ಸುಂದರ ರೂಪದ ರಾಕ್ಷಸಿ | 7 ನವಜಾತ ಶಿಶುಗಳನ್ನು ಕೊಂದ ನರ್ಸ್ | ಏನಿದು ಪ್ರಕರಣ?

ನರ್ಸ್ ಗಳು ಎಂದರೆ ಡಾಕ್ಟರ್ ಗಳಂತೆ ಯೇ ನಮ್ಮ ಆರೋಗ್ಯ ದ ಸೇವೆ ಮಾಡುವವರು. ಎಷ್ಟೋ ಜೀವಗಳನ್ನು ಉಳಿಸಿರುವ ಗೌರವ ನರ್ಸ್ ಗಳಿಗೆ ಇದೆ. ಆದರೆ ಈ ಘಟನೆ ಓದಿದಾಗ ನಿಮಗೆ ಅಬ್ಬಬ್ಬಾ ಏನಿದು ಭೀಕರ ಕೃತ್ಯ ಅನ್ನೋದು ಮನಸಿಗೆ ಬರೋದು ಗ್ಯಾರಂಟಿ. ಅಷ್ಟಕ್ಕೂ ಈ ಕೊಲೆ ಅನ್ನೋದು ಏನೋ ಒಂದು ದ್ವೇಷ ಅಥವಾ ಉದ್ದೇಶಗಳನ್ನು ಇಟ್ಟುಕೊಂಡು ಕೊಲೆ ನಡೆಯುತ್ತವೆ. ಈಗಾಗಲೇ ನರ್ಸ್ ಗಳು ನವಜಾತ ಶಿಶುಗಳನ್ನು (infants) ಅಪಹರಿಸಿ ಮಕ್ಕಳಿಲ್ಲದ ದಂಪತಿಗಳಿಗೆ ಮಾರಾಟ ಮಾಡುವ ಪ್ರಕರಣಗಳ ಬಗ್ಗೆ ಸಹ ನಾವು ಕೇಳಿದ್ದೇವೆ, ಓದಿದ್ದೇವೆ ಮತ್ತು ಟಿವಿ ಮತ್ತು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ಇಲ್ಲಿ ಏನು ಅರಿಯದ 7 ಹಸುಗೂಸುಗಳನ್ನು ಬ್ರಿಟನ್ನಿನ ಸುಂದರ ನರ್ಸೊಬ್ಬಳು ಕೊಂದು, ಜೊತೆಗೆ 10 ಶಿಶುಗಳನ್ನು ಬಲಿ ತೆಗೆದುಕೊಳ್ಳುವ ಪ್ಲ್ಯಾನ್ ಮಾಡಿದ್ದಳಂತೆ!

ಇಂಗ್ಲೆಂಡ್ ಮ್ಯಾಂಚೆಸ್ಟರ್ (Manchester) ಪೊಲೀಸರ ಪ್ರಕಾರ ಲೂಸಿ ಲೆಟ್ಬಿ (Lucy Letby) ಹೆಸರಿನ ನರ್ಸ್ 7 ನವಜಾತ ಶಿಶುಗಳನ್ನು ಕೊಂದು ಇನ್ನೂ ಹತ್ತು ಹಸುಳೆಗಳನ್ನು ಕೊಲ್ಲಳು ಮುಂದಾಗಿದ್ದಳಂತೆ. ಪೊಲೀಸರು ಲೂಸಿಯನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ತಾನು ನಿರಪರಾಧಿ ಎಂದು ವಾದಿಸಿದ್ದಾಳೆ.

ಜೂನ್ 2015 ಮತ್ತು ಜೂನ್ 2016 ರ ನಡುವೆ ಕೊಲೆಯಾದ 5 ಗಂಡು ಮತ್ತು 2 ಹೆಣ್ಣು ಶಿಶುಗಳ ಹತ್ಯೆಯಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಹೀಯರ್ಫೋರ್ಡ್ ನಿವಾಸಿಯಾಗಿರುವ ಲೂಸಿ ನ್ಯಾಯಾಲಯದ ಸಮ್ಮುಖದಲ್ಲಿ ತಿಳಿಸಿದ್ದಾಳೆ.

ಈಗಾಗಲೇ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ನಲ್ಲಿ 32-ವರ್ಷ-ವಯಸ್ಸಿನ ಲೂಸಿಯ ವಿಚಾರಣೆ ಶುರುವಾಗಿದ್ದು ಅವಳ ವಿರುದ್ಧ 22 ಪ್ರಕರಣಗಳನ್ನು ದಾಖಲಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ ಲೂಸಿ ಒಂದೇ ಮಗುವನ್ನು ಹಲವಾರು ಬಾರಿ ಕೊಲ್ಲುವ ಪ್ರಯತ್ನ ಮಾಡಿದ್ದಾಳೆ ಎಂಬುದು ಖಚಿತವಾಗಿದೆ.

