Shakti Yojana: ಶಕ್ತಿ ಯೋಜನೆಯ ಶೂನ್ಯ ಟಿಕೇಟ್ ವೆಚ್ಚ ನಾಲ್ಕು ನಿಗಮಗಳಿಗೆ ಬಿಡುಗಡೆ ಮಾಡಿ ಆದೇಶ!

Karnataka news government released money to four transport corporation free ticket amount under Shakti scheme

Shakti Yojana: ಚುನಾವಣಾ ಪೂರ್ವ ಕಾಂಗ್ರೆಸ್ ನೀಡಿದ್ದ ಪಂಚ ಗ್ಯಾರಂಟಿಗಳನ್ನ ಅನುಷ್ಠಾನಕ್ಕೆ ತರಲು ಹರಸಾಹಸ ಪಡುತ್ತಿದೆ.ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆಯ(Shakti Yojana) ಜೂನ್ 11ರಂದು ಜಾರಿಗೆ ತಂದಿದೆ.ಶಕ್ತಿ ಯೋಜನೆ ಮೂಲಕ ಮಹಿಳೆಯರು ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅನುವು ಮಾಡಿಕೊಡಲಾಗಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ‘ಶಕ್ತಿ ಯೋಜನೆ’ಯಡಿ ರಾಜ್ಯಾದ್ಯಂತ ಮಹಿಳೆಯರಿಗೆ ನಾಲ್ಕು ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಟಿಕೆಟ್ ನೀಡಲಾಗಿದೆ. ಈ ಕುರಿತು ಸರ್ಕಾರ, BMTC, KSRTC, NWKRTC ಮತ್ತು KKRTC ನಿಗಮಗಳಿಗೆ ಉದ್ದೇಶಿತ ಅನುದಾನ ಬಿಡುಗಡೆ ಮಾಡುವ ಮೂಲಕ ಸೋಮವಾರ ಆದೇಶ ಹೊರಡಿಸಿದೆ.

ಜೂನ್ 11 ರಿಂದ ಜಾರಿಗೆ ಬಂದ ‘ಶಕ್ತಿ ಯೋಜನೆ’ (Shakti Scheme) ಮೂಲಕ ಕೋಟ್ಯಂತರ ಮಹಿಳೆಯರು ಉಚಿತವಾಗಿ ಸರ್ಕಾರಿ ಸಾರಿಗೆ ಸೇವೆಯ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಹಣವನ್ನು ರಾಜ್ಯ ಸರ್ಕಾರವೇ(State Government)ಬೊಕ್ಕಸದಿಂದ ಭರಿಸುವ ಭರವಸೆ ನೀಡಿ ಅದರಂತೆ ಜೂನ್ ಮತ್ತು ಜುಲೈ ತಿಂಗಳ ಹಣ ಬಿಡುಗಡೆ ಮಾಡಿದೆ.ಜೂನ್ 11ರಿಂದ ಜೂನ್ 31ರ ವರೆಗೆ ಉಚಿತ ಪ್ರಯಾಣ ಮಾಡಲು ಅದ ವೆಚ್ಚವನ್ನು ಸರ್ಕಾರ ಬಿಡುಗಡೆ ಮಾಡಿದ್ದು,ಜೂನ್ ತಿಂಗಳ ಶಕ್ತಿ ಯೋಜನೆಯ ಹಣವನ್ನು ನಾಲ್ಕು ನಿಗಮಕ್ಕೆ ಒದಗಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಜೂನ್ ತಿಂಗಳ ಶಕ್ತಿ ಯೋಜನೆಯ ಹಣ ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC) 7364.90 ಲಕ್ಷ ರೂಪಾಯಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) 3416.07ಲಕ್ಷ ರೂಪಾಯಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (NWKRTC) 5018.27 ಲಕ್ಷ ರೂಪಾಯಿ, ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (KKRTC) 3133.75 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಲಾಗಿರುವ ಕುರಿತು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಮಹಿಳೆಯರಿಗೆ ಇವಿಎಂ ಯಂತ್ರದ ಮೂಲಕ ನಾಲ್ಕು ಸಾರಿಗೆ ನಿಗಮದ ಬಸ್‌ಗಳಲ್ಲಿ ಶೂನ್ಯ ಟಿಕೆಟ್ (Zero Ticket)ನೀಡುತ್ತಿರುವುದು ಗೊತ್ತಿರುವ ಸಂಗತಿ. ನಾಲ್ಕು ನಿಗಮಗಳ ಅಧಿಕಾರಿಗಳು ಜುಲೈ ತಿಂಗಳಲ್ಲಿ ಮಾಡಲಾದ ವೆಚ್ಚದ 456,58,66,115 ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದು, ಇದಕ್ಕೆ ಸರ್ಕಾರ ಪ್ರತಿಕ್ರಿಯೆ ನೀಡಿದೆ. ಜುಲೈ ತಿಂಗಳಲ್ಲಿ KSRTC ನಿಗಮಕ್ಕೆ 11076.33 ಲಕ್ಷ ರೂಪಾಯಿ, BMTC ನಿಗಮಕ್ಕೆ 5131.42ಲಕ್ಷ ರೂಪಾಯಿ, NWKRTC ನಿಗಮಕ್ಕೆ 7651.45 ಲಕ್ಷ ರೂಪಾಯಿ ಹಾಗೂ KKRTC ನಿಗಮಕ್ಕೆ 5614.80 ಲಕ್ಷ ರೂಪಾಯಿ ಒಟ್ಟಾಗಿ ಕಳೆದ ತಿಂಗಳಲ್ಲಿ 29474.00 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಮಾಹಿತಿ ಒದಗಿಸಿದೆ.

ಇದನ್ನೂ ಓದಿ: Senior Citizens Schemes: ಕೇಂದ್ರ ಸರ್ಕಾರದ ಈ ಅದ್ಭುತ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಸಿಗಲಿದೆ ಮಾಸಿಕ 10ಸಾವಿರ!

Leave A Reply

Your email address will not be published.