D K Shivakumar : ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ಮನಮೋಹನ್ ಸಿಂಗ್‌ಗೆ ಬಿಟ್ಟುಕೊಟ್ಟಿದ್ದು ಯಾಕೆ? ಕಾರಣ ಬಿಚ್ಚಿಟ್ಟ ಡಿಕೆ ಶಿವಕುಮಾರ್

D K Shivakumar : ತಾವು ಅಲಂಕರಿಸಬೇಕಾಗಿದ್ದ ಪ್ರಧಾನಿ ಪಟ್ಟವನ್ನು ಶ್ರೀಮತಿ ಸೋನಿಯಾ ಗಾಂಧಿಯವರು ಅಂದು ಮನಮೋಹನ್ ಸಿಂಗ್ ಅವರಿಗೆ ಬಿಟ್ಟುಕೊಟ್ಟಿದ್ದರು. ಇದು ಇಡೀ ದೇಶದ ಜನರಿಗೆ ಅಚ್ಚರಿ ಉಂಟು ಮಾಡಿತ್ತು. ಈಗ ಸಿಂಗ್ ನಿಧನದ ನಂತರ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಈ ವಿಚಾರವಾಗಿ ಕರ್ನಾಟಕದ ಡಿ ಸಿ ಎಂ ಡಿಕೆ ಶಿವಕುಮಾರ್(D K Shivakumar ) ಸೋನಿಯಾ ಗಾಂಧಿ, ಯಾಕೆ ಸಿಂಗ್ ಅವರಿಗೆ ತಮ್ಮ ಪ್ರಧಾನಿ ಪಟ್ಟ ಬಿಟ್ಟು ಕೊಟ್ಟರು ಎಂಬುದನ್ನು ವಿವರಿಸಿದ್ದಾರೆ.

ಹೌದು, ಡಾ. ಮನಮೋಹನ್ ಸಿಂಗ್( Manmohan Singh) ಅವರು ಪ್ರಧಾನಿ ಹುದ್ದೆಯನ್ನು ಅರಸಿ ಹೋದವರಲ್ಲ, ಪ್ರಧಾನಿ ಹುದ್ದೆಯೇ ಅವರನ್ನು ಹುಡುಕಿ ಬಂದಿತ್ತು. 2004ರಲ್ಲಿ ಯುಪಿಎ ಬಹುಮತ ಪಡೆದು ಅಧಿಕಾರಕ್ಕೆ ಬಂಧಾನ ಸೋನಿಯಾ ಗಾಂಧಿ ಪ್ರಧಾನಿಯಾಗುವ ಅವಕಾಶವಿತ್ತು, ಆದರೆ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಗೆ ಮನಮೋಹನ್‌ ಸಿಂಗ್‌ರ ಹೆಸರನ್ನು ಸೂಚಿಸಿದರು.ರಿಸರ್ವ್ ಬ್ಯಾಂಕ್ ಗವರ್ನರ್, ಮಾಜಿ ಹಣಕಾಸು ಸಚಿವರು ಮತ್ತು ದಕ್ಷಿಣ ಆಯೋಗದ ಪ್ರಧಾನ ಕಾರ್ಯದರ್ಶಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಡಾ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಆಯ್ಕೆಯಾದಾಗ ಎಲ್ಲರೂ ಅಚ್ಚರಿಗೊಂಡಿದ್ದರು. ಬಳಿಕ ಅವರನ್ನು ‘ಆಕಸ್ಮಿಕ ಪ್ರಧಾನಿ’ ‘ಮೌನಿ ಬಾಬಾ’ ಎಂದೆಲ್ಲಾ ಬಿಂಬಿಸಲಾಗಿತ್ತು. ಆದರೆ ಪ್ರಧಾನಿಯಾಗಿ ಆರ್ಥಿಕ ಸಚಿವರಾಗಿ ಅವರು ದೇಶಕ್ಕೆ ನೀಡಿದ ಕೊಡುಗೆ ಎಂದೆಂದೂ ಮರೆಯಲಾಗದು. ಹಾಗಿದ್ರೆ ಈ ಒಂದು ವಿಚಾರದ ಕುರಿತು ಡಿಕೆ ಶಿವಕುಮಾರ್ ಹೇಳಿದ್ದೇನೆಂದು ನೋಡೋಣ.

ಡಿಕೆ ಶಿವಕುಮಾರ್ ಹೇಳಿದ್ದೇನು?
ಇಂದು ಭಾರತ ಜಾಗತಿಕ ಮಟ್ಟದಲ್ಲಿ ಆರ್ಥಿಕ ಪ್ರಗತಿ ಸಾಧಿಸಿದ್ದರೆ ಅದಕ್ಕೆ ಪ್ರಮುಖ ಕಾರಣ ಮನಮೋಹನ್ ಸಿಂಗ್ ಅವರ ಕ್ರಾಂತಿಕಾರಿ ನೀತಿಗಳು. ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗ ಜಾಗತೀಕರಣಕ್ಕೆ ಒಡ್ಡಿಕೊಳ್ಳುವ ಮೂಲಕ ದೇಶವನ್ನು ಕಾಪಾಡಿದ ಆಪದ್ಭಾಂದವ. ಇದೇ ಕಾರಣಕ್ಕೆ ಸೋನಿಯಾ ಗಾಂಧಿ ಅವರು ತಮ್ಮ ಪಾಲಿಗೆ ಬಂದ ಪ್ರಧಾನಿ ಹುದ್ದೆಯನ್ನು ಮನಮೋಹನ್ ಸಿಂಗ್ ಅವರಿಗೆ ಬಿಟ್ಟುಕೊಟ್ಟರು. ಯುಪಿಎ ಮೊದಲ ಹಾಗೂ ಎರಡನೇ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ನರೇಗಾ, ಮಾಹಿತಿ ಹಕ್ಕು, ಶೈಕ್ಷಣಿಕ ಹಕ್ಕು, ಆಹಾರ ಭದ್ರತಾ ಕಾಯ್ದೆಯಂತಹ ಕ್ರಾಂತಿಕಾರಿ ಯೋಜನೆಗಳನ್ನು ದೇಶದ ಜನತೆಗೆ ಕೊಟ್ಟಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.

Leave A Reply

Your email address will not be published.