Surrogate Mother: ಮಗನ ಮುದ್ದಾದ ಮಗುವಿಗೆ ಜನ್ಮ ನೀಡಿದ ತಾಯಿ! 56ರ ಈಕೆ ಅಜ್ಜಿಯೂ ಹೌದು, ತಾಯಿಯೂ ಹೌದು!

Surrogate Mother : ಮನೆಯಲ್ಲಿ ಮಕ್ಕಳಿದ್ದರೆ ಏನೋ ಒಂದು ಕಳೆ. ಮದುವೆಯಾದ ಬಳಿಕ ದಂಪತಿಗಳು ಮಕ್ಕಳನ್ನು ಪಡೆಯುತ್ತಾರೆ. ಆದರೆ ಕೆಲವೊಬ್ಬರಿಗೆ ಕಾರಣಾಂತರಗಳಿಂದ ಮಕ್ಕಳೇ ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಾಡಿಗೆ ತಾಯ್ತನ(Surrogate Mother)ದ ಮೂಲಕ ಅನೇಕರು ಮಗುವನ್ನು ಪಡೆಯುತ್ತಿದ್ದಾರೆ. ಅಲ್ಲದೆ ಇದೀಗ ಮಕ್ಕಳನ್ನು ಪಡೆಯಲು ಐವಿಎಫ್‌(IVF) ಎಂಬ ಹೊಸ ವಿಧಾನವನ್ನೂ ಕಂಡುಕೊಳ್ಳಲಾಗಿದೆ. ಒಟ್ನಲ್ಲಿ ಮೊದಲಾದ ವಿನೂತನ ವಿಧಾನಗಳ ಮೂಲಕ ಮಕ್ಕಳನ್ನು ಪಡೆದುಕೊಳ್ಳಬೇಕಾಗುತ್ತದೆ. ಆದ್ರೆ ಇಲ್ಲೊಬ್ಬ 56 ವರ್ಷದ ಮಹಿಳೆ ತನ್ನ ಮಗನ ಮಗುವಿಗೇ ಜನ್ಮ ನೀಡಿದ್ದಾಳೆ. ಅಂದ್ರೆ ತನ್ನ ಮೊಮ್ಮಗುವಿಗೆ ಜನ್ಮವಿತ್ತು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ್ದಾಳೆ.

ಹೌದು, ಯುಎಸ್(US) ಪ್ರಾಂತ್ಯದ ಉತಾಹ್‌(Uhat)ನಲ್ಲಿ ವಾಸಿಸುವ 56ರ ನ್ಯಾನ್ಸಿ ಹಾಕ್(Nyansi Hak) ತನ್ನ ಮೊಮ್ಮಗಳಿಗೆ ಜನ್ಮ ನೀಡಿದ್ದಾಳೆ. ತನ್ನ ಮಗನ ಮಗುವಿಗೆ (Baby) ಜನ್ಮ ನೀಡುವ ಮೂಲಕ ನ್ಯಾನ್ಸಿ ಈಗ ಏಕಕಾಲಕ್ಕೆ ತಾಯಿ ಹಾಗೂ ಅಜ್ಜಿ ಆಗಿದ್ದಾಳೆ. ಹಾಗೆಂದಮಾತ್ರಕ್ಕೆ ಈ ಮಗುವನ್ನು ಪಡೆಯಲು ತಾಯಿ ಮತ್ತು ಮಗನ ನಡುವೆ ಸಂಬಂಧವಿತ್ತು ಎಂದು ನೀವು ಯೋಚಿಸಬೇಡಿ. ಇದು ಸಂಪೂರ್ಣವಾಗಿಯೂ ತಪ್ಪು. ಯಾಕೆಂದರೆ ಈ ತಾಯಿ ಬಾಡಿಗೆ ತಾಯ್ತನದ ಮೂಲಕ ತನ್ನ ಮಗನಿಗೆ ಮಗುವನ್ನು ನೀಡಿದ್ದಾಳೆ.

ಅಂದಹಾಗೆ ನ್ಯಾನ್ಸಿಯ ಸೊಸೆ ಕ್ರಾಂಬ್ರಿಯಾ(Krambriya) 2021ರಲ್ಲಿ ಅವಳಿ ಶಿಶುಗಳಿಗೆ ಜನ್ಮ ನೀಡಿದ್ದರು. ಈ ಸಮಯದಲ್ಲಿ ಗರ್ಭಧಾರಣೆಯ ನಂತರ, ವೈದ್ಯಕೀಯ ಸಮಸ್ಯೆಯಿಂದಾಗಿ, ಅವಳ ಗರ್ಭಾಶಯವನ್ನು ತೆಗೆದುಹಾಕಲಾಯಿತು. ನ್ಯಾನ್ಸಿಯ ಸೊಸೆ ಕ್ಯಾಂಬ್ರಿಯಾ ಮತ್ತು ಮಗ ಮಕ್ಕಳನ್ನು ತುಂಬಾ ಇಷ್ಟಪಡುತ್ತಿದ್ದರು. ಆ ಸಮಯದಲ್ಲೂ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಅವಳಿ ಮಗುವಿಗೆ ಜನ್ಮ ನೀಡಿದ್ದಳು. ಇದಕ್ಕೂ ಮೊದಲು ಅವರಿಗೆ ಇಬ್ಬರು ಅವಳಿ ಮಕ್ಕಳಿದ್ದರು. ದಂಪತಿಯ (Couple) ಮಗುವಿನ ಆಸೆ ಇಲ್ಲಿಗೇ ನಿಲ್ಲಲಿಲ್ಲ. ಅವರು ತಮ್ಮ ಜೀವನದಲ್ಲಿ ಐದನೇ ಮಗುವನ್ನು ತರಲು ಬಯಸಿದ್ದರು. ಆದರೆ ಗರ್ಭಕಂಠದ ಸಮಸ್ಯೆಯ ನಂತರ, ಕ್ಯಾಂಬ್ರಿಯಾ ತಾಯಿಯಾಗಲು ಸಾಧ್ಯವಾಗಲಿಲ್ಲ.

