Diesel Fashion week: ಲಕ್ಷ ಲಕ್ಷ ಕಾಂಡೋಮ್ ಗಳ ಮೇಲೆ ನಡೆಯಿತು ಜಗತ್ಪ್ರಸಿದ್ದ ಫ್ಯಾಶನ್ ಶೋ! ಈ ಕಾಂಡೋಮ್ ಬೆಟ್ಟದೆದುರು ರೂಪಸಿಯರು ವಯ್ಯಾರದಿಂದ ನಡೆದದ್ಯಾಕೆ?

Diesel Fashion week : ಲೈಂಗಿಕ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಸಂಭೋಗದ ಸಮಯದಲ್ಲಿ ಕಾಂಡೋಮ್(Condom) ಬಳಕೆ ಎಷ್ಟು ಸುರಕ್ಷಿತವಾದದ್ದು ಎಂಬ ವಿಚಾರಗಳಲೆಲ್ಲ ಇಂತಹ ಸಂದರ್ಭದಲ್ಲಿ ತಿಳಿಯುತ್ತದೆ. ಬೀದಿ ನಾಟಕ, ಮೈಮ್ ಶೋ ಹೀಗೆ ಮುಂತಾದ ಹೊಸ ಪ್ರಯೋಗಗಳ ಮೂಲಕ ಈ ಜಾಗೃತಿ ಕಾರ್ಯಕ್ರಮಗಳು ನಡೆಯೋದನ್ನ ನಾವು ನೋಡಿದ್ದೇವೆ. ಆದರೆ ಇಲ್ಲೊಂದೆಡೆ ಫ್ಯಾಷನ್ ವೀಕ್(Fashion Week) ಕಾಂಡೋಮ್ ಬಾಕ್ಸ್‌ಗಳ ಮೇಲೆಯೇ ರ್ಯಾಂಪ್ ವಾಕ್(Yarmp Walk) ಮಾಡಿ ಜಾಗೃತಿ ಮೂಡಿಸಲು ಯತ್ನಿಸಿದಂತ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಅದೂ ಕೂಡ ಕಾಂಡೋಮ್ ನ ಪರ್ವತವನ್ನೇ ಸೃಷ್ಟಿಸಿ ಅದರ ಮುಂದೆ ಈ ರ್ಯಾಂಪ್ ನಡೆದಿರೋದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ!

ಹೌದು, ಐಷಾರಾಮಿ ಬಟ್ಟೆ ಬ್ರಾಂಡ್ ಡೀಸೆಲ್‌ನ(Diesel) ಮಿಲನ್ ಫ್ಯಾಷನ್ ವೀಕ್‌ (Diesel Fashion week) ಈ ಬಾರಿ ತನ್ನ ವಿಶಿಷ್ಟತೆಯಿಂದಲೇ ಎಲ್ಲರ ಗಮನ ಸೆಳೆದಿದೆ. ಈ ಸಲದ ಫ್ಯಾಷನ್‌ ವೀಕ್‌ನಲ್ಲಿ 2 ಲಕ್ಷ ಕಾಂಡೋಮ್ ಬಾಕ್ಸ್‌ಗಳ ನಡುವೆ ರೂಪದರ್ಶಿಗಳು ವಯ್ಯಾರದಿಂದ ಹೆಜ್ಜೆಹಾಕಿದ್ದಾರೆ. ಸದ್ಯ ಅದರ ಫೋಟೋಸ್ ಮತ್ತು ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಂಭೋಗ ಹಾಗೂ ಕಾಂಡೋಮ್ ಎರಡರ ಬಗ್ಗೆಯೂ ಜನರಿಗೆ ತಿಳಿದಿದೆ. ಆದರೆ ಸುರಕ್ಷಿತ ಲೈಂಗಿಕತೆಯ ಬಗ್ಗೆ ಮಾತ್ರ ಹೆಚ್ಚಿನವರು ಗಮನ ಹರಿಸುವುದಿಲ್ಲ. ಹೀಗಿರುವಾಗ ಇಂತಹ ಅಪರೂಪದ ಕಾರ್ಯಕ್ರಮಗಳು ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹಳಲಾಗುತ್ತಿದೆ.

