Viral Video: ನಾಯಿಯಾಗಲು ಬರೋಬ್ಬರಿ 12 ಲಕ್ಷ ಖರ್ಚು ಮಾಡಿದ ವ್ಯಕ್ತಿ | ಈ ವಿಡಿಯೋ ನೋಡಿದ್ರೆ ನೀವೂ ಶಾಕ್ ಆಗ್ತೀರಾ!!

ಪ್ರಾಣಿಗಳ ಮೇಲೆ ಎಲ್ಲರಿಗೂ ಪ್ರೀತಿ ಇರುತ್ತದೆ. ಅದರಲ್ಲೂ ಸಾಕು ಪ್ರಾಣಿಯಾದ ನಾಯಿ ಅಂದ್ರೆ ಅತೀವ ಪ್ರೀತಿ. ಯಾಕಂದ್ರೆ ನಾಯಿ ತನ್ನ ಯಜಮಾನನಿಗೆ ನಿಯತ್ತಾಗಿರುತ್ತದೆ. ಇತ್ತೀಚೆಗೆ ಜನರು ತಮ್ಮ ಪ್ರೀತಿಯ ನಾಯಿಗಳ ಫೋಟೋ ವೀಡಿಯೋ ವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಆ ಪ್ರೀತಿ ಅತಿಯಾದರೆ ಏನಾಗುತ್ತದೆ ಎಂಬ ಉದಾಹರಣೆ ಇರಬೇಕು ಅಂತಹ ವಿಡಿಯೋವೊಂದು ವೈರಲ್ ಆಗಿದೆ.

 

ಜಪಾನ್​ನಲ್ಲಿ ನೆಲೆಸಿರುವ ಟೊಕೊ ಎಂಬ ವ್ಯಕ್ತಿಯು ತಾನು ನಾಯಿಯಾಗಲು ಬರೋಬ್ಬರಿ 12 ಲಕ್ಷ ಖರ್ಚು ಮಾಡಿದ್ದಾರೆ. ಏನಿದು ವಿಚಿತ್ರವಾಗಿದೆ ಅಲ್ವಾ!! ಈ ರೀತಿಯ ಮನುಷ್ಯರು ಕೂಡ ಇರುತ್ತಾರಾ? ಅಂತ ಯೋಚನೆ ಬಂದಿರಬಹುದು. ಹಾಗಾದ್ರೆ ವಿಷಯ ಏನೆಂದು ತಿಳಿದುಕೊಳ್ಳೋಣ.

ಟೊಕೊ ಅವರಿಗೆ ಬಾಲ್ಯದಿಂದಲೂ ಪ್ರಾಣಿಗಳಂದ್ರೆ ತುಂಬಾನೇ ಪ್ರೀತಿ. ಅದರಲ್ಲೂ ನಾಯಿಗಳ ಮೇಲೆ ವಿಶೇಷ ಪ್ರೀತಿ ಇತ್ತು. ಹಾಗಾಗಿ ತಾನು ನಾಯಿಗಳಂತೆ ಬದುಕಬೇಕೆಂದು ಅವರು ಬಯಸಿದ್ದರು. ಅದಕ್ಕಾಗಿ ವರ್ಕ್‌ಶಾಪ್ ಜೆಪ್ಪೆಟ್ ಅನ್ನು ಸಂಪರ್ಕಿಸಿದರು ಮತ್ತು ಅಲ್ಟ್ರಾ-ರಿಯಲಿಸ್ಟಿಕ್ ಡಾಗ್ ಕಾಸ್ಟ್ಯೂಮ್ ಅನ್ನು ಪಡೆದರು. ಈ ಉಡುಪನ್ನು ಧರಿಸುವುದರಿಂದ ಈ ವ್ಯಕ್ತಿ ನಾಯಿಯಂತೆ ಕಾಣುತ್ತಾರೆ. ಈ ಉಡುಪಿಗಾಗಿ ಅವರು ಭಾರತೀಯ ಕರೆನ್ಸಿಯಲ್ಲಿ 12 ಸಾವಿರದ 480 ಪೌಂಡ್‌ಗಳನ್ನು ಅಂದರೆ 12 ಲಕ್ಷದ 48 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ.

ಕಂಪನಿಯು ಕೃತಕ ತುಪ್ಪಳವನ್ನು ಬಳಸಿ ನಾಯಿಯ ಕಾಸ್ಟ್ಯೂಮ್ ಅನ್ನು ತಯಾರಿಸಿತು. ಇದರ ತಯಾರಿಕೆಗೆ ಸುಮಾರು 40 ದಿನಗಳು ಬೇಕಾಯಿತು. ನಂತರ ಟೊಕೊ ಈ ಬಟ್ಟೆಯನ್ನು ತುಂಬಾ ಖುಷಿಯಿಂದ ಧರಿಸಿ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ.

ಅಲ್ಲದೆ, ಟೊಕೊ ಸಾಕು ನಾಯಿಯಂತೆ ನಟಿಸುತ್ತಾರೆ. ಅವರು ನಕಲಿ ನಾಯಿ ಆಹಾರವನ್ನು ಸಹ ತಿನ್ನುತ್ತಾರೆ. ಆದರೆ ಆತನ ಸ್ನೇಹಿತರು ಮತ್ತು ಕುಟುಂಬದವರು ಅವರ ಈ ನಡವಳಿಕೆಯನ್ನು ವಿಚಿತ್ರವಾಗಿ ನೋಡುತ್ತಿದ್ದಾರೆ. ಏನೇ ಆದರೂ ಟೊಕೊ ಅವರು ತಮ್ಮ ಆಸೆಯನ್ನು ಈಡೇರಿಸಿಕೊಂಡು ಇದೀಗ ಸಖತ್ ಸುದ್ದಿಯಾಗಿ ಬಿಟ್ಟರು.

Leave A Reply

Your email address will not be published.