ಬಳಿಕ ಮಗನ ಹೆಂಡತಿಗೆ ಅಂದರೆ ತನ್ನ ಸೊಸೆಗೆ ಗರ್ಭಾಶಯದ (Uterus) ಸಮಸ್ಯೆಯಿದ್ದ ಕಾರಣ ನ್ಯಾನ್ಸಿ ಬಾಡಿಗೆ ತಾಯಿಯಾಗಿದ್ದಾರೆ. ಹೆಂಡತಿಗೆ ಇದ್ದ ಸಮಸ್ಯೆಯನ್ನು ವಿವರಿಸಿ ಮಗನು ತನ್ನ ತಾಯಿಯೊಂದಿಗೆ ಬಾಡಿಗೆ ತಾಯ್ತನದ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ನ್ಯಾನ್ಸಿ, ಮಗನ ಅಭಿಪ್ರಾಯವನ್ನು ಗೌರವಿಸಿ, ಬಾಡಿಗೆ ತಾಯಿಯಾಗಲು ಒಪ್ಪಿಕೊಂಡರು. ಆದರೆ ಈ ವಯಸ್ಸಿನಲ್ಲಿ ಬಾಡಿಗೆ ತಾಯ್ತನ ಸಾಧ್ಯವೇ ಎಂಬ ಪ್ರಶ್ನೆ ಮೂಡಿ ಮೂವರು ಬೇರೆ ಬೇರೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ವಿವಿಧ ವೈದ್ಯಕೀಯ ಪರೀಕ್ಷೆಗಳನ್ನೂ (Test) ಮಾಡಿಸಿದ್ದಾರೆ. ಬಳಿಕ ನ್ಯಾನ್ಸಿ ಬಾಡಿಗೆ ತಾಯ್ತನಕ್ಕೆ ಆರೋಗ್ಯವಾಗಿದ್ದಾರೆ ಎಂಬುದು ತಿಳಿದಿದೆ. ನಂತರ ಅವರನ್ನು ಹಾರ್ಮೋನ್ ಚಿಕಿತ್ಸೆಗೆ ಒಳಪಡಿಸಿಲಾಯಿತು. ಕೊನೆಗೆ ಅವರು ಗರ್ಭಿಣಿ (Pregnant)ಯಾಗಿ ನವೆಂಬರ್ 2022 ರಲ್ಲಿ ಸುಂದರವಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಈ ಕುರಿತು ನ್ಯಾನ್ಸಿಯ ವೈದ್ಯ ರಸೆಲ್ ಫೋಕ್(Rasel Foke) ಮಾತನಾಡಿ, ‘ನ್ಯಾನ್ಸಿಯವರನ್ನು ನೋಡಿದರೆ ವಯಸ್ಸು ಕೇವಲ ಸಂಖ್ಯೆ ಎಂದು ಹೇಳಬಹುದು. ಅನೇಕ ರೀತಿಯ ಕಾಯಿಲೆಗಳು ಜನರನ್ನು ಸುತ್ತುವರಿದಿರುವ ಈ ಕಾಲದಲ್ಲಿ, ನ್ಯಾನ್ಸಿ ಮಾತ್ರ ಸಂಪೂರ್ಣವಾಗಿ ಫಿಟ್ ಆಗಿದ್ದರು. ನಾವು ಆಕೆಯ ದೇಹಕ್ಕೆ ಭ್ರೂಣವನ್ನು ವರ್ಗಾಯಿಸಿ, ನಿಖರವಾಗಿ 6 ದಿನಗಳ ನಂತರ ಗರ್ಭಿಣಿಯಾದರು’ ಎಂದು ಹೇಳಿದ್ದಾರೆ. ಇನ್ನು ಪ್ರತಿ ಕ್ಷಣವೂ ತನ್ನ ಹೆಂಡತಿಯೊಂದಿಗಿರುವ ಜೇಸನ್(Jesan), ಅಂದ್ರೆ ನ್ಯಾನ್ಸಿ ಗಂಡ ಮಾತನಾಡಿ ‘ನ್ಯಾನ್ಸಿಗೆ 56 ವರ್ಷ ವಯಸ್ಸಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಮಗು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಎಂದು ನಾವು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಅದು ಸಾಧ್ಯವಾಗಿದೆ ಎಂದಿದ್ದಾರೆ. ಅಲ್ಲದೆ ನ್ಯಾನ್ಸಿ ಕೂಡ ಪ್ರತಿಕ್ರಿಯಿಸಿ ‘ನಾನು ಈ ಮಗುವನ್ನು ಕಳೆದುಕೊಳ್ಳಬಹುದು ಎಂದು ಅನೇಕ ಬಾರಿ ಭಾವಿಸಿದೆ. ಆದರೆ ಮುದ್ದಾಗ ಮಗುವಿಗೆ ಜನ್ಮ ನೀಡಿರುವುದು ಖುಷಿ ನೀಡಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.