Banana : ಬರೋಬ್ಬರಿ 8 ಕೋಟಿಗೆ ಮಾರಾಟವಾದ ಬಾಳೆಹಣ್ಣು, ಏನಿದರ ವಿಶೇಷತೆ?
Banana: ಸಾಮಾನ್ಯವಾಗಿ ಒಂದು ಬಾಳೆಹಣ್ಣಿನ ಬೆಲೆ ಐದರಿಂದ ಹತ್ತು ರೂಪಾಯಿ ಇರುತ್ತದೆ. ಆದರೆ ಇನ್ನೊಂದು ಬಾಳೆಹಣ್ಣು ಬರೋಬ್ಬರಿ ಎಂಟು ಕೋಟಿಗೆ ಮಾರಾಟವಾಗಿದೆ.
ಗೋಡೆ ಮೇಲೆ ಟೇಪ್ನೊಂದಿಗೆ ಅಂಟಿಕೊಂಡಿರುವ ಬಾಳೆ ಹಣ್ಣಿನ(Banana) ಬೆಲೆ ಕೋಟಿಗಟ್ಟಲೆ ಇದೆ. ಹೌದು ಈ ಬಾಳೆಹಣ್ಣನ್ನು ನ್ಯೂಯಾರ್ಕ್‌ನಲ್ಲಿ ಹರಾಜು ಹಾಕಲಾಯಿತು. ಇದರ ಆರಂಭಿಕ ಅಂದಾಜು ವೆಚ್ಚ 1 ಮಿಲಿಯನ್ ಡಾಲರ್ (ಅಂದರೆ ರೂ. 8 ಕೋಟಿಗಿಂತ ಹೆಚ್ಚು)
https://twitter.com/Eko3316/status/1802242234424639793
ಈ ಬಾಳೆಹಣ್ಣು ವಾಸ್ತವವಾಗಿ ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲಾನ್ ಅವರ ಕಲಾಕೃತಿಯಾಗಿದೆ. ಅಲ್ಲಿ ನಿಜವಾದ ಬಾಳೆಹಣ್ಣಿಲ್ಲ.. ಅದು ಕಲಾವಿದ ಕೈಚಳಕದಲ್ಲಿ ಮೂಡಿರುವ ಚಿತ್ರ.. ಇದನ್ನು Sotheby’s ಹರಾಜು ಮನೆಯಿಂದ ಆನ್‌ಲೈನ್‌ನಲ್ಲಿ ಹರಾಜು ಮಾಡಲಾಗುತ್ತಿದೆ. ನವೆಂಬರ್ 20 ರವರೆಗೆ ಬಿಡ್ ಸಲ್ಲಿಸಬಹುದು.
“ದಿ ಕಾಮಿಡಿಯನ್” ಮೌರಿಜಿಯೊ ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಇದು ಒಂದಾಗಿದೆ. ಇದರ ಆರಂಭಿಕ ಬಿಡ್ ಅನ್ನು 1 ಮಿಲಿಯನ್ ಡಾಲರ್‌ಗಳಲ್ಲಿ ಇರಿಸಲು ಇದೇ ಕಾರಣವಾಗಿದೆ. ಈ ಹಿಂದೆಯೂ ಮೌರಿಜಿಯೊ ಅವರ ಕೆಲವು ಮೇರುಕೃತಿಗಳು 142 ಕೋಟಿಗೂ ಹೆಚ್ಚು ಬೆಲೆಯಲ್ಲಿ ಮಾರಾಟವಾಗಿದೆ.