BBK9 : ಬಿಗ್ ಬಾಸ್ ಸ್ಪರ್ಧಿಗಳಿಗೆ ರೆಡಿಯಾಯಿತು ಕಿಚ್ಚನ ಕೈ ಅಡುಗೆ ! ವೀಡಿಯೋ ವೈರಲ್!!!

ಕನ್ನಡದ ಮನರಂಜನೆಯನ್ನು ಉಣಬಡಿಸುವ ರಿಯಾಲಿಟಿ ಶೋನಲ್ಲಿ ಜನಪ್ರಿಯವಾಗಿರುವ ಬಿಗ್ ಬಾಸ್ ಮನೆಯಲ್ಲಿ ತಮಾಷೆ, ಜಗಳ , ಲವ್ ಕಹಾನಿ ನಡೆಯುವುದು ಸಾಮಾನ್ಯ. ಕನ್ನಡ ಬಿಗ್ ಬಾಸ್ ಸೀಸನ್ 9’ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ. ಹಳೆಯ ಸ್ಪರ್ಧಿಗಳ ಜತೆ ಹೊಸ ಸ್ಪರ್ಧಿಗಳು ಬೆರೆತಿದ್ದಾರೆ. ಕೆಲವೊಮ್ಮೆ ಬಿಗ್ ಬಾಸ್ ಮನೆ ರಣರಂಗವಾದ ನಿದರ್ಶನ ಕೂಡ ಇದೆ. ಅದರಲ್ಲಿ ಅಡುಗೆ ವಿಚಾರದಲ್ಲಿ ಕೂಡ ಮನೆಯಲ್ಲಿ ಸಾಕಷ್ಟು ಬಾರಿ ಕಿತ್ತಾಟ ನಡೆದಿವೆ. ಈ ನಡುವೆ ಕಿಚ್ಚ ತಮ್ಮ ಕೈಯಾರೆ ಅಡಿಗೆ ಮಾಡಿ ಸ್ಪರ್ಧಿಗಳಿಗೆ ಕಳುಹಿಸಿಕೊಟ್ಟಿದ್ದಾರೆ.

ಕನ್ನಡದಲ್ಲಿ ಬಿಗ್ ಬಾಸ್ (Bigg Boss) ಸೀಸನ್ ಶುರುವಾದಾಗಿನಿಂದ ಕಿಚ್ಚ ಸುದೀಪ್ ಅವರೇ ಸಾರಥ್ಯ ವಹಿಸಿಕೊಂಡಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳನ್ನು ಅವರು ಮನೆ ಸದಸ್ಯರಂತೆ ನೋಡಿಕೊಳ್ಳುವುದು ವಿಶೇಷ . ಇದಷ್ಟೇ ಅಲ್ಲದೆ, ಬಿಗ್ ಬಾಸ್​ ಮನೆಯಿಂದ ಆಟಗಾರರು ಹೊರ ಬಂದ ನಂತರವೂ ಸ್ಪರ್ಧಿಗಳ ಜತೆ ಉತ್ತಮ ಬಾಂಧವ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಕೆಲವರಿಗೆ ಅಡಿಗೆ ಮನೆ ಎಂದರೆ ಖುಷಿಯ ಕೆಲಸ ಮತ್ತೆ ಕೆಲವರಿಗೆ ಅಡುಗೆ ಮನೆಯ ನೆರಳ ಕಂಡರು ಸಹ ಆಗದು. ಈ ವಾರ ಟಾಸ್ಕ್​ ಆಡಿ ದಣಿದಿದ್ದರಿಂದ ಸ್ಪರ್ಧಿಗಳಿಗೆ ಸುದೀಪ್ ಅವರು ಪ್ರೀತಿಯಿಂದ ಅಡುಗೆ ಮಾಡಿ ಕಳುಹಿಸಿದ್ದಾರೆ.

ಈ ವಾರ ಗೊಂಬೆ ಮಾಡುವ ಟಾಸ್ಕ್ ನೀಡಲಾಗಿದ್ದು, ಆಟದಿಂದ ಎಲ್ಲರೂ ದಣಿದಿದ್ದಾರೆ. ಇದಲ್ಲದೆ, ಮನೆಯಲ್ಲಿ ದಿನಸಿ ಕೂಡ ಕಡಿಮೆ ಇದ್ದುದರಿಂದ ಸ್ಪರ್ಧಿಗಳ ಚಿಂತೆಗೆ ಕಾರಣವಾಗಿತ್ತು. ವಾರಾಂತ್ಯಕ್ಕೆ ಉಪವಾಸ ಇರುವ ಪರಿಸ್ಥಿತಿ ಬಂದೊದಗಬಹುದು ಎಂದೆ ಸ್ಪರ್ಧಿಗಳು ಅಂದುಕೊಂಡಿದ್ದರು. ಆದರೆ, ಹಾಗಾಗದೆ, ಕಿಚ್ಚ ಸುದೀಪ್ ಅವರ ಕೈರುಚಿ ಸವಿಯುವ ಸುವರ್ಣ ಅವಕಾಶ ಸ್ಪರ್ಧಿಗಳಿಗೆ ಸಿಕ್ಕಿದೆ.

ಕೆಲ ಸೀಸನ್​ಗಳಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಸ್ಪರ್ಧಿಗಳಿಗೆ ಅಡುಗೆ ಮಾಡಿ ಕೊಟ್ಟಿದ್ದರು. ಅದು ಈ ಬಾರಿಯೂ ಮುಂದುವರಿದಿದ್ದು, ಈ ಬಾರಿ ಕಿಚ್ಚರವರು, ಸ್ಪರ್ಧಿಗಳಿಗೆ ವಿವಿಧ ಬಗೆಯ ಅಡುಗೆ ಮಾಡಿ ಕಳುಹಿಸಿದ್ದಾರೆ. ಕಿಚ್ಚ ಸುದೀಪ್ ಅವರು ಕಿಚನ್​ನಲ್ಲಿ ಅಡುಗೆ ಮಾಡುತ್ತಿರುವುದು, ಮಾಡಿದ ಅಡುಗೆಯನ್ನು ಮನೆಯವರಿಗೆ ಕಳುಹಿಸಿದ್ದಾರೆ. ಸ್ಪರ್ಧಿಗಳಂತೂ ಕಿಚ್ಚನ ಕೈರುಚಿ ಬಾಯಿ ಚಪ್ಪರಿಸಿ ಸವಿದು ಖುಶಿ ಪಟ್ಟಿದ್ದಾರೆ.

ಬಿಗ್ ಬಾಸ್ ಮನೆ ಮಂದಿ ಬೊಂಬಾಟ್ ಅಡಿಗೆ ಸವಿದು ರಿಯಾಕ್ಷನ್ ನೀಡಿದ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಅಭಿಮಾನಿ ವರ್ಗ ನಾನಾ ಬಗೆಯ ಕಮೆಂಟ್ ಮಾಡುತ್ತಿದ್ದಾರೆ.

https://www.instagram.com/p/ClIe0R7IWQa/?utm_source=ig_web_copy_link

Leave A Reply

Your email address will not be published.