Research : ಮಂಗಳ ಗ್ರಹದಲ್ಲಿ ಬದುಕಲು ಈ ಮೂರು ವಸ್ತು ಇದ್ರೆ ಸಾಕು!
Research : ಇತರ ಯಾವುದೇ ಗ್ರಹಗಳಲ್ಲಿ(planets) ಮಾನವರು ವಾಸಿಸಲು ಅನುಕೂಲಕರವಾದ ಸ್ಥಳಗಳು(place) ಇದಿಯ ಎಂಬುದರ ಬಗ್ಗೆ ಹಲವು ವರ್ಷಗಳಿಂದ ವಿಜ್ಞಾನಿಗಳು(scientist) ಸಂಶೋಧನೆಗಳನ್ನು (investigation)ಮಾಡುತ್ತಿದ್ದಾರೆ. ಈ ಸಂಶೋಧನೆಯ (Research) ವೇಳೆಯಲ್ಲಿ ಮಂಗಳ ಗ್ರಹದಲ್ಲಿ ಭೂಮಿಯಂತಹ ವಾತಾವರಣವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಗ್ರಹವು ಕಣಿವೆಗಳು, ಜ್ವಾಲಾಮುಖಿಗಳು(valcanoerupts) ಮತ್ತು ಒಣ ಸರೋವರದಲ್ಲಿ ಕಲ್ಲಿನ ಮೇಲ್ಮೈಯನ್ನು ಹೊಂದಿದೆ. ಅಲ್ಲಿರುವ ಹವಾಮಾನದಲ್ಲಿಯೂ(weather condition) ಜನರು ಗೃಹ ಕಟ್ಟಲು ಬಳಸಬಹುದಾದ ಹೊಸ ವಸ್ತುವೊಂದನ್ನು ಬ್ರಿಟಿಷ್(British) ವಿಜ್ಞಾನಿಗಳು ಇತ್ತೀಚೆಗೆ ಕಂಡುಹಿಡಿದಿದ್ದಾರೆ.
‘ಸ್ಟಾರ್‌ಕ್ರೀಟ್’ (star creet)ಎಂಬ ಹೊಸ ವಸ್ತುವನ್ನು ಯುಕೆ ಸಂಶೋಧಕರ ತಂಡವು ಇಂದು ರಚಿಸಿದೆ. ಇದನ್ನು ಭೂಮಿಯಲ್ಲಿರುವ ಹೊರಗಿನ ಧೂಳು, ಆಲೂಗೆಡ್ಡೆ ಪಿಷ್ಟ ಮತ್ತು ಉಪ್ಪಿನಿಂದ ತಯಾರಿಸಲಾಗುತ್ತದೆ. ಇದನೆಲ್ಲ ಬಳಸಿಕೊಂಡು ಮಂಗಳ ಗ್ರಹದ (mars)ಮೇಲೆ ಮನೆಗಳನ್ನು ನಿರ್ಮಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಯುಕೆ ಸಂಶೋಧಕರು ರಚಿಸಿದಂತಹ ಹೊಸ ಸ್ಟಾರ್ ಕ್ರೀಟ್ ವಸ್ತುವಿನ ವೈಶಿಷ್ಟ್ಯಗಳು(features) ಯಾವ ರೀತಿ ಇದೆ ಎಂದು ತಿಳಿಯೋಣ ಬನ್ನಿ.
ತಾರಾಮಂಡಲದಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುವುದು ಕಷ್ಟಕರವಾದ ಕೆಲಸವಾಗಿದೆ ಹಾಗೂ ತುಂಬಾನೇ ದುಬಾರಿ ಎನ್ನಬಹುದು. ಆದರೆ ಮ್ಯಾಂಚೆಸ್ಟರ್ ಎನ್ನುವ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು ಸ್ಟಾರ್ಕ್ರೀಟ್ ಈ ಸಮಸ್ಯೆಗೆ ಪರಿಹಾರವನ್ನು ಹುಡುಕಿದ್ದಾರೆ. ಆಲೂಗೆಡ್ಡೆ ಪಿಷ್ಟ, ಒಂದು ಚಿಟಿಕೆ ಉಪ್ಪು ಮತ್ತು ಮಂಗಳ ಗ್ರಹದಲ್ಲಿ ಕಂಡುಬರುವ ಜೇಡಿಮಣ್ಣನ್ನು ಸಂಯೋಜಿಸಿ ಸಾಮಾನ್ಯ ಕಾಂಕ್ರೀಟ್ಗಿಂತ(concrete) ಎರಡು ಪಟ್ಟು ಬಲವಾದ ವಸ್ತುವನ್ನು ರಚಿಸಲಾಯಿತು. ಈ ವಸ್ತುವಿನೊಂದಿಗೆ ಭೂಮ್ಯತೀತ ಪರಿಸರದಲ್ಲಿ (nature)ನಿರ್ಮಾಣಗಳನ್ನು ಮಾಡಬಹುದು ಎಂದು ತಿಳಿಸಿದ್ದಾರೆ.
