Locker Rules: ಬ್ಯಾಂಕ್ ಲಾಕರ್ ನಿಯಮಗಳು ಬದಲಾಗಿವೆ; ಆರ್‌ಬಿಐ ನಿಯಮ ಏನು? ಒಪ್ಪಂದ ನವೀಕರಿಸುವ ಮೊದಲು ಇದನ್ನು ಓದಿ!

Bank locker rules have changed

Locker Rules: ಡಿ.31, 2023 ರೊಳಗೆ ಬ್ಯಾಂಕ್‌ ಲಾಕರ್‌ ಒಪ್ಪಂದಗಳ ನವೀಕರಣ (Bank Locker Agreement Rules)ಗೆ ಡೆಡ್‌ಲೈನ್‌ ನಿಗದಿಪಡಿಸಲಾಗಿದೆ. ಈ ಸಮಯದೊಳಗೆ ಎಲ್ಲಾ ಬ್ಯಾಂಕ್‌ಗಳು ಬ್ಯಾಂಕ್‌ ಲಾಕರ್‌ ಒಪ್ಪಂದ ರಿನಿವಲ್‌ ಮಾಡಲು ತಿಳಿಸಲಾಗಿದೆ. ಹಾಗಾಗಿ ಈ ಪ್ರಕ್ರಿಯೆ ಹಂತ ಹಂತವಾಗಿ ಮಾಡಲು ಹೇಳಲಾಗಿದೆ. ಅಂದರೆ ಜೂ.30ಕ್ಕೆ ಶೇ.50 ಮತ್ತು ಸೆಪ್ಟೆಂಬರ್‌ 30 ಕ್ಕೆ ಶೇ.75 ರಷ್ಟು ರಿನೀವಲ್‌ ಪ್ರಕ್ರಿಯೆ ಮುಗಿಸಲು ಕೋರಲಾಗಿದೆ.

ಸುಪ್ರೀಂಕೋರ್ಟ್‌ 2021 ಫೆಬ್ರವರಿಯಲ್ಲಿ ಆರ್‌ಬಿಐಗೆ ಲಾಕರ್‌ ನಿರ್ವಹಣೆಯ ನಿಯಮ ಅಂತಿಮ ಗೊಳಿಸಲು ನಿರ್ದೇಶ ನೀಡಿತ್ತು. ಐಬಿಎ (ಭಾರತೀಯ ಬ್ಯಾಂಕುಗಳ ಸಂಸ್ಥೆ) ಲಾಕರ್‌ ಒಪ್ಪಂದ ಅಳವಡಿಸಿಕೊಳ್ಳಲು ನೋಟಿಫಿಕೇಶನ್‌ನಲ್ಲಿ ತಿಳಿಸಿದೆ.

ಅಂದ ಹಾಗೆ ಹೊಸ ಲಾಕರ್‌ ಒಪ್ಪಂದಕ್ಕೆ ಗ್ರಾಹಕರಿಂದ ಶುಲ್ಕ ಪಡೆಯುವಂತಿಲ್ಲ. ಛಾಪಾ ಕಾಗದದ ಮೇಲೆ ಹೊಸ ಲಾಕರ್‌ ಒಪ್ಪಂದ ಮಾಡಲು ಹೇಳಲಾಗಿದೆ. ಎಷ್ಟು ಬೆಲೆಯ ಸ್ಟ್ಯಾಂಪ್‌ ಪೇಪರ್‌ ಬೇಕು ಎಂಬುವುದನ್ನು ಇನ್ನು ಕೂಡಾ ಆರ್‌ಬಿಐ ಹೇಳಿಲ್ಲ. ಈ ವಿಷಯದ ಬಗ್ಗೆ ಇನ್ನೂ ಗೊಂದಲ ಇದೆ. ಗ್ರಾಹಕರಿಗೆ ಲಾಕರ್‌ ನೀಡುವಾಗ ನಿಶ್ಚಿತ ಠೇವಣಿ ಇಡಬೇಕು. ಸೆಕ್ಯೂರಿಟಿ ಡಿಪಾಸಿಟ್‌ ರೀತಿ. ಮೂರು ವರ್ಷದ ಬಾಡಿಗೆ, ಲಾಕರ್‌ ಓಪನ್‌ ಮಾಡಲು ಇರುವ ಶುಲ್ಕ ಇಷ್ಟು ಎಫ್‌ ಡಿ ರೂಪದಲ್ಲಿ ಇಡಬೇಕಾಗುತ್ತದೆ.

