Viral Video: ಜಗನ್ನಾಥ ದೇವರ ಮುಂದೆ ತಲೆ ಬಾಗಿ ನಮಸ್ಕರಿಸಿದ ಕೋಳಿ; ವೀಡಿಯೋ ವೈರಲ್
Viral Video: ಜಪಾನ್‌ನಲ್ಲಿ ಜಿಂಕೆಗಳು ಪ್ರವಾಸಿಗರಿಗೆ ನಮಸ್ಕರಿಸುತ್ತಿರುವ ವೀಡಿಯೊ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದ ನಂತರ, ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಮತ್ತೊಂದು ಕ್ಲಿಪ್ ಸಖತ್ ವೈರಲ್ ಆಗಿದೆ. ಇಲ್ಲಿ ಕೋಳಿ ತನ್ನ ತಲೆಯನ್ನು ಬಾಗಿ ನಮಸ್ಕರಿಸುತ್ತದೆ. ಈ ದೃಶ್ಯ ಸೆರೆ ಹಿಡಿಯಲಾಗಿದೆ. ಆದರೆ ಈ ಪವಾಡ ನಡೆದಿರುವುದು ಜನರ ಮುಂದೆ ಅಲ್ಲ, ಒಡಿಶಾದ ಅಜ್ಞಾತ ಸ್ಥಳದಲ್ಲಿ ಇರಿಸಲಾಗಿರುವ ಭಗವಾನ್ ಜಗನ್ನಾಥನ ಸುಂದರವಾದ ವಿಗ್ರಹದ ಮುಂದೆ.
ಜಗನ್ನಾಥ ಸ್ವಾಮಿಯ ಆಶೀರ್ವಾದ ಪಡೆಯಲು ಕೋಳಿ ನಮಸ್ಕರಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಭಗವಾನ್ ಜಗನ್ನಾಥನ ವಿಗ್ರಹದ ಮುಂದೆ ಕೋಳಿಯೊಂದು ನಮಸ್ಕರಿಸುತ್ತಿರುವುದನ್ನು ತೋರಿಸುವ ಕ್ಲಿಪ್ ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗಳಾದ್ಯಂತ ಅನೇಕರ ಹೃದಯ ಗೆದ್ದಿದೆ.
View this post on Instagram
ಎತ್ತರದ ವೇದಿಕೆಯಲ್ಲಿ ಪುರಿ ಜಗನ್ನಾಥನ ವಿಗ್ರಹವನ್ನು ಇರಿಸಿದ್ದು, ಎಲೆಗಳು ಮತ್ತು ಹೂವುಗಳಿಂದ ವಿಗ್ರಹವನ್ನು ಸಿಂಗರಿಸಲಾಗಿದೆ. ಭಗವಂತನ ಸುಂದರವಾದ ವಿಗ್ರಹವು ದೈವಿಕತೆ ಮತ್ತು ಶಾಂತಿಯಿಂದ ತುಂಬಿದ್ದು, ಆ ಕೋಳಿಯೊಂದು ದೇವರಿಗೆ ನಮಸ್ಕರಿಸುತ್ತಿರುವುದು ಕಂಡುಬಂದಿದೆ. ಭಗವಂತನ ಮುಂದೆ ಆಶೀರ್ವಾದವನ್ನು ಪಡೆಯುವುದನ್ನು ದೃಶ್ಯಗಳಲ್ಲಿ ಸೆರೆ ಹಿಡಿಯಲಾಗಿದೆ. ಈ ವೀಡಿಯೊವನ್ನು ‘ಜಗನ್ನಾಥ್ ಧಾಮ್ ಪುರಿ ಎಕ್ಸ್‌ಪರ್ಟ್’ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವೀಡಿಯೊ ವೈರಲ್ ಆಗುತ್ತಿದ್ದಂತೆ, ನೆಟಿಜನ್‌ಗಳು ಇದಕ್ಕೆ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ, ಅನೇಕ ಜನರು ಕಾಮೆಂಟ್ ನಲ್ಲಿ “ಜೈ ಜಗನ್ನಾಥ್” ಎಂದು ಹೇಳಿದ್ದಾರೆ. “ಇಡೀ ಬ್ರಹ್ಮಾಂಡವು ಅವನ ಮುಂದೆ ತಲೆಬಾಗಬೇಕು. ಏಕೆಂದರೆ ಅವನು ಬ್ರಹ್ಮಾಂಡದ ಸೃಷ್ಟಿಕರ್ತ” ಎಂದು ಒಬ್ಬರು ಬರೆದಿದ್ದಾರೆ.