‘KGF’ ಖ್ಯಾತಿಯ ತಾತ ಕೃಷ್ಣ ಜಿ .ರಾವ್ ನಿಧನ

ಕೆಜಿಎಫ್ ಸಿನಿಮಾದಲ್ಲಿ (KGF 2) ಕುರುಡ ಮುದುಕನ ಪಾತ್ರ ನಿಭಾಯಿಸಿದ ಹಿರಿಯ ನಟ ಕೃಷ್ಣ ಜಿ ರಾವ್ ನಿಧನರಾಗಿದ್ದಾರೆ.
ಡಿಸೆಂಬರ್ 1 ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದ KGF ಖ್ಯಾತಿಯ ತಾತ ಕೃಷ್ಣ ಜಿ .ರಾವ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಕೆಜಿಎಫ್ (KGF) ಸಿನಿಮಾದಿಂದ ಭಾರೀ ಖ್ಯಾತಿ ಪಡೆದು ನಂತರ ಕಿರುತೆರೆಯಲ್ಲಿ ನಟಿಸಿದ ತಾತಾ ಖ್ಯಾತಿಯ ಹಿರಿಯ ನಟ ಇಂದು ( ಡಿ.1) ಆಸ್ಪತ್ರೆಗೆ ದಾಖಲಾಗಿದ್ದರು.
ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾದಲ್ಲಿ ಯಶ್ ಜೊತೆ ನಟಿಸಿ ಪ್ರಸಿದ್ದಿ ಪಡೆದ ಕೃಷ್ಣ ಜಿ ರಾವ್ ಬೆಂಗಳೂರಿನ (Bengaluru) ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಂಬಂಧಿಕರ ಮನೆಗೆ ಹೋಗಿದ್ದ ಕೃಷ್ಣ ಜಿ ರಾವ್ ಅವರು ಸುಸ್ತಾದ ಕಾರಣ ಮಧ್ಯರಾತ್ರಿ ಆಸ್ಪತ್ರೆಗೆ ‌ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹಿರಿಯ ನಟ ನಿಧನರಾಗಿದ್ದಾರೆ.

ಅನಾರೋಗ್ಯದ ಕಾರಣ ಆಸ್ಪತ್ರೆಗೆ (Hopitalized) ‌ದಾಖಲಾದ ಕೃಷ್ಣ ಜಿ ರಾವ್ (Krishna G Rao) ಅವರ ಆರೋಗ್ಯ ಸ್ಥಿತಿ ತುಂಬ ಗಂಭೀರವಾಗಿದ್ದ ಹಿನ್ನೆಲೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ (ICU) ನೀಡಿದರೂ ಕೂಡ ಆರೋಗ್ಯದಲ್ಲಿ ಚೇತರಿಕೆ ಕಾಣದೇ ಅಸ್ವಸ್ಥರಾಗಿದ್ದು, ಇದೀಗ, ಆರೋಗ್ಯ ಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪಿ ಚಿಕಿತ್ಸೆ ಫಲಕಾರಿಯಾಗದೆ ಕೆಜಿಎಫ್ 2 ತಾತ ಕೃಷ್ಣ ಜಿ ರಾವ್ ನಿಧನರಾಗಿದ್ದಾರೆ.

Leave A Reply

Your email address will not be published.