‘ಆವು ಶೆಟ್ರೆ ‘ ಪದದಿಂದಲೇ ಲಿಪಿ ಇಲ್ಲದ ಸೂಳೆ ಭಾಷೆಯಾಯ್ತು ‘ತುಳು’ : ಸಾಮಾಜಿಕ ಜಾಲತಾಣದಲ್ಲಿ ರೊಚ್ಚಿಗೆದ್ದ ತುಳುವರು !

Rakshit Shetty : ” ತುಳು ಭಾಷೆ ನಿಮ್ಮ ಮಂಗಳೂರಿನಲ್ಲಿರಲಿ, ಶಾಟ ನಾಡು ಅದು, ಲಿಪಿ ಇಲ್ಲದ ಸೂಳೆ ಭಾಷೆ ಮಾತನಾಡುವ ನೀವು ಸೂಳೆ ಮಕ್ಕಳು ” ಎನ್ನುವ ಕಿಡಿಗೇಡಿಯೊಬ್ಬನ ಅದೊಂದು ಅವಾಚ್ಯ, ಅವಹೇಳನಕಾರಿಯಾದ ಚಾಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕರಾವಳಿಗರ ನಿದ್ದೆಗೆಡಿಸಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.

ಕನ್ನಡ ಸಿನಿಮಾ ರಂಗದಲ್ಲಿ(Sandalwood Film Industry) ತುಳುವರು ಈಗಾಗಲೇ ಹೆಸರುಗಳಿಸಿದ್ದು, ಕನ್ನಡ ಚಿತ್ರರಂಗದಲ್ಲಿ ತುಳುವರ ಕೊಡುಗೆಯೂ ಅಪಾರವಿದೆ ಎನ್ನುವ ಬಗ್ಗೆ ಹಲವಾರು ಸಮಯಗಳಿಂದ ಕೆಲವರಿಗೆ ಕೊಂಚ ಹೊಟ್ಟೆಯುರಿ ಇದೆಯಂತೆ. ಇದೇ ಕಾರಣಕ್ಕಾಗಿ ತುಳು ಹಾಗೂ ತುಳುವರನ್ನು(Tuluvas) ಕೆಟ್ಟದಾಗಿ ಹೀಯಾಳಿಸಿದ ಕೆಲವರು ಸದ್ಯ ಕನ್ನಡದ ಸೋದರಿ ತುಳು ಭಾಷೆಗೆ ಅವಹೇಳನ ನಡೆಸಿದ್ದು ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದು, ‘ ಆವು ಶೆಟ್ರೆ ‘ ಅಂದಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಎನ್ನಲಾಗಿದೆ.

ಏನಿದು ‘ಆವು ಶೆಟ್ರೆ’?

ಕೆಲ ಸಮಯಗಳ ಹಿಂದೆ ಪಂಚ ಭಾಷೆಯಲ್ಲಿ ತೆರೆಕಂಡಿದ್ದ ಕೆ.ಜಿ.ಎಫ್ ಸಿನಿಮಾದಲ್ಲಿ(KGF Cinema) ನಾಯಕಿ ನಟಿಯಾಗಿ ಅಭಿನಯಿಸಿದ್ದ ತುಳುವೆದಿ ಶ್ರೀ ನಿಧಿ ಶೆಟ್ಟಿ(Srinidhi Shetty) ತಮ್ಮದೊಂದು ಫೋಟೋ ವನ್ನು ‘ ಹಾಗೇ ಸುಮ್ಮನೆ ‘ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದಕ್ಕೆ ತುಳುವ, ಕನ್ನಡದ ಹೆಸರಾಂತ ನಟ ಉಡುಪಿ ಮೂಲದ ರಕ್ಷಿತ್ ಶೆಟ್ಟಿ(Rakshit Shetty) ‘ ಆವು ಶೆಟ್ರೆ ‘ ಎಂದು ರಿಪ್ಲೇ ಕೊಟ್ಟಿದ್ದರು. ಅಂದರೆ, ಅದರರ್ಥ ‘ ಆಯಿತು ಶೆಟ್ರೆ ‘ ಎಂದು.

