Non Veg Foods : ನಿಮಗೆ ಗೊತ್ತೇ? ಭಾರತದ ಈ ನಗರಗಳಲ್ಲಿ ಮಾಂಸಾಹಾರ ಸೇವನೆ ನಿಷಿದ್ಧ!!! ಏಕೆ ಗೊತ್ತೇ?

ಭಾರತದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಉಡುಗೆ-ತೊಡುಗೆ, ಆಚಾರ-ವಿಚಾರ, ಶಾಸ್ತ್ರ-ಸಂಪ್ರದಾಯ, ಭಾಷೆ-ಬರಹ ವಿಭಿನ್ನವಾಗಿ ಇರುವುದು ನಮಗೆ ತಿಳಿದೇ ಇದೆ. ಅದನ್ನು ನಾವು ಪ್ರಶ್ನೆ ಮಾಡುವಂತಿಲ್ಲ. ಹಾಗೆಯೇ ಭಾರತದ ಕೆಲವು ಸ್ಥಳಗಳಲ್ಲಿ ಕೇವಲ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಾರೆ. ಮಾಂಸಾಹಾರ ನಿಷಿದ್ಧ ಎಂಬುದು ನಿಮಗೆ ತಿಳಿದಿದೆಯೇ? ಹಾಗೂ ಭಾರತದಲ್ಲಿ ಶೇ.40ರಷ್ಟು ಜನರು ಸಸ್ಯಾಹಾರಿಗಳಿದ್ದಾರೆ, ಗುಜರಾತ್, ಹರಿಯಾಣ ಮತ್ತು ರಾಜಸ್ಥಾನದಂತಹ ರಾಜ್ಯಗಳು ಸಸ್ಯಾಹಾರಿ ರಾಜ್ಯವೆಂದು ಹೇಳಲಾಗುತ್ತದೆ. ಅಲ್ಲಿ ಜನರು ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಾರೆ.

ಈ ರಾಜ್ಯಗಳಲ್ಲಿ ಮಾಂಸಾಹಾರ ಸೇವಿಸುವವರ ಸಂಖ್ಯೆ ಕಡಿಮೆ ಎಂದು ಹೇಳಲಾಗುತ್ತದೆ. ಮಾಂಸಾಹಾರವನ್ನು ಅನುಮತಿಸದ ಕೆಲವು ನಗರಗಳು ಇಲ್ಲಿವೆ.

ವಾರಾಣಸಿ, ಉತ್ತರ ಪ್ರದೇಶ:
ಇದು ಶಿವನ ನಗರ ಎಂದು ನಂಬಲಾಗಿದೆ. ಏಕೆಂದರೆ ಈ ನಗರವು ಅವನಿಂದ ಮಾತ್ರ ನಿರ್ಮಿಸಲ್ಪಟ್ಟಿದೆ ಎಂದು ಹೇಳಲಾಗಿದೆ. ಶಿವನಿಗೆ ಪ್ರಿಯವಾದ ಆಹಾರಗಳನ್ನು ಹೆಚ್ಚಾಗಿ ಬಳಸುತ್ತಾರೆ ಮತ್ತು ಈ ನಗರದಲ್ಲಿ ನೀವು ಕೇಳಿರದ ಸಸ್ಯಾಹಾರಿ ಆಹಾರಗಳಿವೆ.

ರಿಷಿಕೇಶ, ಉತ್ತರಾಖಂಡ:
ಈ ಪ್ರದೇಶದಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ. ಇದು ದೇವಾಲಯಗಳ ನಗರವಾಗಿದೆ, ದೇವಾಲಯಗಳು ಇರುವ ಕಾರಣವಾಗಿ ದೇವರ ಭಕ್ತಿ ಸಲುವಾಗಿ ಪ್ರಾಣಿ ವಧೆ ಮಾಡುವುದಿಲ್ಲ. ಅಲ್ಲದೆ ಸಾಕಷ್ಟು ಮುಳ್ಳಿನ ಮರಗಳನ್ನು ಹೊಂದಿರುವ ಹಚ್ಚ ಹಸಿರು ಬೆಟ್ಟಗಳು ಇಲ್ಲಿವೆ. ಇದರಿಂದಾಗಿ ಸಸ್ಯಾಹಾರಿ ಆಹಾರವನ್ನು ಹೆಚ್ಚಾಗಿ ಹಚ್ಚಿಕೊಂಡಿದ್ದಾರೆ.

