A mayor married to a crocodile : ಯಪ್ಪಾ… ಮೊಸಳೆಯನ್ನೇ ಮದುವೆಯಾದ ಪಾಲಿಕೆ ಮೇಯರ್ !! ಮುಂದಿನ ಅದು, ಇದು ಎಲ್ಲವೂ ಇದರೊಂದಿಗೆಯೇ..?

Latest international news marriage news Mexican mayor gets married to crocodile to bring fortune to his people

Mexican mayor married crocodile: ಇತ್ತೀಚಿನ ದಿನಗಳಲ್ಲಿ ವಿಚಿತ್ರ ವಿಚಿತ್ರವಾದ ಮದುವೆಗಳನ್ನು(Marriage) ನಾವು ನೋಡುತ್ತೇವೆ. ಒಂದು ಸಮಯದಲ್ಲಿ ಸಲಿಂಗಿಗಳ ಮದುವೆಯೇ ಎಲ್ಲರಿಗೂ ಅಚ್ಚರಿ ಮೂಡಿಸಿದರೆ ಇಂದು ಅದು ಸಾಮಾನ್ಯವಾಗಿದೆ. ಇಂದು ತಮ್ಮನ್ನೇ ತಾವು ಮದುವೆಯಾಗೋದು, ದೇವರನ್ನು ವರಿಸುವುದು ಎಲ್ಲರನ್ನೂ ಬೆರಗಾಗಿಸುತ್ತದೆ. ಆದರೀಗ ಇನ್ನೂ ವಿಚಿತ್ರ ಎಂಬಂತೆ ಇಲ್ಲೊಬ್ಬ ಭೂಪ ಮೊಸಳೆಯನ್ನೇ(crocodile) ಮದುವೆಯಾಗಿ (Mexican mayor married crocodile), ತಬ್ಬಿ ಮುದ್ದಾಡಿದ್ದಾನೆ.

ಹೌದು, ಮೆಕ್ಸಿಕೋದಲ್ಲಿ ಮೇಯರ್(Mexico Mayor) ಮೊಸಳೆಯನ್ನೇ ವಿವಾಹವಾಗಿದ್ದಾರೆ. ಅಚ್ಚರಿಯಾದರೂ ಇದು ನಿಜ. ಮೆಕ್ಸಿಕೋದಲ್ಲಿ ಶತಮಾನಗಳಷ್ಟು ಹಳೆಯ ಆಚರಣೆಯ ಪ್ರಕಾರ ವರ್ಣರಂಜಿತ ಸಮಾರಂಭದಲ್ಲಿ ಮೇಯರ್ ಮೊಸಳೆಯನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.

ಅಂದಹಾಗೆ ಮೆಕ್ಸಿಕೋದ ಟೆಹುವಾಂಟೆಪೆಕ್(Tehuvantepek) ಇಸ್ತಮಸ್‌ನಲ್ಲಿರುವ ಸ್ಯಾನ್ ಪೆಡ್ರೊ ಹುವಾಮೆಲುಲಾದ ಮೇಯರ್ ವಿಕ್ಟರ್ ಹ್ಯೂಗೋ ಸೋಸಾ(Viktor hugo sosa) ಅವರು ಅಲಿಸಿಯಾ ಆಡ್ರಿಯಾನಾ ಹೆಸರಿನ ಮೊಸಳೆಯನ್ನು ಮದುವೆಯಾಗಿದ್ದಾರೆ. ಆ ಮೂಲಕ ತಮ್ಮ ಪೂರ್ವಜರ ಆಚರಣೆಗಳನ್ನು ಮುಂದುವರಿಸಿದ್ದಾರೆ. ಅಲ್ಲದೆ ಈ ಮದುವೆ ಸಮಾರಂಭಕ್ಕೆ ಅನೇಕರು ಸಾಕ್ಷಿಯಾಗಿದ್ದು, ನೃತ್ಯ ಮತ್ತು ಸಂಗೀತ ಮೊಳಗಿದಾಗ ಮೇಯರ್ ಮೊಸಳೆಗೆ ಕಿಸ್ ಮಾಡಿದ್ದಾರೆ.

ಮದುವೆಯಂತಹ ಸಂಬಂಧಗಳ ಮೂಲಕ ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಇಲ್ಲಿನ ಎರಡು ಸ್ಥಳೀಯ ಜನಾಂಗಗಳು ಪುರುಷ ಮತ್ತು ಹೆಣ್ಣು ಸರೀಸೃಪದೊಂದಿಗೆ ವಿವಾಹ ಮಾಡುವ ಪದ್ಧತಿ ಆಚರಿಸಿಕೊಂಡು ಬಂದಿದೆ. ಆದ್ದರಿಂದ ಮೆಕ್ಸಿಕೋ ಮೇಯರ್‌ ಮೊಸಳೆಯನ್ನು ವರಿಸಿದ್ದಾರೆ. ಅಲ್ಲದೆ ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ. ಹೀಗಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಪ್ರೀತಿ ಇಲ್ಲದೆ ನೀವು ಮದುವೆಯಾಗಲು ಸಾಧ್ಯವಿಲ್ಲ. ನಾನು ಈ ರಾಜಕುಮಾರಿ ಹುಡುಗಿಯೊಂದಿಗೆ ಮದುವೆಯಾಗಿದ್ದೇನೆ ಎಂದು ಸೋಸಾ ಅವರು ತಿಳಿಸಿದ್ದಾರೆ.

ಇನ್ನು ಈ ವೇಳೆ ಮೊಸಳೆ ಕಚ್ಚದಿರಲಿ ಎಂದು ಅದರ ಬಾಯಿಗೆ ಹಗ್ಗ ಕಟ್ಟಲಾಗಿತ್ತು. ಹಿಸ್ಪಾನಿಕ್ ಯುಗಕ್ಕೂ ಮೊದಲಿನ ಅವಧಿಯ ಚೊಂಟಾಲ್ ಮತ್ತು ಹುವೆ ಬುಡಕಟ್ಟು ಸಮುದಾಯದಲ್ಲಿ ಪ್ರಕೃತಿಯನ್ನು ಪೂಜಿಸಲು ಈ ಆಚರಣೆ ಚಾಲ್ತಿಯಲ್ಲಿತ್ತು ಎಂದು ಹೇಳಲಾಗಿದೆ. ಪುಟ್ಟ ರಾಜಕುಮಾರಿ ಅಂತಾ ಕರೆಯಲ್ಪಡುವ ಮೊಸಳೆ ಭೂಮಿತಾಯಿಯನ್ನು ಪ್ರತಿನಿಧಿಸುವ ದೇವತೆ ಎಂದು ನಂಬಲಾಗಿದೆ. ಸ್ಥಳೀಯ ನಾಯಕನೊಂದಿಗೆ ಆಕೆಯ ವಿವಾಹವಾಗುವುದನ್ನು ಮಾನವ ಮತ್ತು ದೈವಿಕ ಬಾಂಧವ್ಯದ ಸಂಕೇತವೆಂಬ ನಂಬಿಕೆ ಅಲ್ಲಿ ರೂಢಿಯಲ್ಲಿದೆಯಂತೆ.

ಇದನ್ನೂ ಓದಿ: Free current Scheme: ಫ್ರೀ ಕರೆಂಟ್ ಜಾರಿ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಗುಡ್ ನ್ಯೂಸ್ !! ಸಚಿವ ಜಾರ್ಜ್ ಘೋಷಣೆ !!

Leave A Reply

Your email address will not be published.