Google : ಗೂಗಲ್ ನಲ್ಲಿ ತಪ್ಪಿಯೂ ಈ ರೀತಿ ಸರ್ಚ್ ಮಾಡದಿರಿ!!!

ಮೊಬೈಲ್ ಎಂಬ ಮಾಯಾವಿ ಮಾರುಕಟ್ಟೆ ಪ್ರವೇಶಿಸಿದ ಬಳಿಕ ಸರ್ವಾಂತರ್ಯಾಮಿ ಸಾಧನವಾಗಿ ಪ್ರತಿ ಕೆಲಸ ಕಾರ್ಯಗಳಲ್ಲೂ ಕೂಡ ಜನತೆಯ ಜೀವನದೊಂದಿಗೆ ಹಾಸು ಹೊಕ್ಕಾಗಿದೆ. ಬೆಳಿಗ್ಗೆ ಎದ್ದಾಗಲಿಂದ ರಾತ್ರಿ ಮಲಗುವವರೆಗೆ ಅರೆ ಕ್ಷಣ ಬಿಟ್ಟಿರಲಾರದಷ್ಟು ಮೊಬೈಲ್ ಎಂಬ ಸಾಧನಕ್ಕೆ ಅವಲಂಬಿತರಾಗಿದ್ದಾರೆ.


ಮೊಬೈಲ್ ಎಂಬ ಸಾಧನ ಬರುವ ಮೊದಲು ಏನೇ ಅನುಮಾನಗಳು ಬಂದರು ಕೂಡ ಹಿರಿಯರ ಇಲ್ಲವೇ ವಿಚಾರಗಳ ತಿಳಿದ ಪಂಡಿತರ ಅಥವಾ ದಿನಪತ್ರಿಕೆಗಳ ಮೊರೆ ಹೋಗುವುದು ವಾಡಿಕೆಯಾಗಿತ್ತು ಆದರೆ ಈಗ ಕಾಲ ಬದಲಾಗಿದ್ದು, ಸಣ್ಣ ಸಣ್ಣ ವಿಚಾರಕ್ಕೂ ಅನ್ವೇಷಣೆ ನಡೆಸಲು ಗೂಗಲ್ ಸರ್ಚ್ ಆಪ್ಷನ್ ಒತ್ತಿದರೆ ಸಾಕು…ಬೇಕಾದ ಮಾಹಿತಿ ಲಭ್ಯವಾಗುತ್ತದೆ.

ಹೀಗೆ ಹುಡುಕಾಟ ನಡೆಸುವಾಗ ಕೆಲವೊಂದು ವಿಷಯಗಳ ಬಗ್ಗೆ ಎಚ್ಚರ ವಹಿಸುವುದು ಅವಶ್ಯಕ.
ಸರಳ ಹಾಗೂ ಸುಲಭವಾಗಿ ಮಾಹಿತಿ ಪಡೆಯಲು ದೇಶವ್ಯಾಪಿ ಬಳಕೆಯಾಗುವ ಗೂಗಲ್ ಸರ್ಚ್ ನಲ್ಲಿ ಕೆಲ ನಿಯಮಗಳಿದ್ದು, ನಿಯಮದ ವಿರುದ್ಧವಾಗಿ ಕೆಲ ವಿಚಾರಗಳನ್ನು ಕಲೆ ಹಾಕಲು ಯತ್ನಿಸಿದರೆ ಅವರ ಐಪಿ ಅಡ್ರೆಸ್ (IP Address) ನೇರವಾಗಿ ಭದ್ರತಾ ಸಂಸ್ಥೆಗಳಿಗೆ ತೆರಳುತ್ತದೆ. ಹೀಗಾಗಿ ಎಲ್ಲದಕ್ಕೂ ಗೂಗಲ್ ಸರ್ಚ್ ಎಂಜಿನ್ ಅನ್ನು ಆಶ್ರಯಿಸುವವರು ಜಾಗರೂಕರಾಗಿರಬೇಕು.

ಇಲ್ಲದಿದ್ದರೆ ಅದರಿಂದ ತೊಂದರೆಗಳು ಎದುರಾಗಬಹುದು. ಹಾಗಾಗಿ, ಗೂಗಲ್​ನಲ್ಲಿ ಯಾವ ವಿಷಯಗಳನ್ನು ಹುಡುಕಬೇಕು ಅಥವಾ ಹುಡುಕಬಾರದು ಎಂಬ ಬಗ್ಗೆ ಮಾಹಿತಿ ತಿಳಿದಿರುವುದು ಬಹಳ ಮುಖ್ಯವಾಗುತ್ತದೆ.
ಗೂಗಲ್​ನಲ್ಲಿ ಬ್ಯಾಂಕಿನ ವೆಬ್‌ಸೈಟ್ ಮತ್ತು URL ಅನ್ನು ಸರ್ಚ್ ಮಾಡುವುದು ಸಹಜ ಆದರೆ, ಈ ಅನ್ವೇಷಣೆ ಯಿಂದ ನಿಮ್ಮ ವಿವರಗಳನ್ನು ಹ್ಯಾಕರ್‌ಗಳು ಕದಿಯುವ ಸಾಧ್ಯತೆ ದಟ್ಟವಾಗಿದೆ.

