ವೃದ್ಧನ ಮನೆಯನ್ನೇ ಹೆಗಲಿಗೇರಿಸಿ ಸಾಗಿಸಿದ 24 ಮಂದಿ! | ಕಾರಣ ಕೇಳಿದ್ರೆ ಮನಸ್ಸು ಕರಗೋದು ಖಂಡಿತ

ಇಂದಿನ ಕಾಲ ಹೇಗಾಗಿದೆ ಅಂದ್ರೆ ಒಂದು ಕುಟುಂಬವನ್ನು ಒಂದೆಡೆ ನೋಡುವುದೇ ಕಷ್ಟ ಎಂಬಂತಾಗಿದೆ. ಯಾಕಂದ್ರೆ, ಜಗತ್ತೇ ದ್ವೇಷ, ಜಗಳ, ಅಸೂಯೆ ಎಂಬ ಜ್ವಾಲೆಯಲ್ಲಿ ಕುದಿಯುತ್ತಿದೆ. ಇಂತಹ ವಿಭಿನ್ನ ಜನರ ನಡವಳಿಕೆಯ ನಡುವೆ ಇಲ್ಲೊಂದು ಸಮೂಹ ಹೃದಯಸ್ಪರ್ಶಿ ಕೆಲಸವನ್ನು ಮಾಡಿದೆ.

ಹೌದು. ವೃದ್ಧನೋರ್ವ ಒಂಟಿಯಾಗಿದ್ದಾನೆ ಎಂದು ಇಡೀ ಊರಿನ ಜನರು ಜೊತೆಯಾಗಿ ಸೇರಿ ಆತನ ಮನೆಯನ್ನೇ ವೃದ್ಧನ ಕುಟುಂಬದವರು ಇರುವಲ್ಲಿ ಸಾಗಿಸಿರುವ ವಿಡಿಯೋ ವೈರಲ್ ಆಗಿದೆ. ಇದು ಫಿಲಿಪೈನ್ಸ್​ನ ಝಂಬೊಂಗ ಡೆಲ್ ನೊರ್ಟೆ ನಡೆದ ಘಟನೆಯಾಗಿದ್ದು, ತನ್ನ ಮಗ ಮತ್ತು ಮೊಮ್ಮಕ್ಕಳೊಂದಿಗೆ ವಾಸಿಸಬೇಕೆಂದು ಇಚ್ಛಿಸಿದ ವಯೋವೃದ್ಧನ ಮನೆಯನ್ನೇ ಹೆಗಲ ಮೇಲೆ ಹೊತ್ತು ವೃದ್ಧನ ಆಸೆ ಈಡೇರಿಸಿದ್ಧಾರೆ ಫಿಲಿಪೈನ್ಸ್​ನ ಈ ಹಳ್ಳಿಗರು.

ವಿಡಿಯೋದಲ್ಲಿ ಕಾಣಿಸುವಂತೆ ವೃದ್ಧನ ಮನೆಯ ಕೆಳಭಾಗಕ್ಕೆ ಬಡಿಗೆಯನ್ನು ಕಟ್ಟಿದ ಜನರು ಒಂದೊಂದು ಬಡಿಗೆಗೆ ಒಬ್ಬರಂತೆ ನಿಂತು ಒಟ್ಟು 24 ಮಂದಿ ಈ ಮನೆಯನ್ನು ಸಾಗಿಸುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಅಂದಹಾಗೆ ಇದು ಸಿಮೆಂಟ್ ಮನೆಯಲ್ಲ. ಕಬ್ಬಿಣದ ತಗಡು, ಅಡಿಕೆ ಮರದ ತಟ್ಟೆ ಮೊದಲಾದವುಗಳಿಂದ ನಿರ್ಮಿಸಲಾದ ಚಿಕ್ಕದಾದ ಮನೆ. ಇದಕ್ಕೆ ಬಡಿಗೆ ಕಟ್ಟಿ ಮನೆಯನ್ನೇ ಹೆಗಲಿಗೇರಿಸಿ ಜನರು ಸಾಗಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಕಲ್ಲು ಮಣ್ಣಿನಿಂದ ಕೂಡಿದ ರಸ್ತೆಯಲ್ಲಿ 7 ಅಡಿಗಿಂತಲೂ ಅಧಿಕ ಎತ್ತರದ ಶೆಡ್ ನಂತಿರುವ ಈ ಮನೆಯನ್ನು ಊರಿನ ಜನರು ಹೊತ್ತು ಸಾಗಿದ್ದಾರೆ. ಅಂದಹಾಗೆ ಈ ಮನೆಯನ್ನು ಹೊತ್ತು ನಿಗದಿತ ಸ್ಥಳ ತಲುಪಲು ಜನರಿಗೆ 2 ಗಂಟೆಗಳ ಅವಧಿ ತಗುಲಿದೆಯಂತೆ.

ವೃದ್ಧನ ಹೆಂಡತಿ ತೀರಿ ಹೋಗಿದ್ದಾಳೆ. ಹಾಗಾಗಿ ಮಗ ಮತ್ತು ಸಂಬಂಧಿಕರು ಈ ವೃದ್ಧನೆಂದರೆ ಭಾರ ಎಂಬಂತೆ ವರ್ತಿಸುತ್ತಿದ್ದರು. ಆದರೆ ಈತನಿಗೆ ಮಗ, ಮೊಮ್ಮಕ್ಕಳೊಂದಿಗೆ ವಾಸಿಸಬೇಕು ಎನ್ನಿಸಿದೆ. ಹೀಗಾಗಿ ನೆರೆಹೊರೆಯವರು ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಈತನ ಮನೆಯನ್ನೇ ಹೊತ್ತು ಮಗನ ಮನೆಯ ಬಳಿ ಇರಿಸಿದ್ದಾರೆ.

ಗುಡ್ ನ್ಯೂಸ್ ಮೂವ್ ಮೆಂಟ್ಸ್ ಎಂಬ ಇನ್ ಸ್ಟಾಗ್ರಾಂ ಪೇಜ್ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಮಿಲಿಯನ್ ಗೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ನೆಟ್ಟಿಗರು ಈ ನಡೆಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಹೀಗೆ ಮನೆಯನ್ನೇ ಸಾಗಿಸುವ ದೃಶ್ಯವನ್ನು ಮೊದಲ ಬಾರಿಗೆ ನೋಡುತ್ತಿರುವುದು ಎನ್ನುತ್ತಿದ್ದಾರೆ.

https://www.instagram.com/reel/ClgoKkmscRN/?igshid=ZmVmZTY5ZGE=
Leave A Reply

Your email address will not be published.