Online Marriage: ಅಮೆರಿಕಾದಲ್ಲಿರುವ ವಧು-ವರರಿಗೆ ಭಾರತದಲ್ಲಿ ಮದುವೆ! ಹಲವು ವಿಶೇಷತೆಗೆ ಸಾಕ್ಷಿಯಾಯ್ತು ಈ ಆನ್ಲೈನ್ ಮ್ಯಾರೇಜ್!

Online Marriage :ಕೋವಿಡ್ ನಂತರದ ದಿನಗಳಲ್ಲಿ ಈ ಆನ್​ಲೈನ್ (Online) ಮೂಲಕ ಮಾಡುವ ಕೆಲಸಗಳು ಹೆಚ್ಚಾಗುತ್ತಿದೆ. ಏನೇ ಮಾಡೋದಾದ್ರೂ ಆನ್ಲೈನ್ ಆನ್ಲೈನ್ ಅನ್ನುವಂತಾಗಿದೆ. ಮದುವೆ, ಮುಂಜಿಗಳು ಕೂಡ ಇದಕ್ಕೆ ಹೊರತಾಗಿಲ್ಲ. ಈಗಾಗಲೇ ಅನೇಕ ನಿಶ್ಚಿತಾರ್ಥಗಳು ಕೂಡ ಆನ್ಲೈನ್ ಮುಖೇನ ಆದದ್ದನ್ನು ನೋಡಿದ್ದೇವೆ. ಅಂತೆಯೇ ಇಲ್ಲೊಂದೆಡೆ ಆನ್​ಲೈನ್​ನಲ್ಲೇ ಮದುವೆ (Online Marriage) ನಡೆದಿದ್ದು, ವದು ವರರು ವಿದೇಶದಲ್ಲಿ (America) ಸಂಭ್ರಮ ಮಾತ್ರ ಭಾರತದಲ್ಲಿ ಎನ್ನುವಂತಾಗಿದೆ.

ಹೌದು, ಮಾರ್ಚ್​ 19ರಂದು ಹರಿಯಾಣದ ಕರ್ನಾಲ್​ ನಿವಾಸಿ ಅಶು ಎಂಬ ಯುವತಿ ಸೋನಿಪತ್​ನ (Sonipat) ಅಮಿತ್​ ಎಂಬವವರೊಡನೆ ವಿವಾಹವಾಗಿದ್ದಾರೆ. ವಿಶೇಷವೆಂದರೆ ವದು ವರರು ಅಮೆರಿಕಾದಲ್ಲಿದ್ದರೆ (America)ಮದುವೆ ನಡೆದಿದ್ದು ಮಾತ್ರ ಭಾರತದಲ್ಲಿ ಎನ್ನುವುದು ವಿಶೇಷ. ಅಲ್ಲದೆ ಆಶು ಮತ್ತು ಅಮಿತ್ ಅವರು ಹರಿಯಾಣ ಸಂಪ್ರದಾಯದಲ್ಲೇ ವಿವಾಹವಾಗಿದ್ದಾರೆ.

ಅಂದಹಾಗೆ ಆನ್ಲೈನ್ ನಲ್ಲಿ ನಡೆದ ಈ ಮದುವೆಯು ಅತ್ಯಂತ ವಿಜೃಂಭಣೆಯಿಂದ ನೆರವೇರಿದೆ. ಹರಿಯಾಣದಲ್ಲಿ ಕುಟುಂಬಸ್ಥರು ವಿವಾಹ ಪೂರ್ವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನೆರೆವೇರಿಸಿದ್ದಾರೆ. ಹರಿಯಾಣದ ಸಂಪ್ರದಾಯದಂತೆ ಸೋನಿಪತ್​ನಿಂದ ವರನ ಕಡೆಯವರು ಕರ್ನಾಲ್ ವರೆಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಿದರು. ಇತ್ತ ವಧುವಿನ ಕಡೆಯವರೂ ಕೂಡ ಮೆರವಣಿಗೆ ನಡೆಸಿ ಕಲ್ಯಾಣ ಮಂಟಪಕ್ಕೆ ಬಂದಿದ್ದಾರೆ. ವಧು-ವರರು ಮಾತ್ರ ವಿದೇಶದಲ್ಲಿ ಕುಳಿತು ಇದನ್ನೆಲ್ಲಾ ಟಿವಿ ಮುಖಾಂತರ ವೀಕ್ಷಣೆ ಮಾಡಿದ್ದಾರೆ.

