ದ.ಕ.ಜಿಲ್ಲೆಯಲ್ಲಿ ಜಾನುವಾರು ಸಾಗಾಣಿಕೆ ನಿಷೇಧ ಆದೇಶ ವಾಪಾಸ್ -ಜಿಲ್ಲಾಧಿಕಾರಿ

ಮಂಗಳೂರು:ಚರ್ಮ ಗಂಟು ರೋಗದ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಹೇರಲಾಗಿದ್ದ ಜಾನುವಾರು ಸಾಗಾಣಿಕೆ ಸಂಬಂಧಿಸಿದ ನಿಷೇಧದ ಆದೇಶ ವನ್ನು ವಾಪಸ್ ಪಡೆಯಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ 348 ಗ್ರಾಮಗಳಲ್ಲಿನ 7,036 ಜಾನುವಾರಗಳಲ್ಲಿ ಚರ್ಮ ಗಂಟು ರೋಗ ಕಂಡುಬಂದಿತ್ತು. ಅಲ್ಲದೆ 397 ಜಾನುವಾರುಗಳು ಸಾವಿಗೀಡಾಗಿತ್ತು.

ಫೆ.15ರವರೆಗೆ ಜಿಲ್ಲೆಯ 2,26,801 ಜಾನುವಾರುಗಳಿಗೆ ಚರ್ಮ ಗಂಟುರೋಗ ನಿರೋಧಕ ಲಸಿಕೆ ಹಾಕಲಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಹೊಸ ಪ್ರಕರಣ ಕಂಡು ಬಂದಿಲ್ಲ.

ರೋಗವು ನಿಯಂತ್ರಣಕ್ಕೆ ಬಂದ ಕಾರಣ ಜಾನುವಾರು ಸಾಗಾಣಿಕೆ ನಿಷೇಧವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.