ಸೋಮವಾರ ವಿಚಾರಣೆ ಆರಂಭವಾದಾಗ ನ್ಯಾಯಾಲಯದ ಕಟೆಕಟೆಯಲ್ಲಿ ಕಪ್ಪುವರ್ಣದ ಶರ್ಟಿನ ಮೇಲೆ ನೀಲಿ ವರ್ಣದ ಜಾಕೆಟ್ ಧರಿಸಿ ಲೂಸಿ ಹಾಜರಾಗಿದ್ದಳು ಮತ್ತು ಅವಳ ಕುಟುಂಬದ ಸದಸ್ಯರು ಸಾರ್ವಜನಿಕ ಗ್ಯಾಲರಿಗಳಲ್ಲಿ ಕುಳಿತಿದ್ದರು. ಲೂಸಿಯ 76-ವರ್ಷ-ವಯಸ್ಸಿನ ತಂದೆ ಜಾನ್ ಮತ್ತು 62-ವರ್ಷ-ವಯಸ್ಸಿನ ತಾಯಿ ಸೂಸನ್ ಸಹ ವಿಚಾರಣೆಗೆ ಹಾಜರಿದ್ದರು.

ಕೋರ್ಟ್ ವಿಚಾರಣೆಯಲ್ಲಿ ನ್ಯಾಯಾಲಯದ ಆದೇಶವೊಂದರ ಪ್ರಕಾರ ಯಾವ ಕಾರಣಕ್ಕೂ ಲೂಸಿಯಿಂದ ಹತ್ಯೆಗೊಳಗಾಗಿವೆ ಎಂದು ಆರೋಪಿಸಲಾಗಿರುವ ಶಿಶುಗಳ ಗುರುತನ್ನು ಬಹಿರಂಗಪಡಿಸುವಂತಿಲ್ಲ. ಅಷ್ಟು ಮಾತ್ರವಲ್ಲದೆ ಕೊಲೆಯಾಗಿರುವ ಮಕ್ಕಳ ತಂದೆ-ತಾಯಿಗಳನ್ನು ಮತ್ತು ಮಕ್ಕಳ ಪರವಾಗಿ ಸಾಕ್ಷ್ಯ ನೀಡಿರುವ ಜನರ ಗುರುತನ್ನು ಸಹ ಸಾರ್ವಜನಿಕಗೊಳಿಸುವಂತಿಲ್ಲ ಎಂದು ಅದೇಶಿಸಿದೆ.

ವಿಚಾರಣೆ ಸಂದರ್ಭದಲ್ಲಿ ಶಿಶುಗಳನ್ನು ಎ ಯಿಂದ ಕ್ಯೂ ವರೆಗೆ ಅಕ್ಷರಗಳನ್ನು ಬಳಸಿ ಉಲ್ಲೇಖಿಸಬಹುದೆಂದು ಕೋರ್ಟ್ ಹೇಳಿದೆ.

ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ನಿಗೂಢ ಸಾವಿನ ಪ್ರಕರಣವನ್ನು ಮೇ 2017 ರಲ್ಲಿ ತನಿಖೆಗೆ ಕೈಗೆತ್ತಿಕೊಳ್ಳಲಾಯಿತು. ಆರಂಭಿಕ ಹಂತದಲ್ಲಿ 2015 ಜೂನ್ 15 ರಿಂದ ಜೂನ್ 2016 ನಡುವೆ ಹತ್ಯೆಯಾದ 15 ಶಿಶುಗಳ ಸಾವಿಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಯಿತು.

ಲೂಸಿ ಲೆಟ್ಬೀ ಚೆಸ್ಟರ್ ನಲ್ಲಿರುವ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯ ನವಜಾತ ಮಕ್ಕಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲೇ ಶಿಶುಗಳ ಸರಣಿ ಹತ್ಯೆ ನಡೆಸಿದಳೆಂದು ಆರೋಪ ಮಾಡಲಾಗಿದೆ.

ವಿಚಾರಣೆ ಪ್ರಕಾರ 17 ಶಿಶುಗಳ ಹತ್ಯೆಯಾಗಿದ್ದು ಮತ್ತು 16 ಶಿಶುಗಳ ಕೊಲ್ಲುವ ಪ್ರಯತ್ನ ನಡೆದಿತ್ತೆಂದು ತನಿಖೆ ಆರಂಭಗೊಂಡ ಬಳಿಕ ಬೆಳಕಿಗೆ ಬಂದಿತ್ತು.
ಪ್ರಸ್ತುತ ಪ್ರಕರಣದ ತನಿಖೆ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ನಲ್ಲಿ 6 ತಿಂಗಳ ಕಾಲ ನಡೆಯಲಿದೆ ಎಂಬ ಮಾಹಿತಿ ದೊರಕಿದೆ. ಅಪರಾಧಿ ಸ್ಥಾನದಲ್ಲಿರುವ ಲೂಸಿ ಯು ವಿಚಾರಣೆ ಕೊನೆಗೂಳ್ಳುವವರೆಗೆ ಪೊಲೀಸ್ ವಶದಲ್ಲಿದ್ದಾಳೆ.

Leave A Reply

Your email address will not be published.