ಇದಕ್ಕೆ ರೋಹನ್ ಯಶ್ ಎನ್ನುವ ಹೆಸರಿನಲ್ಲಿ ಫೇಕ್ ಅಕೌಂಟ್ (?!) ಒಂದನ್ನು ನಡೆಸಿಕೊಂಡಿರುವ ವ್ಯಕ್ತಿಯೊಬ್ಬ ಬಾಯಿಗೆ ಬಂದಂತೆ ಬರೆದು ಹಾಕಿದ್ದಾನೆ. ಇಂತಹ ಮಾತುಗಳನ್ನು ನಿಮ್ಮ ಶಾಟನಾಡು ಮಂಗಳೂರಿನಲ್ಲಿಡಿ, ಲಿಪಿ ಇಲ್ಲದ ಸೂಳೆ ಭಾಷೆ ತುಳು, ಮಂಗಳೂರಿನಲ್ಲಿ ಒಂದೇ ಒಂದು ಕನ್ನಡ ಸಿನಿಮಾಕ್ಕೆ ಅಭಿಮಾನಿಗಳಿಲ್ಲದ ಕಾರಣ ನೀವೆಲ್ಲಾ ಬೆಂಗಳೂರು ಸೇರಿದ್ದೀರಿ ಎಂದೆಲ್ಲಾ ತೀರಾ ಅವಾಚ್ಯವಾಗಿ ಚಾಟ್ ನಡೆಸಿದ್ದಾನೆ.

ಸದ್ಯ ಈ ಬಗ್ಗೆ ತುಳುವರು ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆಲ್ಲಾ ಮೂಲ ಕಾರಣ ಸರಕಾರ ಎಂದಿದೆ. ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಕಲ್ಪಿಸಿಕೊಡಿ ಎನ್ನುವ ಹಲವಾರು ವರ್ಷಗಳ ಬೇಡಿಕೆ ಇನ್ನೂ ಈಡೇರಿಸಿಲ್ಲ. ಕೆಲ ದಿನಗಳ ಹಿಂದೆ ಸಮಿತಿ ರಚಿಸಿ ವರದಿ ತರಿಸಿಕೊಂಡರೂ ಈ ವರೆಗೆ ಯಾವುದೇ ಸುದ್ದಿಯಿಲ್ಲ ಎಂದಿದ್ದಾರೆ.

ತುಳು ನಾಡು ಹಾಗೂ ತುಳು ಭಾಷೆಗೆ ವಿಧಾನಸಭೆಯಲ್ಲೇ ಅವಹೇಳನ ನಡೆದರೂ ತುಳುನಾಡಿದ ಏಕೈಕ, ಮುಸ್ಲಿಂ ಸಮುದಾಯದ ಶಾಸಕ ಧ್ವನಿ ಎತ್ತಿದ್ದು, ಇತರ ಶಾಸಕರು ನಾಲಗೆ ಇದ್ದೂ ಬಾಯಿ ಬರದಂತಿದ್ದರು. ಇವರಿಂದಲೇ ಇದೆಲ್ಲಾ ಆಗುತ್ತಿದೆ, ಹೀಗೆ ಮುಂದುವರಿದರೆ ತುಳು ಭಾಷೆ ಹಾಗೂ ತುಳುವರಿಗೆ ಸ್ಥಾನಮಾನ ಬಿಡಿ, ಮಾನವೇ ಇಲ್ಲದಂತಾಗುತ್ತದೆ ಎನ್ನುವ ಆಕ್ರೋಶದ ಮಾತುಗಳು ತುಳುವರಿಂದ ಕೇಳಿಬಂದಿದೆ.

Leave A Reply

Your email address will not be published.