Android TV : ಹೊಸ ವರ್ಷಕ್ಕೆ ಹೊಸ ಅಪ್ಡೇಟ್ ನೊಂದಿಗೆ ಬರಲಿದೆ ಅಂಡ್ರಾಯ್ಡ್ ಟಿವಿ | ಕಾರಣ ಇಷ್ಟೇ!

ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ
ಪ್ರಸ್ತುತ ಇತ್ತೀಚೆಗೆ ಆಂಡ್ರಾಯ್ಡ್​ ಟಿವಿಗಳ ಬೇಡಿಕೆ ಬಹಳಷ್ಟು ಕಡಿಮೆಯಾಗುವುದನ್ನು ಕಂಡು ಮುಂದಿನ ವರ್ಷದಿಂದ ಈ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಗೂಗಲ್ ಆಂಡ್ರಾಯ್ಡ್​ ಟಿವಿಗಳಲ್ಲಿ ಹೊಸ ಅಪ್​ಡೇಟ್ಸ್​​ ತರಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಎಲ್ಲಾ ತಂತ್ರಜ್ಞಾನಗಳು ಬಹಳಷ್ಟು ಸ್ಮಾರ್ಟ್ ಆಗುತ್ತಿವೆ. ತಂತ್ರಜ್ಞಾನ ಕಂಪನಿಗಳು ಈಗಿನ ಸಾಧನಕ್ಕೆ ಹೊಸ ಹೊಸ ಫೀಚರ್ಸ್ ಅನ್ನು ಪರಿಚಯಿಸುತ್ತಿದೆ. ಸ್ಮಾರ್ಟ್ ವಾಚ್‌ಗಳು ಮತ್ತು ಟಿವಿಗಳು, ಮೊಬೈಲ್ ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಬಹಳಷ್ಟು ಸಂಚಲನ ಮೂಡಿಸಿವೆ. ಅದಲ್ಲದೆ ಅನೇಕ ಕಂಪನಿಗಳು ಆಂಡ್ರಾಯ್ಡ್ ಟಿವಿಗಳನ್ನು ಪ್ರಾರಂಭಿಸುತ್ತಿವೆ. ಆದರೆ ಟಿವಿಯ ಗುಣಮಟ್ಟವನ್ನು ಸುಧಾರಿಸುವ ಹೆಚ್ಚಿನ ಅಪ್ಡೇಟ್​ಗಳಿಲ್ಲ. ಆದರೆ ಪ್ರಸ್ತುತವಾಗಿ ಗೂಗಲ್ ತನ್ನ ಆಂಡ್ರಾಯ್ಡ್ ಟಿವಿ/ಗೂಗಲ್ ಟಿವಿ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಅನೇಕ ಬದಲಾವಣೆಗಳು ಮತ್ತು ಸುಧಾರಣೆಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ. ಮುಂದಿನ ವರ್ಷದಿಂದ ಇದರ ಸ್ಮಾರ್ಟ್ ಟಿವಿಗಳು ಬಹಳಷ್ಟು ಫೀಚರ್ಸ್​ನೊಂದಿಗೆ ಬರಲಿದೆ ಎಂದು ತಂತ್ರಜ್ಞರು ಹೇಳಿದ್ದಾರೆ.

ಅನೇಕ ಬ್ರ್ಯಾಂಡ್‌ಗಳು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವಾಗ, ಅವುಗಳನ್ನು ಸುರಕ್ಷಿತವಾಗಿರಿಸಲು ಇತ್ತೀಚಿನ ಕೆಲವೊಂದು ಕಂಪನಿಗಳು ಗಮನಹರಿಸುವುದಿಲ್ಲ. ಈ ಕಾರಣಗಳಿಂದ ಆಂಡ್ರಾಯ್ಡ್ ಟಿವಿಗಳು ಮಾರುಕಟ್ಟೆಯಲ್ಲಿ ನಿರೀಕ್ಷಿತ ಬೇಡಿಕೆಯನ್ನು ಪಡೆಯುತ್ತಿಲ್ಲ. ಆದರೆ ಗೂಗಲ್ ಆಂಡ್ರಾಯ್ಡ್ ಟಿವಿಗಳನ್ನು ನವೀಕರಿಸುವತ್ತ ಗಮನ ಹರಿಸಿದೆ.

ಆಂಡ್ರಾಯ್ಡ್ ಟಿವಿಗಳಲ್ಲಿ ನೀಡಲಾಗುತ್ತಿರುವ ನವೀಕರಣಗಳನ್ನು ಗೂಗಲ್ ಇದೀಗ ಬಿಡುಗಡೆ ಮಾಡಿದೆ. ಗೂಗಲ್​ನ ಇದೀಗ ಅಸ್ತಿತ್ವದಲ್ಲಿರುವ ಆಂಡ್ರಾಯ್ಡ್​ ಟಿವಿ ಪ್ಲಾಟ್‌ಫಾರ್ಮ್‌ಗೆ ಸಹ ಅನ್ವಯಿಸುತ್ತವೆ. ಅಪ್ಲಿಕೇಶನ್ ಡೆವಲಪರ್‌ಗಳು ತಮ್ಮ ಅಪ್ಲಿಕೇಶನ್‌ಗಳನ್ನು ಹೆಚ್ಚು ಗುಣಮಟ್ಟದಲ್ಲಿರುವಂತೆ ಮಾಡಲು ಮರುವಿನ್ಯಾಸಗೊಳಿಸಬೇಕು ಎಂದು ಗೂಗಲ್ ಚಿಂತಿಸಿದೆ.

