ರಾತ್ರಿ ಸಮಯದಲ್ಲಿ ಬರುವ ಬೆತ್ತಲೆ ಯುವಕ | ಟಾರ್ಚ್ ಹಿಡಿದು ಬಟ್ಟೆ ಕದಿಯುವ ವ್ಯಕ್ತಿ

ನಾವು ವಿಚಿತ್ರ ಮನೋ ಧರ್ಮದ ಅನೇಕ ವ್ಯಕ್ತಿಗಳನ್ನು ನೋಡಿರುತ್ತೇವೆ. ಚಿಂದಿ ಬಟ್ಟೆ ಹಾಕಿಕೊಂಡು ಅರೆ ಹುಚ್ಚರಂತೆ ರಸ್ತೆಯಲ್ಲಿ ಓಡಾಡುವ, ರಕ್ಕಾಸರಂತೆ ವರ್ತಿಸುವ ಅಷ್ಟೆ ಏಕೆ ಬಕಾಸುರನಂತೆ ಗಬಗಬನೆ ತಿಂದು , ವಿಕೃತವಾಗಿ ನಗುವ ಹೀಗೆ ಹಲವಾರು ಪ್ರವೃತ್ತಿಯ ಮನುಷ್ಯರನ್ನು ನಮ್ಮ ಜೀವನದಲ್ಲಿ ಗಮನಿಸಿರುತ್ತೇವೆ.

ಕೆಲವೊಂದು ಘಟನೆಗಳಿಂದ ಭಯ/ಆಘಾತಕ್ಕೆ ಒಳಗಾಗಿ ಮಾನಸಿಕವಾಗಿ ಕುಗ್ಗಿ ದುರ್ಬಲ ಮಾನಸಿಕ ಸ್ಥಿತಿ ಹದಗೆಟ್ಟಿರುವ ಮನುಷ್ಯರು ಕೂಡ ಇವರ ನಡುವೆ ಇರುವ ಸಾಧ್ಯತೆ ಕೂಡ ಇದೆ.
ಆದರೆ, ಇಲ್ಲಿ ಹೇಳ ಹೊರಟಿರುವ ವಿಚಾರ ಬೆತ್ತಲೆಯಾಗಿ ಓಡಾಡಿಕೊಂಡು ಬಟ್ಟೆ ಕದಿಯುವ ಚಾಳಿ ಹೊಂದಿರುವ ಆಸಾಮಿಯ ಬಗ್ಗೆ.

ಹೌದು, ಇಂತಹ ಪ್ರಕರಣವೊಂದು ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಗ್ರಾಮದಲ್ಲಿ ನಡೆದಿದೆ.
ರಾತ್ರಿಯಾಗುತ್ತಿದ್ದಂತೆ ಇಲಿಗಳ ಕಾಟ, ಇಲ್ಲವೇ ನಾಯಿಗಳು ಅರಚುವ ಶಬ್ದ ನೀವು ಕೇಳಿರುತ್ತೀರಿ, ಆದರೆ, ನಡುರಾತ್ರಿ ಬೆತ್ತಲೆ ಓಡಾಡಿ ಭಯ ಹುಟ್ಟಿಸುವವರನ್ನು ನೋಡಿರುವುದೂ ವಿರಳ.

ಬೆತ್ತಲೆ ಯುವಕನೋರ್ವ ರಾತ್ರಿಯಾಗುತ್ತಿದ್ದಂತೆ ಟಾರ್ಚ್ ಹಿಡಿದು ಬೀದಿ ಬೀದಿ ಸುತ್ತಾಡಿ ಮನೆಯ ಮುಂದೆ ಒಣಗಿ ಹಾಕಿದ ಬಟ್ಟೆಗಳನ್ನ ಕದಿಯುವುದು ಮಾತ್ರವಲ್ಲದೆ, ಕದ್ದ ಬಳಿಕ ಮತ್ತೆ ಬಂದು ಮನೆಗಳಿಗೆ ಇಣುಕಿ ನೋಡಿ ಹೋಗುವ ಪ್ರವೃತ್ತಿ ಹೊಂದಿದ್ದಾನೆ.


ಇದೆ ರೀತಿಯ ಪ್ರಕರಣವು ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಮಹಾರಾಣಿ ಕಾಲೇಜಿನ ಹಾಸ್ಟೆಲ್ ನಲ್ಲಿ ನಡೆದಿದ್ದು , ಹಾಸ್ಟೆಲ್ ಗೆ ನುಗ್ಗಿದ್ದ ಸೈಕೋ ವಿದ್ಯಾರ್ಥಿನಿಯರ ಒಳ ಉಡುಪುಗಳನ್ನು ಕದ್ದು ಎಸ್ಕೇಪ್ ಆಗುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ನೆನಪಿರಬಹುದು.

ಈ ರೀತಿಯ ಪ್ರಕರಣಗಳು ಇತ್ತೀಚೆಗೆ ಸಾಮಾನ್ಯ ಘಟನೆಯಂತೆ ನಡೆಯುತ್ತಿದ್ದು, ಇದೀಗ ವರದಿಯಾಗಿರುವ ಘಟನೆಯಲ್ಲಿಯು ಬೆಟ್ಟಹಲಸೂರು ಗ್ರಾಮದಲ್ಲಿ ನಡೆದಿದ್ದು, ಬೆತ್ತಲೆ ಯುವಕನೋರ್ವ ರಾತ್ರಿಯಾಗುತ್ತಿದ್ದಂತೆ ಟಾರ್ಚ್ ಹಿಡಿದು ಬೀದಿ ಬೀದಿ ಸುತ್ತಾಡಿ ಮನೆಯ ಮುಂದೆ ಒಣಗಿ ಹಾಕಿದ ಬಟ್ಟೆಗಳನ್ನ ಕದಿಯುತ್ತಿದ್ದು, ಬಳಿಕ ಮತ್ತೆ ಬಂದು ಮನೆಗಳಿಗೆ ಇಣುಕಿ ನೋಡುತ್ತಿದ್ದ ಅಭ್ಯಾಸ ಮಾಡಿಕೊಂಡಿದ್ದ.


ಇದನ್ನು ಸಿಸಿಟಿವಿಯಲ್ಲಿ ಕಂಡು ಶಾಕ್ ಆದ ಊರಿನ ಮಂದಿ ಬೆತ್ತಲೆ ಯುವಕನನ್ನು ಪೊಲೀಸರಿಗೆ ಹಿಡಿದು ಒಪ್ಪಿಸಿದ್ದಾರೆ. ಇದಾದ ಬಳಿಕ ಯುವಕನನ್ನು ಪೊಲೀಸರು ಬೆತ್ತಲೆ ಯುವಕನಿಗೆ ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದು ಕರೆದುಕೊಂಡು ಹೋಗಿದ್ದಾರೆ.

ಒಂದು ವಾರದ ಹಿಂದೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇದೆ ರೀತಿಯ ಘಟನೆ ನಡೆದಿತ್ತು. ಈಗ ಈ ಯುವಕನ ಪುಂಡಾಟದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಈ ವೀಡಿಯೊ ನೋಡಿದವರಿಗೆ ಅಚ್ಚರಿ ಮೂಡಿಸುವುದರಲ್ಲಿ ಸಂಶಯವಿಲ್ಲ.

Leave A Reply

Your email address will not be published.