ಲಾಟರಿ ಹೊಡೆಯಿತಪ್ಪೋ | iPhone 13 ಆರ್ಡರ್ ಮಾಡಿದವನಿಗೆ ಬಂದಿದ್ದು ಏನು ಗೊತ್ತಾ? ಅದೃಷ್ಟ ಅಂದರೆ ಇದಪ್ಪಾ!!!

ಲಕ್ಕಿ ಡ್ರಾ ಬಂದಂತೆ ಲಾಟರಿ ಹೊಡೆದಿರುವ ಘಟನೆಯೊಂದು ಇತ್ತೀಚೆಗೆ ನಡೆದಿದೆ. ಅದೃಷ್ಟವೋ ಅದೃಷ್ಟ ಎಂಬಂತೆ ಆಫರ್ ನ ಮೇಲೆ ಐಫೋನ್ ಖರೀದಿಸಿದ ವ್ಯಕ್ತಿಗೆ ಜ್ಯಾಕ್ ಪಾಟ್ ಹೊಡಿದಿದೆ. ಫ್ಲಿಪ್‌ಕಾರ್ಟ್ ಬಿಗ್ ದಸರಾ ಸೇಲ್‌ನಲ್ಲಿ ಆಫರ್ ಗಳಲ್ಲಿ ಮೊಬೈಲ್ಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿತ್ತು.

ಈ ಸೇಲ್ ನಲ್ಲಿ ನಿಗದಿತ ಆಫರ್, ಜೊತೆಗೆ ದುಬಾರಿ ಬೆಲೆಯ ಐಫೋನ್ ಗಳ ಜೊತೆಗೆ ಇತರೆ ಮೊಬೈಲ್ ಅನ್ನು ಅತಿ ಕಡಿಮೆ ದರದಲ್ಲಿ ರಿಯಾಯಿತಿ ಮೂಲಕ ಮಾರಾಟ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೆ ಕ್ರೆಡಿಟ್ ಕಾರ್ಡ್ ಆಫರ್, ಇನ್ಸ್ಟಾಲ್ಮೆಂಟ್ ಮೂಲಕ ಕೊಳ್ಳುವ ಅವಕಾಶ ಹೀಗೆ ಬಂಪರ್ ಕೊಡುಗೆಗಳನ್ನು ಫ್ಲಿಪ್ ಕಾರ್ಟ್ ಯೋಜಿಸಿತ್ತು.

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಮೊಬೈಲ್, ಇತರೆ ವಸ್ತುಗಳನ್ನು ಮಾರಾಟ ಮಾಡುವಾಗ ಗ್ರಾಹಕ ಕಲ್ಲು, ಹಳೆ ವಸ್ತುಗಳನ್ನು ಪಡೆದು ಯಾಮಾರಿದ ಎ ಷ್ಟೋ ಪ್ರಕರಣಗಳಿವೆ. ಇದರ ನಡುವೆ ಅಚ್ಚರಿ ಎಂಬಂತೆ ಆರ್ಡರ್ ಮಾಡಿದ ಬೆಲೆಗಿಂತ ಅಧಿಕ ಬೆಲೆ ಬಾಳುವ ವಸ್ತು ದೊರೆತರೆ ಹೇಗಿರಬಹುದು??

ಬಿಗ್ ದಸರಾ ಸೇಲ್ ನಲ್ಲಿ, Apple iPhone 13 ಸಾಧನವು 50,000 ರೂ. ಕ್ಕಿಂತ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿತ್ತು. ಇತ್ತೀಚಿಗಷ್ಟೇ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಐಫೋನ್ 14 ಸಾಧನದ ಮೂಲ ಬೆಲೆ 79,900 ರೂ.ಗಳಾಗಿದ್ದು, ಇದರಿಂದ ಐಫೋನ್ 13 ಸಾಧನವನ್ನು ಬುಕ್ ಮಾಡಿದ ವ್ಯಕ್ತಿಗೆ ಜಾಕ್‌ಪಾಟ್ ರೀತಿಯಲ್ಲಿ ಮೊಬೈಲ್ ದೊರಕಿದೆ.

ವ್ಯಕ್ತಿ ಐಫೋನ್ 13 ಬುಕ್ ಮಾಡಿ ಹೊಚ್ಚ ಹೊಸ ಐಫೋನ್ 14 ಸಾಧನವನ್ನು ಪಡೆದ ಘಟನೆ ನಡೆದಿದೆ. ಇತ್ತೀಚಿಗಷ್ಟೆ ಫ್ಲಿಪ್‌ಕಾರ್ಟ್ ಆಯೋಜಿಸಿದ್ದ ‘ಬಿಗ್ ದಸರಾ ಸೇಲ್’ನಲ್ಲಿ 49 ಸಾವಿರ ರೂ.ಪಾವತಿಸಿ ಐಫೋನ್ 13 ಪೋನನ್ನು ಬುಕ್ ಮಾಡಿರುವ ಗ್ರಾಹಕನಿಗೆ ಐಫೋನ್ 14 ಮನೆ ಬಾಗಿಲಿಗೆ ತಲುಪಿದೆ.

ಈ ಕುರಿತು ಜನಪ್ರಿಯ ಟ್ವಿಟರ್ ಬಳಕೆದಾರ ಅಶ್ವಿನ್ ಹೆಗ್ಡೆ ಎಂಬುವವರು ಟ್ವೀಟ್ ಮಾಡಿದ್ದು, ತಮ್ಮ ಸಾಮಾಜಿಕ ಮಾಧ್ಯಮವನ್ನು ಫಾಲೊ ಮಾಡುತ್ತಿರುವ ವ್ಯಕ್ತಿ ಮೊಬೈಲ್ ಪಡೆದಿದ್ದಾರೆ ಎಂದಿದ್ದಾರೆ. ಈ ಕುರಿತಂತೆ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅಶ್ವಿನ್ ಹೆಗ್ಡೆ, ಐಫೋನ್ 13 ಸಾಧನವನ್ನು ಬುಕ್ ಮಾಡಿದ್ದ ವ್ಯಕ್ತಿಗೆ ಐಫೋನ್ 14 ಬಂದು ತಲುಪಿರುವ ಬಗ್ಗೆ ಸ್ಕ್ರೀನ್‌ಶಾಟ್ ಸಹ ಅಪ್‌ಲೋಡ್ ಮಾಡಿದ್ದಾರೆ.

ಇನ್ನು ಈ ಘಟನೆಯ ಬಗ್ಗೆ ಫ್ಲಿಪ್‌ಕಾರ್ಟ್ ಸಂಸ್ಥೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ . ಆದರೆ, ಇದು ಮೊಬೈಲ್ ಪೂರೈಕೆದಾರರ ಕಣ್ತಪ್ಪಿನಿಂದಾಗಿರಬಹುದು ಎಂದು ಹೇಳಲಾಗುತ್ತಿದೆ. ಆದರೂ, ಅದೃಷ್ಟ ಲಕ್ಷ್ಮಿ ಕೈ ಹಿಡಿತ ಘಟನೆಗೆ ಟ್ವೀಟ್ ನೋಡಿದ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.