ಕಬ್ಬು ಬೆಳೆಗಾರರಿಗೆ ಬಂಪರ್ ಸಿಹಿ ಸುದ್ದಿ: ಪ್ರತಿ ಟನ್ ಗೆ ಹೆಚ್ಚುವರಿ 150 ರೂ.

ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಸುಮಾರು ಶೇಕಡಾ 60 ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ರೈತರ ಕಷ್ಟ ರೈತರಿಗೇ ಗೊತ್ತು. ರೈತರು ತಮ್ಮ ಕೃಷಿ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟು ಬೆಳೆಸುತ್ತಾರೆ. ನಂತರ ಕಟಾವು ಮಾಡಿ ಮಾರಾಟ ಮಾಡಿ ಸರಿಯಾದ ಬೆಲೆಯನ್ನು ಪಡೆಯಲು ಸಾಧ್ಯ ಆಗದೆ ರೈತರು ಕಣ್ಗೆಟ್ಟು ಹೋಗುವುದು ಪ್ರತಿಯೊಂದು ವರ್ಷವೂ ಒಂದಲ್ಲಾ ಒಂದು ಕಾರಣದಿಂದ ನಡೆಯುತ್ತಲೇ ಇದೆ. ಹಾಗಾಗಿ ರೈತರು ಸಂಕಷ್ಟದಲ್ಲಿದ್ದಾಗ ಆರ್ಥಿಕ ನೆರವು ನೀಡುವ ಯೋಜನೆಗಳನ್ನ ಜಾರಿಗೆ ತರುತ್ತಿದ್ದು, ರೈತರ ಸಮಸ್ಯೆ ಪರಿಹರಿಸಲು ಸರ್ಕಾರ ಕೆಲಸ ಮಾಡುತ್ತಿದೆ.

ಇದೀಗ ಕಬ್ಬು ಬೆಳೆಗಾರರಿಗೆ ಎಫ್‌ಆರ್‌ಪಿ ಜೊತೆಗೆ ಹೆಚ್ಚುವರಿಗಾಗಿ 150 ರೂಪಾಯಿ ನೀಡಲು ಸರ್ಕಾರ ಆದೇಶಿಸಿದೆ. ಹೌದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ 39 ದಿನಗಳಿಂದ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನೆಯನ್ನು ಶುಕ್ರವಾರ ಸ್ಥಗಿತಗೊಳಿಸಲಾಗಿದೆ.

ಈ ವರ್ಷದ ಕಬ್ಬು ಕಟಾವು ಮುಗಿದ ನಂತರ ಸಕ್ಕರೆ, ಎಥೆನಾಲ್ ಮತ್ತು ಇತರೆ ಉಪ ಉತ್ಪನ್ನಗಳ ಮಾರಾಟದಿಂದ ಬರುವ ಅಂತಿಮ ಆದಾಯವನ್ನು ಹಂಚಿಕೆ ಸೂತ್ರದ ಪ್ರಕಾರ ಪರಿಗಣಿಸಿ ಅಂತಿಮ ಕಬ್ಬಿನ ದರ ನಿರ್ಧರಿಸಲಾಗುವುದು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು 39 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದಾರೆ.

ಪ್ರಸ್ತುತ ಆದೇಶದ ಪ್ರಕಾರ ಕಬ್ಬು ಪೂರೈಕೆ ಮಾಡಿದ ರೈತರಿಗೆ ಎಲ್ಲಾ ಸಕ್ಕರೆ ಕಾರ್ಖಾನೆಗಳು ಮೊದಲ ಕಂತಿನಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ(ಎಫ್‌ಆರ್‌ಪಿ) ಜೊತೆಗೆ ಪ್ರತಿ ಟನ್ ಗೆ 100 ರೂಪಾಯಿ ಹೆಚ್ಚುವರಿ ಹಣ ಕೊಡಬೇಕು. ಎಥೆನಾಲ್ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳು 50 ರೂಪಾಯಿ ಹೆಚ್ಚುವರಿ ಕೊಡಬೇಕು ಎಂದು ಆದೇಶಿಸಲಾಗಿದೆ.

ಸದ್ಯ ಈ ಮೇಲಿನ ಮಾಹಿತಿ ದೊರೆತ ನಂತರ ಕಬ್ಬು ಬೆಳೆಗಾರರಿಗೆ ತುಸು ನಿರಾಳ ಅನಿಸಿದೆ. ಅದಲ್ಲದೆ ಕಬ್ಬು ಬೆಲೆಗಾರರ ಬಾಕಿ ಇರುವ ಸಮಸ್ಯೆಗಳು ಬೇಡಿಕೆಗಳನ್ನು ಈಡೇರಿಸಲು ಒಂದು ತಿಂಗಳು ಸಮಯವಕಾಶ ನೀಡಲಾಗಿದೆ.

Leave A Reply

Your email address will not be published.