ಆನ್‌ಲೈನ್ ಬ್ಯಾಂಕಿಂಗ್ ಅನ್ನು ಬಳಸಬೇಕಾದರೆ, ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನ URL ಅನ್ನು ನೇರವಾಗಿ ನಮೂದಿಸಿದ ಬಳಿಕ ಗೂಗಲ್‌ನಲ್ಲಿ ಬ್ಯಾಂಕಿಂಗ್ ಸೈಟ್‌ಗಳನ್ನು ಹುಡುಕುವಾಗ ತೆರೆಯುವ ಪೇಜ್ ಗಳು ಇತರ ಫಿಶಿಂಗ್ ವೆಬ್‌ಸೈಟ್‌ಗಳನ್ನು ಸಹ ಬಹಿರಂಗಪಡಿಸಬಹುದಾಗಿದೆ.

ಹಾಗಾಗಿ, ತಿಳಿಯದೆ ನೀವು ಈ ವೆಬ್‌ಸೈಟ್‌ಗಳನ್ನು ತೆರೆಯುವ ಸಾಧ್ಯತೆ ಇದ್ದು, ನೀವು ಇಲ್ಲಿ ಬ್ಯಾಂಕಿಂಗ್ ವಿವರಗಳನ್ನು ನಮೂದಿಸಿದರೆ, ಅದನ್ನು ಹ್ಯಾಕರ್‌ಗಳು ತಮ್ಮ ಹಿಡಿತಕ್ಕೆ ಪಡೆದುಕೊಂಡು ನಿಮ್ಮ ಖಾತೆಯನ್ನು ಖಾಲಿ ಮಾಡುವ ಅಪಾಯ ಕೂಡ ಇದ್ದು, ಜಾಗ್ರತೆ ವಹಿಸುವುದು ಅಗತ್ಯವಾಗಿದೆ.


ಯಾವುದೇ ಹೊಸ ಅಪ್ಲಿಕೇಶನ್ ಬಂದಾಗ, ಅದರ ಹುಡುಕಾಟ ನಡೆಸಿ ಅದರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅಭ್ಯಾಸ ಹೆಚ್ಚಿನವರಿಗಿದೆ. ಗೂಗಲ್ ಹುಡುಕಾಟವು ಕೆಲವೊಮ್ಮೆ ಫಿಶಿಂಗ್ ಅಥವಾ ನಕಲಿ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್ ಅನ್ನು ಒಳಗೊಂಡಿರುವುದರಿಂದ ಅದು ನಮ್ಮ ಸಾಧನವನ್ನು ಹಾನಿಗೊಳಿಸುವುದು ಮಾತ್ರವಲ್ಲದೇ, ನಮ್ಮ ವಿವರಗಳನ್ನು ಸೋರಿಕೆ ಮಾಡುವ ಅಪಾಯವನ್ನು ಒಳಗೊಂಡಿವೆ.

ಹಾಗಾಗಿ, ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡಬೇಕು.
ಮಕ್ಕಳ ಅಶ್ಲೀಲ ಚಿತ್ರವನ್ನು ಗೂಗಲ್​ನಲ್ಲಿ ಹುಡುಕಾಟ ನಡೆಸುವುದು ಅಪರಾಧವಾಗಿದೆ. ಇದು ಗೂಗಲ್ ನಿಯಮದ ವಿರುದ್ಧ. ಹೀಗಿದ್ದರೂ ಈ ವಿಚಾರದ ಬಗ್ಗೆ ಗೂಗಲ್​ನಲ್ಲಿ ಸರ್ಚ್ ಮಾಡಿದರೆ ಹೆಚ್ಚಿನ ದಂಡ ಕಟ್ಟಬೇಕಾಗಿ ಬರಬಹುದು.

ಅಲ್ಲದೆ ಇತ್ತೀಚೆಗಷ್ಟೆ 2021ರ ಐಟಿ ನಿಯಮವನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ 67 ಅಶ್ಲೀಲ ವೆಬ್‌ಸೈಟ್ ನಿಷೇಧ ಮಾಡಲು ಕೇಂದ್ರ ಸರ್ಕಾರ ಅಂತರ್ಜಾಲ ಕಂಪನಿಗಳಿಗೆ ನೋಟಿಸ್ ನೀಡಿದೆ.


