BSNL : ಬಿಎಸ್ಎನ್ ಎಲ್ ನಿಂದ 4G-5G ಸೇವೆ ಆರಂಭ ಶೀಘ್ರದಲ್ಲೇ |
ಟೆಲಿಕಾಮ್ ದೈತ್ಯ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ 4G ಸೇವೆಯಿಂದ 5G ಸೇವೆ ನೀಡಲು ಅಣಿಯಾಗುತ್ತಿದ್ದು, ಹೊಸ ರೀಚಾರ್ಜ್ ಪ್ಲಾನ್ ತಂದಿದ್ದು ಕೂಡಾ ತಿಳಿದಿರುವ ಸಂಗತಿಯಾಗಿದೆ.
ಈ ನಡುವೆ ಬಿಎಸ್‌ಎನ್‌ಎಲ್ ಕೂಡ ತನ್ನ ಗ್ರಾಹಕರಿಗೆ ಆಫರ್ ನೀಡಲು ಮುಂದಾಗಿದ್ದು ಹಳೆಯ ಸಂಗತಿ.ಟೆಲಿಕಾಂ ಕಂಪನಿಗಳು ಕೆಲವು ವಲಯಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಿದ ಬೆನ್ನಲ್ಲೆ, ಸಾರ್ವಜನಿಕ ವಲಯದ ಟೆಲಿಕಾಂ ದೈತ್ಯ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸಹ 5G ಸೇವೆಗಳನ್ನು ನೀಡಲು ಯೋಜನೆ ಹಾಕಿ ಕೊಂಡಿದೆ.
ಕೆಲವು ವರ್ಷಗಳ ಹಿಂದೆ ಟೆಲಿಕಾಂ ಮಾರುಕಟ್ಟೆ ಯಲ್ಲಿ ತನ್ನದೇ ಛಾಪು ಮೂಡಿಸಿ ನಂಬರ್ ಒನ್ ಸ್ಥಾನದಲ್ಲಿದ್ದ ಸರ್ಕಾರಿ ಒಡೆತನದ ಭಾರತೀಯ ಸಂಚಾರ್ ನಿಗಮ ಲಿಮಿಟೆಡ್ ಬಿಎಸ್‌ಎನ್‌ಎಲ್ (BSNL) ಇದೀಗ ಪಾತಾಳಕ್ಕೆ ಕುಸಿದ ಬಳಿಕ ಮೇಲೇಳಲು ಹರಸಾಹಸ ಪಡುತ್ತಿದೆ.
ಇತ್ತೀಚೆಗಷ್ಟೇ, ಬಿಎಸ್‌ಎನ್‌ಎಲ್ 269 ರೂ. ಹಾಗೂ 769 ರೂ. ವಿನ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿ ಅನಿಯಮಿತ ಕರೆಗಳ ಯೋಜನೆ ಮೂಲಕ ಗ್ರಾಹಕರಿಗೆ ಸಹಕಾರಿಯಾಗಿದೆ.
ದೇಶದ ಪ್ರಮುಖ ಮೊಬೈಲ್ ಸೇವಾ ಸಂಸ್ಥೆಗಳಾದ ರಿಲಯನ್ಸ್ ಜಿಯೋ (Reliance Jio), ಏರ್ಟೆಲ್ (Airtel) ಹಾಗೂ ವೋಡಾಫೋನ್ ಐಡಿಯಾ (Vodafone Idea) ಇತ್ತೀಚೆಗೆ ಜಿದ್ದಿಗೆ ಬಿದ್ದವರಂತೆ ತಮ್ಮ ಯೋಜನೆಗಳನ್ನು ದುಬಾರಿಗೊಳಿಸಿರುವುದಲ್ಲದೆ, ಜೊತೆಗೆ 5ಜಿ ಸೇವೆಯನ್ನು ಕೂಡ ಪರಿಚಯಿಸುತ್ತಿರುವುದರಿಂದ ಹೀಗಿರುವಾಗ ಬಿಎಸ್‌ಎನ್‌ಎಲ್ ಸದ್ದಿಲ್ಲದೆ ಎರಡು ಹೊಸ ಧಮಾಕ ಯೋಜನೆಗಳನ್ನು ಅನಾವರಣ ಮಾಡಿತ್ತು.
