World’s Richest Transgender Woman : ವಿಶ್ವದ ಶ್ರೀಮಂತ ತೃತೀಯಲಿಂಗಿ ಯಾರು ಗೊತ್ತೇ? ಇವರ ಆದಾಯ ಎಷ್ಟು ಗೊತ್ತಾ?

World news richest transgender women in world her networth detail is here

World’s Richest Transgender Woman : ಮಂಗಳಮುಖಿಯರ ಬಗ್ಗೆ ನೀವು ಕೇಳಿರಬಹುದು ಅಥವಾ ನೀವು ಅವರನ್ನು ನೇರವಾಗಿಯೇ ನೋಡಿರಬಹುದು. ಕೆಲವೊಮ್ಮೆ ಸಮಾಜ ಅವರನ್ನು ತಮ್ಮಂತೆ ಸಮಾನರೆಂದು ಪರಿಗಣಿಸದೇ ಇದ್ದರೂ ಅವರ ಆಶೀರ್ವಾದವನ್ನು ವರವೆಂದು ಪರಿಗಣಿಸುತ್ತದೆ. ಸಿಗ್ನಲ್‌ಗಳಲ್ಲಿ, ರಸ್ತೆ ಬದಿಗಳಲ್ಲಿ, ಹೆಚ್ಚು ಜನಸಂದಣಿಯಿರುವ ಪ್ರದೇಶಗಳಲ್ಲಿ ಕೈತಟ್ಟಿ ಹಣ ಬೇಡಿ ಅದರಿಂದ ಜೀವನ ನಡೆಸುವ ಸ್ವಾವಲಂಭಿ ಜೀವನ ಇವರದ್ದು. ಅಂದಹಾಗೆ ನಿಮಗೆ ಗೊತ್ತಾ? ವಿಶ್ವದ ಶ್ರೀಮಂತ ತೃತೀಯಲಿಂಗಿ (World’s Richest Transgender Woman) ಯಾರು ಎಂದು, ಇವರ ಆದಾಯ ಎಷ್ಟು ? ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶ್ವದ ಶ್ರೀಮಂತ ತೃತೀಯಲಿಂಗಿ ಜೆನ್ನಿಫರ್ ಪ್ರಿಟ್ಜ್ಕರ್ (Jennifer Pritzker) ಕೂಡಾ ಒಬ್ಬರು. 73 ವರ್ಷದ ಜೆನ್ನಿಫರ್ ಪ್ರಿಟ್ಜ್ಕರ್ ವಿಶ್ವದಲ್ಲಿರುವ ಏಕೈಕ ತೃತೀಯಲಿಂಗಿ ಬಿಲಿಯನೇರ್ ಹಾಗೂ ವಿಶ್ವದ ಶ್ರೀಮಂತ ಬಿಲಿಯನೇರ್ ವ್ಯಕ್ತಿಯಾಗಿದ್ದಾರೆ. ಜೆನ್ನಿಫರ್ ಪ್ರಿಟ್ಜ್ಕರ್ ಕೇವಲ 1.9 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಅಂದರೆ 15,800 ಕೋಟಿ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಜೆನ್ನಿಫರ್ ಪ್ರಿಟ್ಜ್ಕರ್ ಯುನೈಟೆಡ್ ಸ್ಟೇಟ್ಸ್‌ನ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಪ್ರಿಟ್ಜ್ಕರ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಕುಟುಂಬದ 11 ಬಿಲಿಯನೇರ್ ಉತ್ತರಾಧಿಕಾರಿಗಳಲ್ಲಿ ಜೆನ್ನಿಫರ್ ಪ್ರಿಟ್ಜ್ಕರ್ ಕೂಡ ಒಬ್ಬರಾಗಿದ್ದಾರೆ. ಪ್ರಿಟ್ಜ್ಕರ್ ಕುಟುಂಬವು 36.9 ಬಿಲಿಯನ್ ಯುಎಸ್‌ ಡಾಲರ್‌ಗೂ ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿದೆ. ಭಾರತದ ರೂಪಾಯಿಯಲ್ಲಿ 3.06 ಲಕ್ಷ ಕೋಟಿ ರೂಪಾಯಿ ಆಗಿದೆ.

ಜೆನ್ನಿಫರ್ ಪ್ರಿಟ್ಜ್ಕರ್‌ರ ಅತ್ಯಂತ ಶ್ರೀಮಂತ ಕುಟುಂಬವು ಐಷಾರಾಮಿ ಹೋಟೆಲ್ ಆದ ಹಯಾತ್ ಹೋಟೆಲ್ಸ್ ಅನ್ನು ನಡೆಸುತ್ತಿದೆ. ಹಯಾತ್ ಹೋಟೆಲ್ 99,000 ಕೋಟಿ ರೂಪಾಯಿ ಆದಾಯವನ್ನು ಹೊಂದಿದೆ. ಹಯಾಟ್ ಹೊಟೇಲ್‌ನಲ್ಲಿನ ಪಾಲನ್ನು ತನ್ನ ಕುಟುಂಬದಿಂದ ಪಡೆದಿರುವ ಜೆನ್ನಿಫರ್ ಪ್ರಿಟ್ಜ್ಕರ್ ಖಾಸಗಿ ಸಂಪತ್ತು ನಿರ್ವಹಣಾ ಸಂಸ್ಥೆ ತವಾನಿ ಎಂಟರ್‌ಪ್ರೈಸಸ್‌ನ ಸಂಸ್ಥಾಪಕ ಮತ್ತು ಸಿಇಒ ಕೂಡ ಆಗಿದ್ದಾರೆ. ಹಾಗೇ ಪ್ರಿಟ್ಜ್ಕರ್ ಕುಟುಂಬದ ಸಂಪತ್ತಿನ ವಾರಸುದಾರರೂ ಕೂಡಾ ಹೌದು.

ಜೆನ್ನಿಫರ್ 2013 ರಲ್ಲಿ ತೃತೀಯಲಿಂಗಿಯಾಗಿ ಬದಲಾದರು. ಜೆನ್ನಿಫರ್ ಪ್ರಿಟ್ಜ್ಕರ್ ಪರಿಶ್ರಮದಿಂದ ಹಣಗಳಿಸಿದ್ದು, ತನ್ನ ಬಹಳಷ್ಟು ಹಣವನ್ನು ತೃತೀಯಲಿಂಗಿಗಳ ಉನ್ನತಿಗಾಗಿ ಬಳಸುತ್ತಿದ್ದಾರೆ. ಆಕೆಯ ಬೃಹತ್ ಕುಟುಂಬದ ಸಂಪತ್ತು ಹಯಾಟ್ ಹೋಟೆಲ್ಸ್, ತಂಬಾಕು ಕಂಪನಿ, ವಿಮಾನಯಾನ ಮತ್ತು ಹಲವಾರು ಇತರ ಹೂಡಿಕೆ ಉದ್ಯಮಗಳಿಂದ ಬರುತ್ತದೆ.

ಇದನ್ನೂ ಓದಿ: Viral News: ಗೆದ್ದ ಖುಷಿಯಲ್ಲಿ ಸುತ್ತಮುತ್ತ ಯಾರಿದ್ದಾರೆ ಎನ್ನುವುದ ಮರೆತ ಫುಟ್ಬಾಲ್ ಅಧ್ಯಕ್ಷ; ಹುಡುಗಿಗೆ ಲಿಪ್ ಕಿಸ್ ಕೊಟ್ಟ, ಮುಂದೇನಾಯ್ತು???

Leave A Reply

Your email address will not be published.