ಇದೊಂದು ಜನಪ್ರಿಯ ಆನ್​ಲೈನ್ ಹಗರಣಗಳಲ್ಲಿ​ ಒಂದಾಗಿದ್ದು, ವಂಚಕರು ಫೇಕ್ ಅಥವಾ ನಕಲಿ ಬ್ಯುಸಿನೆಸ್ ಲಿಸ್ಟ್​ ಮತ್ತು ಕಸ್ಟಮರ್​​ ಕೇರ್​ ನಂಬರ್​ಗಳನ್ನು ವೆಬ್​ಸೈಟ್​​ಗಳಲ್ಲಿ ಪೋಸ್ಟ್​ ಮಾಡಿರುತ್ತಾರೆ. ಇದನ್ನರಿಯದ ಜನರು ಅದೇ ನಿಜವಾದ ಮಾಹಿತಿ ಎಂದು ನಂಬಿ ಮೋಸ ಹೋಗುವ ಸಂಭವ ಹೆಚ್ಚಿದೆ.

ಹೆಚ್ಚಿನ ಅಪ್ಲಿಕೇಶನ್​ಗಳು ಇನ್​ ಬಿಲ್ಟ್​ ಕಸ್ಟಮರ್​ ಕೇರ್​​ ಚಾಟ್​ ವಿಂಡೋಸ್​​ನ್ನು ಹೊಂದಿರುತ್ತವೆ. ಆದರೆ ನೀವು ಕರೆ ಮಾಡಬಹುದಾದ ​ ಕಾಂಟೆಕ್ಟ್​ ನಂಬರ್​ನ್ನು ಹೊಂದಿರುವುದಿಲ್ಲ. ಹಾಗಾಗಿ, ಎಚ್ಚರ ವಹಿಸುವುದು ಉತ್ತಮ.

ಆರೋಗ್ಯ ಹದಗೆಟ್ಟಾಗ ಗೂಗಲ್​ನಲ್ಲಿ ಮೆಡಿಸಿನ್ ಅಥವಾ ಆರೋಗ್ಯ ಸಲಹೆಗಳ ಬಗ್ಗೆ ಸರ್ಚ್​ ಮಾಡುವ ಸ್ವಯಂ ಚಿಕಿತ್ಸೆ ಮಾಡುವುದು ಒಳ್ಳೆಯದಲ್ಲ. ಯಾಕೆಂದರೆ ಗೂಗಲ್​ನಲ್ಲಿ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇರುವುದಿಲ್ಲ. ಗೂಗಲ್ ಸಲಹೆ ಮೇರೆಗೆ ಮೆಡಿಸಿನ್ ತೆಗೆದುಕೊಳ್ಳವುದೂ ಸಹ ಅಷ್ಟೇ ಅಪಾಯಕಾರಿಯಾಗಿದ್ದು, ಹಾಗಾಗಿ,ಗೂಗಲ್​ ಮಾಹಿತಿಗಿಂತ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಸಿನಿಮಾ ಪೈರಸಿಯನ್ನು ಭಾರತದಲ್ಲಿ ನಿಷೇಧಿಸಲಾಗಿದ್ದು, ಆದರೂ ಹೆಚ್ಚಿನ ಜನರು ಚಲನಚಿತ್ರ ಪೈರಸಿಯನ್ನು ಮಾಡುತ್ತಿರುತ್ತಾರೆ. ನೀವು ಗೂಗಲ್‌ನಲ್ಲಿ ಸಿನಿಮಾವನ್ನು ಲೀಕ್ ಮಾಡಿದರೆ ಅಥವಾ ಅದಕ್ಕೆ ಸಂಬಂಧಿಸಿದ ಯಾವುದನ್ನಾದರೂ ಹುಡುಕಿದರೆ, ಭಾರೀ ದಂಡವನ್ನು ಕಟ್ಟಬೇಕಾಗುತ್ತದೆ. ಅಲ್ಲದೆ ಜೈಲು ಶಿಕ್ಷೆ ಕೂಡ ಅನುಭವಿಸಬೇಕಾಗಬಹುದು.


ಯಾವುದೇ ಪ್ರಶ್ನೆಗಳಿಗೆ ಸುಲಭದಲ್ಲಿ ದೊರೆಯುವ ಕೀಲಿ ಕೈ ಯಂತೆ ಗೂಗಲ್ ಸರ್ಚ್ ನೆರವಾಗುತ್ತದೆ. ಅದರ ಬಳಕೆ ಹಾಗೂ ನಿಯಮಗಳ ಅನುಸಾರ ಜಾಗ್ರತೆ ವಹಿಸುವುದು ಅವಶ್ಯಕವಾಗಿದೆ.

Leave A Reply

Your email address will not be published.