ಇದೀಗ ಬಿಎಸ್‌ಎನ್‌ಎಲ್ ದೇಶಾದ್ಯಂತ 5G ಹಾಗೂ 4G ಸೇವೆಗಳನ್ನು ಪ್ರಾರಂಭಿಸಲು ಕಂಪನಿ ನಿರ್ಧರಿಸಿದೆ. ಕಂಪನಿಯು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಜೊತೆ ಒಪ್ಪಂದಕ್ಕೂ ಸಹಿ ಹಾಕಿದೆ ಎಂಬ ವಿಚಾರ ಹರಿದಾಡುತ್ತಿದೆ. ಈಗಾಗಲೆ, ಟೆಲಿಕಾಂ ದೈತ್ಯ ಕಂಪನಿಗಳು ಕೆಲವು ವಲಯಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸಿದ್ದು, ಕಂಪನಿಗಳು ಈ ನೆಟ್‌ವರ್ಕ್ ಸೇವೆಗಳನ್ನು ಹಂತ ಹಂತವಾಗಿ ವಿಸ್ತರಿಸುವ ಗುರಿಯನ್ನು ಹೊಂದಿವೆ.
ಆದರೆ ಸಾರ್ವಜನಿಕ ವಲಯದ ಟೆಲಿಕಾಂ ದೈತ್ಯ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸಹ 5G ಸೇವೆಗಳ ಮೇಲೆ ಕಣ್ಣಿಟ್ಟಿದೆ.
ಸರಕಾರದ ನೀತಿಗಳು, ಖಾಸಗಿ ಟೆಲಿಕಾಂ ಕಂಪನಿಗಳು ದರ ಸಮರ ಸೇರಿ ಅನೇಕ ಕಾರಣಗಳಿಂದ ಬಿಎಸ್‌ಎನ್‌ಎಲ್ ದೊಡ್ದ ಮಟ್ಟದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದರೂ ಕೂಡ ಗ್ರಾಹಕರಿಗೆ ನೆರವಾಗಲು ಮುಂದಾಗಿದೆ.
TCS ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಜೊತೆಗಿನ ಸಂಬಂಧಗಳು BSNL ತನ್ನ 4G ಮತ್ತು 5G ನೆಟ್‌ವರ್ಕ್‌ಗಳನ್ನು ಭಾರತದಲ್ಲಿ ಹೊರತರಲು ಸಹಾಯ ಮಾಡುತ್ತದೆ.
4G ತಂತ್ರಜ್ಞಾನಕ್ಕಾಗಿ, TCS ರೇಡಿಯೊ ಉಪಕರಣಗಳಿಗಾಗಿ ಭಾರತ ಸರ್ಕಾರದ ಟೆಲಿಕಾಂ ತಂತ್ರಜ್ಞಾನ ಡೆವಲಪರ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (C-DOT) ನೊಂದಿಗೆ ಸಹಕರಿಸುತ್ತಿದೆ.
ಇತ್ತೀಚೆಗೆ TCS ಮತ್ತು BSNL ದೇಶಾದ್ಯಂತ ತಮ್ಮ 4G ಸೇವೆಗಳನ್ನು ಒದಗಿಸಲು ಎರಡು ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿರುವ ಕುರಿತು ವದಂತಿಗಳು ಹರಿದಾಡುತ್ತಿದ್ದು, ಗಾಳಿ ಸುದ್ದಿ ನಿಜವಾದರೆ, ಈ ಎರಡು ಕಂಪನಿಗಳ ಸಹಭಾಗಿತ್ವದಲ್ಲಿ 4G ಮತ್ತು 5G ನೆಟ್‌ವರ್ಕ್ ಆದಷ್ಟು ಬೇಗ ಲಭ್ಯವಾಗಲಿದೆ.
BSNL ಮುಂದಿನ ವರ್ಷ ಜನವರಿಯಲ್ಲಿ ದೇಶಾದ್ಯಂತ 4G ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆ ದಟ್ಟವಾಗಿದೆ.
ಈ ವರ್ಷದ ಸೆಪ್ಟೆಂಬರ್ ವೇಳೆಗೆ 4G ನೆಟ್‌ವರ್ಕ್ ಲಭ್ಯವಾಗುವ ನಿರೀಕ್ಷೆ ಇದೆ . ಮುಂದಿನ ವರ್ಷದ ಆಗಸ್ಟ್ ವೇಳೆಗೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್‌ನಲ್ಲಿ 5ಜಿ ಸೇವೆಗಳು ಲಭ್ಯವಾಗಲಿವೆ’ ಎಂದು ಕೇಂದ್ರ ಸಚಿವರು ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದು, BSNL ಜನವರಿ ಮೊದಲ ವಾರದಲ್ಲಿ 4G ಸೇವೆಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ .
ಈ ಟೆಲಿಕಾಂ ಆಪರೇಟರ್ ಆಗಸ್ಟ್ 2023 ರಿಂದ 5G ನೆಟ್‌ವರ್ಕ್ ಅನ್ನು ಪ್ರಾರಂಭಿಸುತ್ತದೆ ಎಂದು ವರದಿಯಾಗಿದೆ.