ಸ್ವಪ್ನದಲ್ಲಿ ಮೊಸಳೆ ಕಂಡರೆ ಈ ಅಪಾಯ ಸಂಭವಿಸೋದು ಗ್ಯಾರಂಟಿ!!

ನಮಗೆಲ್ಲರಿಗೂ ನಿದ್ದೆಯಲ್ಲಿ ಚಿತ್ರ ವಿಚಿತ್ರ ಕಾಣುವುದು ಸಹಜವಾಗಿದೆ. ಆದರೆ ಇಲ್ಲೊಮ್ಮೆ ಕೇಳಿ ನಿಮ್ಮ ಕನಸಲ್ಲಿ ಸಹ ನಿಮ್ಮ ಒಳಿತು ಕೆಡುಕುಗಳ ಉತ್ತರ ಕಂಡುಕೊಳ್ಳಬಹುದಾಗಿದೆ. ಹೌದು ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿರುತ್ತದೆ. ಅದರಂತೆ ಕನಸಿನ ಪುಸ್ತಕದಲ್ಲಿ ಅವುಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಕೆಲವು ಕನಸುಗಳು ಶುಭ ಚಿಹ್ನೆಗಳ ಕಡೆಗೆ ತೋರಿಸಿದರೆ ಕೆಲವು ಅಶುಭವನ್ನು ಸೂಚಿಸುತ್ತವೆಯಂತೆ.

ಹೌದು ಭವಿಷ್ಯದಲ್ಲಿ ಯಾವ ರೀತಿಯ ಘಟನೆಗಳು ಸಂಭವಿಸಬಹುದು ಮತ್ತು ಅದು ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ರಾತ್ರಿಯ ನಿದ್ರೆಯಲ್ಲಿ ಕಾಣುವ ಕನಸುಗಳ ಬಗ್ಗೆ ಸಂಪೂರ್ಣ ಸ್ವಪ್ನ ಗ್ರಂಥದಲ್ಲಿ ತಿಳಿಸಲಾಗಿದೆ. ಅದಲ್ಲದೆ ವಿಜ್ಞಾನದಲ್ಲೂ ಈ ಕನಸುಗಳ ಹಿಂದೆ ಹಲವು ಕಾರಣಗಳನ್ನು ತಿಳಿಸಲಾಗಿದೆ.

ನೀವು ನಿಮ್ಮ ಕನಸಿನಲ್ಲಿ ಮೊಸಳೆಯನ್ನು ನೀವು ನೋಡಿದರೆ, ಅದು ನಿಮ್ಮ ಭವಿಷ್ಯವನ್ನು ಸಹ ಸೂಚಿಸುತ್ತದೆ ಎಂದು ತಿಳಿಸಲಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನಸಿಗೆ ಒಂದಲ್ಲ ಒಂದು ಅರ್ಥವಿದೆ. ಕನಸಿನಲ್ಲಿ ನಾವು ಖಂಡಿತವಾಗಿಯೂ ನಮ್ಮ ಸುತ್ತಲೂ ಇರುವ ಪ್ರಾಣಿಗಳು, ಪಕ್ಷಿಗಳು ಅಥವಾ ಕೆಲವು ವಸ್ತುಗಳ ಬಗ್ಗೆ ಯೋಚಿಸುತ್ತೇವೆ. ಒಂದು ವೇಳೆ ನಿಮ್ಮ ಕನಸಿನಲ್ಲಿ ನೀವು ಮೊಸಳೆಯನ್ನು ನೋಡಿದ್ದರೆ ಅದರ ಸಂಕೇತ ಏನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ನಿಮ್ಮ ಕನಸಿನಲ್ಲಿ ಮೊಸಳೆ ಅಳುತ್ತಿರುವುದನ್ನು ನೀವು ನೋಡಿದರೆ, ಇದರರ್ಥ ನೀವು ನಿಮ್ಮೊಂದಿಗೆ ಸಂತೋಷವಾಗಿಲ್ಲ. ಒಂದಲ್ಲ ಒಂದು ಚಿಂತೆಯಲ್ಲಿ ನಿರತರಾಗಿರುತ್ತಾರೆ. ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಮಾತನಾಡಬೇಕು, ಜೊತೆಗೆ ಅವರೊಂದಿಗೆ ಸಮಯ ಕಳೆಯಬೇಕು. ಹೀಗೆ ಮಾಡಿದರೆ ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಸಿಗುತ್ತದೆ

ಕನಸಿನಲ್ಲಿ ಅನೇಕ ಮೊಸಳೆಗಳು ಕಾಣಿಸಿಕೊಂಡರೆ, ಅದು ಅಶುಭ ಸಂಕೇತವಾಗಿದೆ. ನಿಮ್ಮ ಒಡನಾಟವು ಒಳ್ಳೆಯ ಜನರೊಂದಿಗೆ ಇಲ್ಲ ಎಂದರ್ಥ. ನಿಮ್ಮ ಜೊತೆ ಸ್ನೇಹಿತರಂತೆ ಇರುವವರು ಯಾವಾಗಲೂ ನಿಮಗೆ ಹಾನಿ ಮಾಡಲು ಬಯಸುತ್ತಾರೆ. ಆದ್ದರಿಂದ ನೀವು ಎಚ್ಚರದಿಂದಿರಬೇಕು. ಕನಸಿನಲ್ಲಿ ಮೊಸಳೆಯನ್ನು ನೋಡುವುದು ಮುಂಬರುವ ದಿನಗಳಲ್ಲಿ ನಿಮಗೆ ಸಮಸ್ಯೆಯಾಗಬಹುದಾದ ಅಂತಹ ಸ್ನೇಹಿತರೊಂದಿಗೆ ನೀವು ಜಾಗರೂಕರಾಗಿರಬೇಕು ಎಂದು ಎಚ್ಚರಿಸುತ್ತದೆ.

ಕನಸಿನಲ್ಲಿ ಮೊಸಳೆಯನ್ನು ನೋಡುವುದು ಭವಿಷ್ಯದಲ್ಲಿ ನೀವು ತೊಂದರೆಯಲ್ಲಿ ಸಿಲುಕುವಿರಿ ಅಥವಾ ಯಾರಾದರೂ ನಿಮಗೆ ತೊಂದರೆ ನೀಡಲು ಪ್ರಯತ್ನಿಸಬಹುದು ಎಂದು ಸೂಚಿಸುತ್ತದೆ.

ಹೀಗೆ ಕನಸಿನ ಪ್ರಕಾರ ಮೊಸಳೆಯನ್ನು ಕನಸಿನಲ್ಲಿ ಕಂಡರೆ ನಾನಾ ಅರ್ಥಗಳನ್ನು ತಿಳಿಸಲಾಗಿದೆ. ಕೆಲವೊಮ್ಮೆ ಕನಸುಗಳು ನನಸಾಗೋ ಸಾಧ್ಯತೆಗಳು ಇರುತ್ತವೆ ಆದ್ದರಿಂದ ಕನಸಿಗೂ ಮತ್ತು ಜೀವನದಲ್ಲಿ ನಡೆಯುವ ಘಟನೆಗಳಿಗೂ ಪರೋಕ್ಷವಾಗಿ ನಂಟು ತುಂಬಿದೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ.

Leave A Reply

Your email address will not be published.