ಇಂದಿನ ಬಹುತೇಕ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿಗಳು ಕೇವಲ 8GB ಆಂತರಿಕ ಮೆಮೊರಿಯೊಂದಿಗೆ ಬರುತ್ತವೆ. ಇದರಿಂದ ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಸಂಗ್ರಹಿಸಲು ಸಾಧ್ಯವಿರಲಿಲ್ಲ ಅಥವಾ ಹೊಸ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಲು ಹಳೆಯ ಯಾವುದಾದರೂ ಒಂದು ಅಪ್ಲಿಕೇಶನ್ ಡಿಲೀಟ್ ಮಾಡಬೇಕಿತ್ತು. ಈ ತೊಂದರೆಯನ್ನು ಹೋಗಲಾಡಿಸಲು ಗೂಗಲ್ ಟಿವಿ ತಯಾರಕರಿಗೆ ಗೋ-ಟು ಸ್ಟ್ಯಾಂಡರ್ಡ್ ಆಯ್ಕೆ ನೀಡಿದೆ. ಈ ಬೆಳವಣಿಗೆಯನ್ನು ಈ ವಾರ ಗೂಗಲ್ ದೃಢೀಕರಿಸಿದ್ದು, ಗೂಗಲ್ ಎಲ್ಲಾ ಡೆವಲಪರ್‌ಗಳಿಗೆ ತಮ್ಮ ಅಪ್ಲಿಕೇಶನ್ಗಳನ್ನು ಹಗುರವಾಗಿಸಲು ಮರುವಿನ್ಯಾಸಗೊಳಿಸಲು ಸೂಚನೆಯನ್ನು ನೀಡಿದೆ.​

ಇಂಜಿನಿಯರ್‌ಗಳು ಮೂರು ದಿನಗಳಲ್ಲಿ APK ಯಿಂದ AAB ಗೆ ಪರಿವರ್ತನೆ ಮಾಡಲು ಗೂಗಲ್ ಆದೇಶಿಸಿದೆ. ಹೊಸ ಮಾನದಂಡಗಳನ್ನು ಪೂರೈಸದ ಯಾವುದೇ ಅಪ್ಲಿಕೇಶನ್ ಟಿವಿಗಳನ್ನು ಇಂಟರ್ಫೇಸ್‌ನಿಂದ ತೆಗೆದು ಹಾಕಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಈ ಮೇಲಿನ ಬದಲಾವಣೆಗಳು ಸ್ಮಾರ್ಟ್ ಟಿವಿಗಳು ಹೆಚ್ಚು ಸಮಯ ಮತ್ತು ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಈ ರೀತಿಯ ಹೊಸ ಅಪ್​ಡೇಟ್​ಗಳು ಟಿವಿಯನ್ನು ಕೆಲವೊಂದು ಹಾನಿಗಳಿಂದ ರಕ್ಷಿಸುತ್ತವೆ. ಇದಕ್ಕಾಗಿಯೇ ಗೂಗಲ್ ತನ್ನ ಟಿವಿ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದೆ. ಆದರೆ ಈಗ ಡೆವಲಪರ್‌ಗಳು ಮತ್ತು ಟಿವಿ ಬ್ರ್ಯಾಂಡ್‌ಗಳು ಸಹ ಗ್ರಾಹಕರಿಗೆ ಪ್ರಯೋಜನಗಳನ್ನು ಒದಗಿಸಲು ಪ್ರಯತ್ನ ಪಡಬೇಕಾಗಿದೆ.

ತಂತ್ರಜ್ಞರು ಪ್ರಕಾರ ಈ ಮೇಲಿನ ನಿರ್ಧಾರವನ್ನು ಟೆಲಿವಿಷನ್​ ಮಾರುಕಟ್ಟೆಯಲ್ಲಿ ಆಗುತ್ತಿರುವ ಕುಸಿತವನ್ನು ಮನದಟ್ಟು ಮಾಡಿಕೊಂಡು ಗೂಗಲ್ ತೆಗೆದುಕೊಂಡಂತಹ ನಿರ್ಧಾರ ಅನ್ನಬಹುದು. ಆದರೆ ಇವೆಲ್ಲವೂ ಮುಂದಿನ 2023ರ ಹೊತ್ತಿಗೆ ಹೊಸದಾಗಿ ರೂಪುಗೊಳ್ಳಲಿದ್ದು ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್​ ಟಿವಿಗಳು ಹೊಸ ಸಂಚಲನವನ್ನು ಮೂಡಿಸಲಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

Leave A Reply

Your email address will not be published.