ಡೀಸೆಲ್ ಸಂಸ್ಥೆ ತಿಳಿಸಿದಂತೆ ಈ ಫ್ಯಾಶನ್ ಶೋನ ಪ್ರಮುಖ ಅಂಶವೆಂದರೆ ಲೈಂಗಿಕ ಸುರಕ್ಷತೆ ಬಗ್ಗೆ ಜಾಗೃತಿ ಮತ್ತು ತನ್ನ ಬ್ರ್ಯಾಂಡ್‌ನ ಹೊಸ ಆವೃತ್ತಿಯ ಕುರಿತು ಜನರಿಗೆ ತಿಳಿಯಪಡಿಸಿ ಪ್ರಚಾರವನ್ನು ಗಿಟ್ಟಿಸಿಕೊಳ್ಳುವುದಾಗಿದೆ. ಹೀಗಾಗಿ DieselFW23 ರನ್‌ವೇ ಶೋ ಸೆಟ್ ಮತ್ತು durex ಜೊತೆಗಿನ ಪಾಲುದಾರಿಕೆಯ ಭಾಗವಾಗಿ ಬರೋಬ್ಬರಿ 2ಲಕ್ಷ ಕಾಂಡೋಮ್ ಬಾಕ್ಸ್‌ಗಳನ್ನು ವೇದಿಕೆಯಲ್ಲಿ ಜೋಡಿಸಲಾಗಿದ್ದು, ಇದರೆದುರು ರೂಪಸಿಯರು ವಯ್ಯಾರದಿಂದ ಹೆಜ್ಜೆ ಹಾಕಿದ್ದಾರೆ.

ಅಲ್ಲದೆ ಪ್ರಚಾರಕ್ಕಾಗಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಡೀಸೆಲ್ ಸಂಸ್ಥೆ, ಏಪ್ರಿಲ್‌ನಲ್ಲಿ ವಿಶ್ವದಾದ್ಯಂತ ತನ್ನ ಎಲ್ಲಾ ಮಳಿಗೆಗಳಲ್ಲಿ ಸುಮಾರು 3ಲಕ್ಷ ಡ್ಯೂರೆಕ್ಸ್ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು. ಎಂದು ತಿಳಿಸಿದೆ. ಈ ಕುರಿತು ಡೀಸೆಲ್ ಸಂಸ್ಥೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದು, ‘ನಾವು ಡೀಸೆಲ್‌ನಲ್ಲಿ ಆಡಲು ಇಷ್ಟಪಡುತ್ತೇವೆ ಮತ್ತು ನಾವು ಅದರ ಬಗ್ಗೆ ಗಂಭೀರವಾಗಿರುತ್ತೇವೆ. ಆನಂದಿಸಿ, ಪರಸ್ಪರ ಗೌರವಿಸಿ, ಸುರಕ್ಷಿತವಾಗಿರಿ’ ಎಂದು ಅದರ ಕ್ರಿಯೇಟಿವ್ ಡೈರೆಕ್ಟರ್ ತಿಳಿಸಿದ್ದಾರೆ.

ಈ ಮಿಲನ್ ಫ್ಯಾಶನ್ ವೀಕ್ ಫೆಬ್ರವರಿ 21ರಂದು ಪ್ರಾರಂಭವಾಗಿದ್ದು, 27 ರಂದು ಮುಕ್ತಾಯಗೊಳ್ಳಲಿದೆ. ಈಗಾಗಲೆ ಹಲವಾರು ಬಳಕೆದಾರರು ಈ ಡಿಫರೆಂಟ್ ಫ್ಯಾಷನ್ ಶೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಕಾಂಡೋಮ್ ಬಾಕ್ಸ್‌ಗಳನ್ನು ಜೋಡಿಸಿಟ್ಟಿರುವ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಕೆಲವರು ದಯವಿಟ್ಟು ಇದನ್ನು ಕ್ಲಿನಿಕ್‌ಗಳಿಗೆ ನೀಡಿರಿ ಎಂದು ವಿನಂತಿ ಮಾಡಿದ್ದಾರೆ. ಇನ್ನು ಕೆಲವರು ಇದನ್ನು ಸರಿಯಾಗಿ ವಿತರಿಸದಿದ್ದರೆ ತ್ಯಾಜ್ಯವಾಗಿ ಬದಲಾಗಬಹುದು ಕಾಮೆಂಟ್ ಮಾಡಿದ್ದಾರೆ.

Leave A Reply

Your email address will not be published.