ಮದುವೆ ನಿಶ್ಚಯವಾದ ನಂತರ ಕಾರಣಾಂತರಗಳಿಂದ ವಧು-ವರರು ಅಮೆರಿಕಾದಿಂದ ಭಾರತಕ್ಕೆ ಬರುವುದಕ್ಕೆ ಸಾಧ್ಯವಾಗಿರಲಿಲ್ಲ. ನಂತರ ಮದುವೆಯ ಎಲ್ಲಾ ವಿಧಿವಿಧಾನಗಳನ್ನು ಆನ್‌ಲೈನ್‌ನಲ್ಲಿ ಮಾಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ. ಇದಕ್ಕಾಗಿ ಹೈ ಸ್ಪೀಡ್ ಇಂಟರ್​ನೆಟ್​ನೊಂದಿಗೆ ಟಿವಿ ಸ್ಕ್ರೀನ್​ ವ್ಯವಸ್ಥೆ ಮಾಡವಾಗಿದೆ. ಮದುವೆಯ ಬಳಿಕ ನವ ದಂಪತಿಗಳು ಟಿವಿ ಪರದೆಯ ಮೂಲಕವೇ ಆಶೀರ್ವಾದ ಪಡೆದುಕೊಂಡರು.

ಇದಕ್ಕೂ ಮುನ್ನ ವರನ ಸಂಬಂಧಿಕರು ಸೋನಿಪತ್‌ನ ಖಾಸಗಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ಟೀಕಾ ಮತ್ತು ನಿಶ್ಚಿತಾರ್ಥ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಧುವಿನ ಕುಟುಂಬದವರು ಅಲ್ಲಿಗೆ ತೆರಳಿ ಟೀಕಾ ಸಂಪ್ರದಾಯವನ್ನು ಪೂರ್ಣಗೊಳಿಸಿ ಬಂದಿದ್ದರು. ಇನ್ನು ವಧುವಿನ ಕೆಲವು ಸಂಬಂಧಿಕರು ಅಮೆರಿಕಾದಲ್ಲಿ ವಾಸಿಸುತ್ತಿದ್ದು, ಅವರು ಅಲ್ಲಿ ಅರಿಶಿನ ಶಾಸ್ತ್ರ, ಸಪ್ತಪದಿ ತುಳಿಸುವುದು ಸೇರಿದಂತೆ ಹಲವು ವಿವಾಹದ ವಿಧಿವಿಧಾನಗಳನ್ನು ಪುರೋಹಿತರ ಸಲಹೆಯಂತೆ ನೆರೆವೇರಿಸಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಇನ್ನು ಅಮೆರಿಕಾದಲ್ಲಿ ಅಮಿತ್ ಲಾಕ್ರಾ ಮತ್ತು ಕರ್ನಾಲ್‌ನ ಆಶು ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮಿತ್ 2014ರಲ್ಲಿ ಮಲೇಷ್ಯಾದಲ್ಲಿ ಮರ್ಚೆಂಟ್ ನೇವಿ ಸೇರಿದ್ದರು. ನಂತರ ಅವರು ವಿವಿಧ ದೇಶಗಳಲ್ಲಿ ಕೆಲಸ ಮಾಡಿದ್ದರು. 2017ರಿಂದ ಅವರೇ ಟ್ರ್ಯಾಕಿಂಗ್ ಕಂಪನಿಯನ್ನು ಸ್ಥಾಪಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಆಶು ಕೂಡ ತನ್ನ ಸ್ವಂತ ಕಂಪನಿ ಹೊಂದಿದ್ದು, ಅಮೆರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಇಬ್ಬರೂ ಭೇಟಿಯಾಗಿ ಪ್ರೇಮವಾಗಿ ವಿವಾಹವಾಗಲು ನಿರ್ಧರಿಸಿದ್ದಾರೆ. ಇದಕ್ಕೆ ಇಬ್ಬರ ಮನೆಯವರೂ ಒಪ್ಪಿಗೆ ಸೂಚಿಸಿದ್ದಾರೆ. ಆನ್‌ಲೈನ್ ಮೂಲಕವೇ ಅಮಿತ್- ಆಶು ಜೋಡಿಯ ಸಂಬಂಧಿಕರು ಕೂಡಾ ಪರಸ್ಪರ ಪರಿಚಯವಾಗಿದ್ದರು. ಕೊನೆಗೆ ಆನ್​ಲೈನ್​ನಲ್ಲೇ ವಿವಾಹವನ್ನು ನೆರವೇರಿಸಿದ್ದಾರೆ.

ಇದನ್ನೂ ಓದಿ: Golden Tooth: ಇಲ್ಲಿದೆ ನೋಡಿ ಚಿನ್ನದ ಹಲ್ಲಿನ ಚಂದದ ಹುಲಿ!ಕೋರೆಹಲ್ಲು ಮುರಿದುಕೊಂಡ ವ್ಯಾಘ್ರಕ್ಕೆ ಚಿನ್ನದ ಹಲ್ಲು ಅಳವಡಿಸಿದ ವೈದ್ಯರು!

Leave A Reply

Your email address will not be published.