ಹರಿದ್ವಾರ, ಉತ್ತರಾಖಂಡ:
ಇದು ಭಾರತದ ಪವಿತ್ರ ನಗರಗಳಲ್ಲಿ ಒಂದಾಗಿದೆ. ಅದಕ್ಕೆ ಕಾರಣ ಪವಿತ್ರ ಗಂಗಾ ನದಿ. ಇದೊಂದು ದೈವೀಕಾ ಶಕ್ತಿ ಇರುವ ನೆಲವೆಂದು ಪ್ರತೀತಿ ಇದೆ. ಹಾಗಾಗಿ ಇಲ್ಲಿ ಪ್ರವಾಸಿ ತಾಣವಾದರೂ ಸಹ ದೇವರ ಹರಕೆ ಸಲ್ಲಿಸಲು ಬರುವವರು ಹೆಚ್ಚು. ಅಲ್ಲದೆ ಭಕ್ತರು ಸಸ್ಯಾಹಾರ ಸೇವಿಸುವ ಕಾರಣ ಇಲ್ಲಿ ಮಾಂಸದ ಊಟ ಸಿದ್ದಪಡಿಸುವುದಿಲ್ಲ. ಈ ನಗರದಲ್ಲಿ ನೀವು ಸಲಾಡ್‌ಗಳು, ವೆಜ್ ಫ್ರೈಡ್ ಫುಡ್​ಗಳನ್ನು ವಿಶೇಷವಾಗಿ ಸೇವಿಸಬಹುದು.

ವೃಂದಾವನ, ಉತ್ತರ ಪ್ರದೇಶ:
ನಗರವು ಮಥುರಾ ಜಿಲ್ಲೆಯಲ್ಲಿದೆ. ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಹಿಂದೂ ಧರ್ಮಗ್ರಂಥಗಳ ಪ್ರಕಾರ, ಭಗವಾನ್ ಕೃಷ್ಣನು ಹೆಚ್ಚಿನ ಬಾಲ್ಯವನ್ನು ಈ ನಗರದಲ್ಲಿ ಕಳೆದುದು ಆದ ಕಾರಣ ನಗರದಲ್ಲಿ ಮಾಂಸಾಹಾರ ನಿಷೇಧಿಸಿರುವುದರಿಂದ ಮಾಂಸಾಹಾರ ಸಿಗುವುದಿಲ್ಲ.

ಮಧುರೈ, ತಮಿಳುನಾಡು:
ಮಧುರೈ ಕೂಡ ದೈವಿ ಸ್ಥಳವಾಗಿದೆ.ಈ ನಗರವನ್ನು ತಮಿಳುನಾಡಿನ ಹೃದಯ ಎಂದೂ ಕರೆಯುತ್ತಾರೆ. ಈ ನಗರದಲ್ಲಿ ಅತ್ಯಂತ ರುಚಿಕರವಾದ, ಪೌಷ್ಟಿಕ ಸಸ್ಯಾಹಾರಿ ಭಕ್ಷ್ಯಗಳು ದೊರೆಯುತ್ತವೆ. ಸಸ್ಯಾಹಾರ ಇಲ್ಲಿ ಪ್ರಮುಖ ಆಹಾರವಾಗಿದೆ.

ಅಯೋಧ್ಯೆ, ಉತ್ತರ ಪ್ರದೇಶ :
ಹಿಂದೂಗಳ ಶ್ರೇಷ್ಠ ಸ್ಥಳ ಎಂಬ ಪ್ರತೀತಿಯು ಇದೆ. ಇದು ಭಗವಾನ್ ರಾಮನ ಜನ್ಮಸ್ಥಳವಾಗಿದೆ. ಹೀಗಾಗಿ ಭಾರತದಲ್ಲಿ ಧಾರ್ಮಿಕತೆಯ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಪವಿತ್ರ ಸ್ಥಳವಾಗಿದ್ದು, ನಗರದಲ್ಲಿ ಮಾಂಸಾಹಾರವನ್ನು ಅನುಮತಿಸಲಾಗುವುದಿಲ್ಲ.

ಈ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಮಾಂಸಹಾರ ತಿನಿಸುಗಳು ದೊರೆಯುವುದಿಲ್ಲ ಹಾಗೂ ತನ್ನದೇ ಆದ ಪ್ರಸಿದ್ಧಿ ಹೊಂದಿದ್ದು ಜನರು ತಮ್ಮ ಭಾವನೆಗಳಲ್ಲಿ ಬೆರೆತು ಹೋಗಿದ್ದು ಪ್ರಾಣಿ ವಧೆಯನ್ನು ಹಾಗೂ ಪ್ರಾಣಿ ಹಿಂಸೆ ಮಾಡುವುದಿಲ್ಲ. ಆದ್ದರಿಂದ ಈ ಸ್ಥಳಗಳು ಸಸ್ಯಾಹಾರ ಸೇವಿಸುವ ಸ್ಥಳ ಎಂದು ಪ್ರತೀತಿ ಹೊಂದಿದೆ.

Leave A Reply

Your email address will not be published.