ಈ ಸಂಶೋಧನೆಯಲ್ಲಿ ಆಲೂಗೆಡ್ಡೆ ಪಿಷ್ಟವು ಕಾಂಕ್ರೀಟ್ ತರಹದ ವಸ್ತುವನ್ನು ಉತ್ಪಾದಿಸಲು ಸಿಮ್ಯುಲೇಟೆಡ್ ಮಾರ್ಸ್ (simulated Mars)ಧೂಳಿನೊಂದಿಗೆ ಬೆರೆಸಿದಾಗ ಇದು ಬೈಂಡರ್ ಆಗಿ ಕಾರ್ಯನಿರ್ವಹಿಸುತ್ತದೆ. ಪರೀಕ್ಷಿಸಿದಾಗ ಶಾರ್ಟ್‌ಕ್ರೀಟ್ 72 ಮೆಗಾಪಾಸ್ಕಲ್‌ಗಳ (MPa) ಸಂಕುಚಿತ ಶಕ್ತಿಯನ್ನು ಹೊಂದಿದೆ. ಇದು ಸಾಮಾನ್ಯ ಕಾಂಕ್ರೀಟ್ನಲ್ಲಿ ಕಂಡುಬರುವ 32 MPa ಗಿಂತ ಎರಡು ಪಟ್ಟು ಹೆಚ್ಚು. ಚಂದ್ರನ ಧೂಳಿನಿಂದ ಮಾಡಿದ ಸ್ಟಾರ್ಕ್ರೀಟ್ 91 MPa ಗಿಂತ ಬಲವಾಗಿರುತ್ತದೆ.ಈ ಸಂಶೋಧನೆಗೆ ಸಂಬಂಧಿಸಿದ ಮಾಹಿತಿಯನ್ನು ಓಪನ್ ಎಂಜಿನಿಯರಿಂಗ್ ಜರ್ನಲ್‌ನಲ್ಲಿ (journal)ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯದ ಫ್ಯೂಚರ್ ಬೈಯೋ ಮ್ಯಾನುಫ್ಯಾಕ್ಚರಿಂಗ್(manufacturing) ರಿಸರ್ಚ್ ಹಬ್ ನ ಪ್ರಮುಖ ಸಂಶೋಧಕರಾದ ಡಾಕ್ಟರ್ ಅಲೆಡ್ ರಾಬರ್ಟ್ಸ್ ಗನಯಾತ್ರಿಗಳಿಗೆ ಆಹಾರವಾಗಿ ಪಿಷ್ಟವನ್ನು ಉತ್ಪಾದಿಸಲಾಗುವುದು ಎಂದು ತಿಳಿಸಿದ್ದಾರೆ. ಇದು ಮಾನವ ರಕ್ತಕ್ಕಿಂತ ಹೆಚ್ಚಾಗಿ ಬಂಧಿಸುವ ಏಜೆಂಟ್ ಎಂದು ಹೇಳಬಹುದಾಗಿದೆ. ಪ್ರಸ್ತುತ ನಿರ್ಮಾಣ ತಂತ್ರಜ್ಞಾನಗಳಿಗೆ ಇನ್ನೂ ಸಾಕಷ್ಟು ಅಭಿವೃದ್ಧಿ ಬೇಕು ಎಂದು ನಂಬಲಾಗಿದೆ. ಗಮನಯುತವಾದ ಶಕ್ತಿ ಮತ್ತು ಹೆಚ್ಚು ಸಂಸ್ಕರಣಾ ಸಾಧನಗಳ ಅಗತ್ಯವಿರುತ್ತದೆ. ಇವೆಲ್ಲವೂ ಮಿಷನ್‌ಗೆ ವೆಚ್ಚವನ್ನು ಸೇರಿಸುತ್ತವೆ ಎಂದು ಅವರು ಹೇಳಿದರು. ಸ್ಟಾರ್‌ಕ್ರೀಟ್‌ಗೆ ಇದ್ಯಾವುದೂ ಅಗತ್ಯವಿಲ್ಲ, ಆದ್ದರಿಂದ ಇದು ಕಾರ್ಯಾಚರಣೆಯನ್ನು ಸುಲಭಗೊಳಿಸುತ್ತದೆ ಎಂದು ವಿಜ್ಞಾನಿ ಧೀಮಾ (dheema)ಹೇಳುತ್ತಾರೆ.
ರಾಬರ್ಟ್ಸ್‌ನ (Roberts)ಹೊಸದಾಗಿ ಪ್ರಾರಂಭಿಸಲಾದ ಸ್ಟಾರ್ಟ್-ಅಪ್ ಡೀಕಿನ್‌ಬಯೋ(dikin bio) ಸ್ಟಾರ್‌ಕ್ರೀಟ್ ಅನ್ನು ಇನ್ನಷ್ಟು ಸರಿಪಡಿಸುವ ಮಾರ್ಗಗಳನ್ನು ಹುಡುಕುತ್ತಿದೆ. ಭೂಮಿಯಲ್ಲಿ ಇದನ್ನು ಬಳಸಲಾಗುತ್ತದೆ. ಸಾಮಾನ್ಯ ಒಲೆಯಲ್ಲಿ ಅಥವಾ ಮೈಕ್ರೊವೇವ್‌ನಲ್ಲಿ ಕಾಮನ್ ‘ಹೋಮ್ ಬೇಕಿಂಗ್’ ತಾಪಮಾನದಲ್ಲಿ ಇದನ್ನು ತಯಾರಿಸಬಹುದು. ಆದ್ದರಿಂದ, ಉತ್ಪಾದನೆಯ ವೆಚ್ಚ ಮತ್ತು ಜಾಗತಿಕ ಇಂಗಾಲದ ಡೈಆಕ್ಸೈಡ್ (CO2) ಹೊರಸೂಸುವಿಕೆಯ ನಿಯಂತ್ರಣವು ತೀವ್ರವಾಗಿ ಕಡಿಮೆಯಾಗುತ್ತದೆ ಎಂದು ಬ್ರಿಟಿಷ್ ವಿಜ್ಞಾನಿಗಳು (British scientist)ತಿಳಿಸಿಕೊಟ್ಟಿದ್ದಾರೆ.