ಯಾವುದೇ ಗ್ರಾಹಕ ಬ್ಯಾಂಕ್‌ ಲಾಕರ್‌ ಹೊಂದಿದ್ದರೆ, ಮತ್ತು ಬಹಳಷ್ಟು ಕಾಲ ಲಾಕರ್‌ ಬಳಸದೇ ಹೋದರೆ, ಅಥವಾ ಬಾಡಿಗೆ ಕೊಡದಿದ್ದರೆ ಆಗ ಈ ಲಾಕರ್‌ ತೆರೆಯುವ ಹಕ್ಕು ಬ್ಯಾಂಕ್‌ಗಳು ಹೊಂದಿರುತ್ತದೆ. ಅಂದ ಹಾಗೆ ಕೆಲ ಬ್ಯಾಂಕುಗಳು ಮುಂಗಡವಾಗಿಯೇ ಬಾಡಿಗೆಯ ಅವಧಿಯನ್ನು ಪಡೆದುಕೊಂಡಿರುತ್ತದೆ.

ಕಳ್ಳತನ, ದರೋಡೆ, ಕಟ್ಟಡ ಕುಸಿತ, ಸಿಬ್ಬಂದಿ ವಂಚನೆ ಇತ್ಯಾದಿ ಸಮಸ್ಯೆಗಳು ಉಂಟಾದರೆ ಬ್ಯಾಂಕ್‌ ಗ್ರಾಹಕರಿಗೆ ಪರಿಹಾರ ಕೊಡಬೇಕು. ಅಂದರೆ ಈ ಎಲ್ಲಾ ಸಮಸ್ಯೆಗೆ ಬ್ಯಾಂಕ್‌ ಹೊಣೆಗಾರ ಎಂದರ್ಥ. ಲಾಕರ್​ನ ವಾರ್ಷಿಕ ಬಾಡಿಗೆಯ 100 ಪಟ್ಟು ಮೊತ್ತವನ್ನು ಗ್ರಾಹಕರಿಗೆ ಕೊಡಬೇಕಾಗುತ್ತದೆ. ಮಳೆ ಪ್ರವಾಹ ಸಿಡಿಲು, ಸಾರ್ವಜನಿಕ ಗಲಭೆ, ಹಿಂಸಾಚಾರ, ಭೂಕಂಪ, ಭಯೋತ್ಪಾದನೆ ದಾಳಿ ಇವೆಲ್ಲ ಕಾರಣದಿಂದ ಬ್ಯಾಂಕ್‌ ಲಾಕರ್‌ ಹಾಳಾದರೆ ಅದಕ್ಕೆ ಬ್ಯಾಂಕ್‌ ಹೊಣೆ ಅಲ್ಲ. ಒಂದು ವೇಳೆ ಗ್ರಾಹಕರ ಅಜಾಗರೂಕತೆಯಿಂದಲೂ ಲಾಕರ್‌ ಹಾಳದರೆ ಅದಕ್ಕೆ ಬ್ಯಾಂಕ್‌ ಕಾರಣ ಅಲ್ಲ, ಹೊಣೆ ಅಲ್ಲ. ಗ್ರಾಹಕರು ಲಾಕರ್‌ ಬಳಕೆಗೆ ದಿನಾಂಕ, ಸಮಯ ನಿಗದಿ ಮಾಡಬೇಕು. ಇದಕ್ಕಾಗಿ ತಮ್ಮ ಇಮೇಲ್‌ ಐಡಿ, ಮೊಬೈಲ್‌ ನಂಬರ್‌ ನೀಡಿ ಗ್ರಾಹಕ ಇದನ್ನು ನೊಂದಾಯಿಸಬೇಕಾಗುತ್ತದೆ.

 

ಇದನ್ನು ಓದಿ: Dakshina Kannada: ಕರಾವಳಿಯಲ್ಲಿ ಸದ್ದಿಲ್ಲದೇ ನೈತಿಕ ಪೊಲೀಸ್‍ಗಿರಿ: ಅನ್ಯಕೋಮಿನ 3 ಯುವಕರ ಮೇಲೆ ಹಲ್ಲೆ, ಪೊಲೀಸರ ವಶಕ್ಕೆ 

 

 

Leave A Reply

Your email address will not be published.