ಸರಕಾರಿ ನೌಕರರೇ ಗಮನಿಸಿ | ಇನ್ಮುಂದೆ ಈ ಎಲ್ಲಾ ಅಗತ್ಯ ಸರಕುಗಳು ನಿಮಗೆ ಲಭ್ಯ!
ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಪ್ಯಾಕೇಜ್ ಸ್ನೇಹಿ ಸುದ್ದಿಯೊಂದು ಇಲ್ಲಿದೆ. ಅದೆನಪ್ಪಾ ಅಂದ್ರೆ, ಶೀಘ್ರದಲ್ಲೇ ಮಿಲಿಟರಿ ಸಿಬ್ಬಂದಿ ಮಾದರಿಯಲ್ಲೇ, ರಿಯಾಯಿತಿ ದರದಲ್ಲಿ ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ಇದಕ್ಕಾಗಿ, ಎಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಫ್ಯಾಮಿಲಿ ಮಾರ್ಟ್ ವೊಂದನ್ನು ಆರಂಭಿಸುತ್ತಿದ್ದು, ಶೇ.10-60ರಷ್ಟು ಡಿಸ್ಕೌಂಟ್ ನಲ್ಲಿ ಸರ್ಕಾರಿ ನೌಕರರು ಅಗತ್ಯ ವಸ್ತುಗಳು ಮತ್ತು ದಿನಸಿ ಸಾಮಾಗ್ರಿಗಳನ್ನು ಖರೀದಿಸಬಹುದಾಗಿದೆ.
ಹೌದು, ಸರ್ಕಾರವು ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಎಲ್ಲಾ ಜಿಲ್ಲೆಗಳಲ್ಲಿ ಸೇನಾ ಕ್ಯಾಂಟೀನ್ ಮಾದರಿಯ ವ್ಯವಸ್ಥೆಯನ್ನು ಸ್ಥಾಪಿಸಲಿದೆ. ಸರ್ಕಾರಿ ನೌಕರರ ಸಂಘವು ಆರಂಭಿಸುತ್ತಿರುವ ಈ ಮಾರ್ಟ್, ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್ (CSD) ರಂತೆಯೇ ಇರುತ್ತದೆ.ದಿನಸಿ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಇತರ ವಸ್ತುಗಳು ಸೇರಿದಂತೆ ದೈನಂದಿನ ಬಳಕೆಗೆ ಗುಣಮಟ್ಟದ ಉತ್ಪನ್ನಗಳು ಈ ಮಾರ್ಟ್‌ನಲ್ಲಿ ಭಾರೀ ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ. ಸಿಎಸ್‌ಡಿಗಳಲ್ಲಿ ಸೈನಿಕರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗಾಗಿ ಮಾಡಲಾಗಿದ್ದು, ಇವುಗಳನ್ನು ಮಿಲಿಟರಿ ಕ್ಯಾಂಟೀನ್ ಎಂದು ಕರೆಯಲಾಗುತ್ತದೆ.
ಪ್ರಸ್ತುತ, ರಾಜ್ಯ ಸರ್ಕಾರದ ಕೃಷಿ, ಗೃಹ, ನಗರಾಭಿವೃದ್ಧಿ, ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು ಸೇರಿದಂತೆ ಒಟ್ಟು 72 ಇಲಾಖೆಗಳಲ್ಲಿ 5.2 ಲಕ್ಷ ಉದ್ಯೋಗಿಗಳಿದ್ದಾರೆ. ಮಾಜಿ ಉದ್ಯೋಗಿಗಳು ಮತ್ತು ಅವರ ಕುಟುಂಬದವರು ಕೂಡ ಈ ಮಾರ್ಟ್’ನ್ನು ಬಳಸಿಕೊಳ್ಳಬಹುದಾಗಿದೆ.
ಈ ಮೊದಲ ಫ್ಯಾಮಿಲಿ ಮಾರ್ಟ್ ಶಿವಮೊಗ್ಗದಲ್ಲಿ ಶುಭಾರಂಭಗೊಳ್ಳಲಿದೆ. ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಮಾವೇಶವನ್ನು ಫೆಬ್ರವರಿ 4 ರಂದು ಆಯೋಜಿಸಲಾಗಿದ್ದೂ, ಇದೇ ವೇಳೆ ಮಾರ್ಟ್ ಅನ್ನು ಉದ್ಘಾಟಿಸಲಾಗುವುದು ಹಾಗೂ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಇದೇ ರೀತಿಯ ಮಾರ್ಟ್‌ಗಳನ್ನು ಸ್ಥಾಪಿಸಲಾಗುವುದು” ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾಹಿತಿಯನ್ನು ನೀಡಿದ್ದಾರೆ.
ಈ ಮಾರ್ಟ್‌ಗಳು ಸರ್ಕಾರಿ ಭೂಮಿಯಲ್ಲಿ ಸ್ಥಾಪಿತವಾಗಲಿದ್ದು, ಅವುಗಳನ್ನು ಖಾಸಗಿ ಏಜೆನ್ಸಿಗಳು ನಿರ್ವಹಿಸಲಿವೆ. ಇಲ್ಲಿ ದೊರೆಯುವ ಪ್ರತಿಯೊಂದು ಉತ್ಪನ್ನಗಳು ಸಿಬ್ಬಂದಿಗೆ ಕೈಗೆಟುಕುವ ದರದಲ್ಲಿ ಲಭ್ಯವಿರುತ್ತವೆ . ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಉದ್ಯೋಗಿಗಳು ವಸ್ತುಗಳನ್ನು ಖರೀದಿಸಲು ಬರುವುದರಿಂದ, ಅವುಗಳನ್ನು ನಡೆಸುವ ಏಜೆನ್ಸಿಗೆ ಇದು ಆರ್ಥಿಕವಾಗಿ ಸಹಾಯವಾಗುತ್ತದೆ ಎಂದು ಸಿ.ಎಸ್.ಷಡಕ್ಷರಿ ಹೇಳಿದ್ದಾರೆ.
ಮಾರ್ಟ್‌ಗಳನ್ನು ಸ್ಥಾಪಿಸಲು ಈಗಾಗಲೇ ಪ್ರತಿ ಜಿಲ್ಲೆಯಲ್ಲೂ ಭೂಮಿಯನ್ನು ಪಡೆಯಲಾಗುತ್ತಿದೆ. ಬೆಂಗಳೂರಿನಲ್ಲಿ, ಕನಿಷ್ಠ ನಾಲ್ಕು ಮಾರ್ಟ್‌ಗಳನ್ನು ಪ್ರಾರಂಭಿಸಬೇಕಾಗುತ್ತದೆ. ಆದರೆ ಮೂಲ ಸಮಸ್ಯೆಯೆ ಬೆಂಗಳೂರಿನಲ್ಲಿ ಭೂಮಿಯ ಕೊರತೆ. ಹಾಗಾಗಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ನಾಲ್ಕು ದಿಕ್ಕಿನಲ್ಲು ಮಾರ್ಟ್‌ಗಳನ್ನು ಸ್ಥಾಪಿಸಲಾಗುತ್ತದೆ. ಇದರಿಂದ ಸಿಬ್ಬಂದಿಗಳಿಗು ಹತ್ತಿರದ ಮಾರ್ಟ್’ಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸಲು ಅನುಕೂಲವಾಗಲಿದೆ ಎಂಬ ಮಾಹಿತಿಯನ್ನು ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.