಲಾಗಿದೆ. ಹಾಗೂ ಅನಾನುಕೂಲಗಳೇನು ಎಂಬುವುದನ್ನು ಇಲ್ಲಿ ನೀಡಲಾಗಿದೆ.

ಬಜಾಜ್ ಆಟೋ ಸಿಎನ್‌ಜಿ ಬೈಕ್ ಅನ್ನು ತರಲು ಸುಳಿವು ನೀಡಿರುವುದರಿಂದ, ಬೈಕ್ ಬಿಡುಗಡೆಯಾದರೆ ಲಭಿಸುವ ಎರಡು ಪ್ರಮುಖ ಪ್ರಯೋಜನಗಳೇನು ಎಂದು ತಿಳಿಯುವ.

ಮೊದಲ ಪ್ರಯೋಜನವೆಂದರೆ, ಪೆಟ್ರೋಲ್‌ಗೆ ಹೋಲಿಸಿದರೆ ಸಿಎನ್‌ಜಿಯೊಂದಿಗೆ ಉತ್ತಮ ಮೈಲೇಜ್ ಪಡೆಯುವಿರಿ. ಎರಡನೇ ಪ್ರಯೋಜನವೆಂದರೆ ಪೆಟ್ರೋಲ್‌ಗೆ ಹೋಲಿಸಿದರೆ ಇಂಧನದ ಮೇಲಿನ ವೆಚ್ಚವೂ ಕಡಿಮೆಯಾಗುತ್ತದೆ. ಇಂಧನದ ಮೇಲಿನ ವೆಚ್ಚವನ್ನು ನೇರವಾಗಿ ಕಡಿಮೆ ಮಾಡುವುದು ಎಂದರೆ ಹಣವನ್ನು ಉಳಿಸುವುದು ಇಲ್ಲಿ ಮುಖ್ಯವಾಗಿದೆ.

ಸಿಎನ್‌ಜಿ ಬೈಕ್‌ನ ಕೆಲವು ಪ್ರಯೋಜನಗಳಿದ್ದರೆ, ಕೆಲವು ಅನಾನುಕೂಲತೆಗಳೂ ಇದೆ. ಮೊದಲ ಅನನುಕೂಲವೆಂದರೆ ಸಿಎನ್‌ಜಿಯೊಂದಿಗೆ, ಪೆಟ್ರೋಲ್‌ಗೆ ಹೋಲಿಸಿದರೆ ಪಿಕ್-ಅಪ್‌ನಲ್ಲಿ ನೀವು ಉತ್ತಮ ಪರಿಣಾಮವನ್ನು ಕಂಡುಕೊಳ್ಳುವಿರೇ ಎಂಬ ಸಂಶಯವಿದೆ. ಮತ್ತೊಂದೆಡೆ ಸಿಎನ್‌ಜಿ ಕಿಟ್‌ ಅಳವಡಿಸಿರುವುದರಿಂದ ಬೈಕ್‌ನ ತೂಕವೂ ಹೆಚ್ಚಾಗುವ ನಿರೀಕ್ಷೆ ಇದೆ. ಪ್ರಸ್ತುತ, ಸಿಎನ್‌ಜಿಯಲ್ಲಿ ಚಲಿಸುವ ಬೈಕ್ ಪೆಟ್ರೋಲ್ ಮಾದರಿಗಳಿಗೆ ಹೋಲಿಸಿದರೆ ಎಷ್ಟು ದುಬಾರಿಯಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಅಥವಾ ಸೂಚನೆ ಇಲ್ಲ.

ಇದನ್ನೂ ಓದಿ: Yakshagana: ಹೃದಯಾಘಾತದಿಂದ ಖ್ಯಾತ ಯಕ್ಷಗಾನ ಭಾಗವತ ನಿಧನ!

Leave A Reply

Your email address will not be published.