ಯುವತಿಯೊಬ್ಬಳ ನಗ್ನ ಫೋಟೋ ಲೀಕ್ | ದಾರಿಯಲ್ಲೇ ಯುವತಿಯರಿಬ್ಬರ ಕಾದಾಟ | ವೀಡಿಯೋ ವೈರಲ್

ಯುವತಿಯರಿಬ್ಬರು ಬೀದಿಯಲ್ಲೇ ಕಿತ್ತಾಡಿಕೊಂಡ ಘಟನೆಯೊಂದು ನಡೆದಿದೆ. ಹೌದು ಇದು ನಗ್ನ ಫೋಟೋಗೆ ಸಂಬಂಧಪಟ್ಟ ನಡೆದ ಬೀದಿ ಕಾಳಗ.

ನಗ್ನ ಫೋಟೋ ವೈರಲ್‌ ಮಾಡಿದ ವಿಚಾರವಾಗಿ ಬೀದಿಯಲ್ಲೇ ಯುವತಿಯರಿಬ್ಬರು ಕಿತ್ತಾಟ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್​ ಆಗಿದೆ. ಈ ಇಬ್ಬರು ಯುವತಿಯರು ಮಾಡಿದ ಜಗಳವನ್ನು ಕಂಡ ಪ್ರತ್ಯಕ್ಷದರ್ಶಿಗಳು ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಇಬ್ಬರು ಯುವತಿಯರಲ್ಲಿ ಒಬ್ಬರಿಗೆ, ಅವರು ಏಕೆ ಜಗಳವಾಡುತ್ತಿದ್ದರು ಎಂದು ಕ್ಯಾಮೆರಾದ ಹಿಂದಿನ ವ್ಯಕ್ತಿ ಕೇಳುವುದರೊಂದಿಗೆ ಕ್ಲಿಪ್​ ಪ್ರಾರಂಭವಾಗುತ್ತದೆ. ಈ ವೀಡಿಯೊ ಆರಂಭ ಆಗುವ ಮೊದಲೇ ಇವರಿಬ್ಬರ ಮಧ್ಯೆ ಮಾರಾಮಾರಿ ನಡೆದಿದೆ. ಒಬ್ಬಾಕೆ ಮಾಸ್ಕ್​ ಹಾಕಿಕೊಂಡ ಕಾರಣಕ್ಕೆ ಆಕೆಯ ಮುಖ ಸ್ಪಷ್ಟವಾಗಿ ಗೋಚರವಾಗುವುದಿಲ್ಲ. ಆಕೆ ತನ್ನ ನಗ್ನ ಚಿತ್ರಗಳನ್ನು ಬೇರೊಬ್ಬ ವ್ಯಕ್ತಿಗೆ ಕಳುಹಿಸಿದ್ದಾಳೆ ಎಂದು ಇನ್ನೊಬ್ಬಾಕೆ ಆರೋಪಿಸಿದ್ದಾಳೆ. ಆರೋಪ ಹೊತ್ತುಕೊಂಡ ಮಾಸ್ಕ್​ಧಾರಿ ಯುವತಿ ಇದರ ವಿರುದ್ಧ ಧ್ವನಿ ಎತ್ತಿದಾಗ, ತಾನು ಕೆಲವು ಆಡಿಯೋವನ್ನು ಲೀಕ್ ಮಾಡೋದಾಗಿ ಹೇಳುತ್ತಾಳೆ.

ಇದರ ನಂತರ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ಅನಂತರ ಇಬ್ಬರೂ ಒಬ್ಬರನ್ನೊಬ್ಬರು ತಳ್ಳಾಡಿಕೊಂಡು ಹೊಡೆದುಕೊಳ್ಳುತ್ತಾರೆ. ಮಾಸ್ಕ್​ ಧರಿಸಿದ್ದ ಯುವತಿ ಆಟೋ ರಿಕ್ಷಾದಲ್ಲಿ ಹೊರಡಲು ಪ್ರಯತ್ನಿಸುತ್ತಿದ್ದಂತೆ, ಆಕೆಯನ್ನು ಹೊರಗೆಳೆದು ಮತ್ತೊಬ್ಬಾಕೆ ಹೊಡೆದಿದ್ದಾಳೆ. ಮನೆಗೆ ಹೋಗುವಂತೆ ಬೆದರಿಕೆಯನ್ನೂ ಹಾಕುತ್ತಾಳೆ. ಅಲ್ಲಿಗೆ ಈ ವೀಡಿಯೋ ಕೊನೆಗೊಳ್ಳುತ್ತದೆ.

Leave A Reply

Your email address will not be published.