ಪೋಷಕರ ನಡವಳಿಕೆಯ ಮೇಲೆ ಮಕ್ಕಳ ಭವಿಷ್ಯ ನಿಂತಿದೆ!

ಮಕ್ಕಳು ತಾನು ಯಾರೊಂದಿಗೆ ಹೆಚ್ಚು ಹೊತ್ತು ಕಾಲ ಕಳೆಯುತ್ತದೆಯೋ ಅವರ ಬುದ್ಧಿಯನ್ನು ಹೆಚ್ಚಾಗಿ ಕಲಿಯುತ್ತದೆ. ಬೆಳೆಯುತ್ತಾ ಬೆಳೆಯುತ್ತಾ ಅವರಂತೆಯೇ ಜೀವನ ಶೈಲಿಯನ್ನು ಅನುಸರಿಸುತ್ತದೆ. ಹೀಗಾಗಿ ಮಗು ಯಾರೊಂದಿಗೆ ಹೆಚ್ಚಾಗಿ ಇರುತ್ತದೆಯೋ ಅವರು ಚೆನ್ನಾಗಿ ನೋಡಿಕೊಳ್ಳ ಬೇಕು.

 

ತಂದೆ ಮತ್ತು ತಾಯಿ ಮಗುವಿನ ಎದುರು ಫೋನಿನಲ್ಲಿ ಮಾತನಾಡುವಾಗ ಹೆಚ್ಚಾಗಿ ಶಾಂತ ರೀತಿಯಲ್ಲಿ ವರ್ತಿಸಬೇಕು. ಪೊಲೈಟ್​ ಆಗಿ ಮಾತನಾಡಬೇಕು. ಇವೆಲ್ಲವನ್ನೂ ಮಕ್ಕಳು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತವೆ. ಹೀಗಾಗಿ ಅವರ ಮುಂದೆ ಕೋಪಗೊಳ್ಳುವುದು ಅತೀ ಕಡಿಮೆ ಮಾಡಬೇಕು.

ಸುಳ್ಳು ಹೇಳಬಾರದು. ಸತ್ಯ ಏನು ಎಂಬುದು ಮಕ್ಕಳಿಗೆ ತಿಳಿದಿರುತ್ತದೆ. ನೀವು ತಪ್ಪನ್ನು ಮಾಡಿದರೆ ಅವರೂ ಕೂಡ ಅಪ್ಪಅಮ್ಮನೇ ತಪ್ಪು ಮಾಡ್ತಾರೆ, ನಾವು ಮಾಡಿದರೆ ಏನು ಪಾಪಾ ಇಲ್ಲ ಎಂದು ಅವರೂ ತಪ್ಪುಗಳನ್ನು ಮಾಡುತ್ತಾರೆ.

ಹೆಚ್ಚಾಗಿ ಕಥೆಗಳನ್ನು ಹೇಳಬೇಕು. ಅಂದರೆ ಜೀವನಕ್ಕೆ ಸಂಬಂಧ ಪಟ್ಟ ಮಾಹಿತಿಗಳನ್ನು ಸೃಜನಾತ್ಮಕವಾಗಿ ಕಥೆಗಳ ಮೂಲಕ ಮಕ್ಕಳಿಗೆ ಹೇಳಬೇಕು. ಜೊತೆಗೆ ಪುಸ್ಕಗಳನ್ನು ಓದಲು ಆದ್ಯತೆಯನ್ನು ನೀಡಬೇಕು.

ಮಕ್ಕಳಿಗೆ ಯಾವುದೇ ಕಾರಣಕ್ಕೂ ಅವರ ಇಷ್ಟಗಳಿಗೆ ಕಡಿವಾಣ ಹಾಕಬಾರದು. ತಪ್ಪು ಕೆಲಸ ಇಷ್ಟ ಎಂದರೆ ಅದಕ್ಕೆ ಸರಿಯಾದ ಮಾರ್ಗದರ್ಶನದ ಮೂಲಕ ಹೊರಗೆ ತರಬೇಕು. ಹೊಡೆಯುವುದು ಒಂದೇ ದಾರಿ ಅಲ್ಲ.

ಹೀಗೆ ತನ್ನ ತಂದೆ ಮತ್ತು ತಾಯಿ ಹೇಗೆ ವರ್ತಿಸುತ್ತಾರೆಯೋ, ಹಾಗೆ ಮಕ್ಕಳು ಕೂಡ ಎಲ್ರೊಂದಿಗೆ ಬೆರೆಯುತ್ತಾರೆ.

Leave A Reply

Your email address will not be published.