Breaking News । ಮತ್ತೆ ಮದುವೆಯಾಗಲಿದ್ದಾರೆ ಟಾಲಿವುಡ್ ಬ್ಯೂಟಿ ಸಮಂತಾ, ವರನ್ಯಾರು ಗೊತ್ತಾ ?

ಟಾಲಿವುಡ್ ಬ್ಯೂಟಿ ಸಮಂತಾ ಪ್ರೇಮ ಪಲ್ಲವಿಸಿದೆ. ಭಾರತದ ನಂಬರ್ 1 ನಟಿಯಾಗಿ ಗುರುತಿಸಿಕೊಂಡಿದ್ದ ಸಮಂತಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅವರು ಇನ್ನೊಮ್ಮೆ ಹಸೆಮನೆ ಏರಲಿದ್ದಾರೆ. ಆಕೆಯ ಅಭಿಮಾನಿಗಳ ಮನದಲ್ಲಿ ಖುಷಿ ಕಂಡಿದೆ. ಆದರೆ ನಾಗಚೈತನ್ಯ ಪಾಡೇನು ಎಂಬ ಯೋಚನೆ ಇಲ್ಲಿ ಬರೋದು ಸಹಜ.

ಇಂತಹಾ ಸುದ್ದಿ ಈಗ ಹೈದರಾಬಾದಿನ ಗಲ್ಲಿಗಳಲ್ಲಿ, ಅಲ್ಲಿನ ಶ್ರೀಮಂತ ‘ ಬಂಜಾರಾ ಹಿಲ್ ‘ ಗಳಲ್ಲಿ ಸುದ್ದಿ ಹರಿದಾಡುತ್ತಿದೆ. ದಕ್ಷಿಣ ಮತ್ತು ಉತ್ತರದ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ನಟಿ ಸಮಂತಾ ಕಳೆದ ವರ್ಷ ನಾಗಚೈತನ್ಯ ಜೊತೆಗಿನ ದಾಂಪತ್ಯವನ್ನು ಮುರಿದುಕೊಂಡು ಮತ್ತೆ ಬ್ಯಾಚುಲರ್ ಜೀವನಕ್ಕೆ ಮರಳಿದ್ದರು. ಮದುವೆ ಮುರಿದು ಹೋಗಿದ್ದ ನೋವು ಆಕೆಯ ಕಣ್ಣುಗಳಲ್ಲಿ ಕಾಣಿಸುತ್ತಿತ್ತು. ಈಗ ಎಲ್ಲವೂ ತಿಳಿಯಾಗಿದೆ. ಹೊಸ ಪ್ರೇಮ ಮನದಲ್ಲಿ ಮೂಡಿದೆ. ಮಿಸ್ ಸಮಂತಾ ಇನ್ಮುಂದೆ ಮಿಸ್ಸೆಸ್ ಆಗಲಿದ್ದಾರೆ.

ಅತ್ತ ನಾಗಚೈತನ್ಯ ಮತ್ತು ಈಕೆ – ಇಬ್ಬರು ತಮ್ಮ ತಮ್ಮಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಇಬ್ಬರೂ ತಮ್ಮ ಹಳೆಯ ಪ್ರೀತಿ, ಮದುವೆ, ಕುಟುಂಬಗಳು ಎಲ್ಲವನ್ನೂ ಕೂಡಾ ಮರೆತು ಹೋಗಿದ್ದರು. ಅತ್ತ ಇಬ್ಬರೂ ಮತ್ತೆ ಹೊಸ ಸಂಬಂಧಗಳ ಹುಡುಕಾಟದಲ್ಲಿದ್ದಾರೆ ಎಂಬ ಸುದ್ದಿ ಇತ್ತು. ಇಬ್ರೂ ಅಲ್ಲಿಲ್ಲಿ ಡೇಟಿಂಗ್ ಶುರುಹಚ್ಕೊಂಡಿದ್ದಾರೆ ಅಂತಿದ್ರು ಜನ ಮತ್ತು ಮೀಡಿಯಾ. ಈಗ ಬಹುತೇಕ ಒಂದಂತೂ ಕನ್ಫರ್ಮ್ ಆದಂತೆ ಆಗಿದೆ : ಸಮಂತಾ ಮತ್ತೆ ಮದುವೆಯಾಗುತ್ತಿದ್ದಾಳೆ. ವರನ್ಯಾರು ಗೊತ್ತಾದ್ರೆ ನೀವ್ ಅಚ್ಚರಿ ಆಗೋದು ಪಕ್ಕಾ.

ಅಂದಹಾಗೆ ಸಮಂತಾ ಮಾಡುವೆ ಆಗ್ತಿರೋದು ಬೇರೆ ಯಾರನ್ನೂ ಅಲ್ಲ, ಕಾಲಿವುಡ್ ನ ಸ್ಟಾರ್ ನಟ, ಮಾಜಿ ಗಂಡ ನಾಗಚೈತನ್ಯ ನನ್ನೇ ಅಂತಿದೆ ತೆಲುಗು ಮೀಡಿಯಾ. ಈಗ ಈ ಜೋಡಿ ಕಡೆಯಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಜೋಡಿ ಮತ್ತೆ ಒಂದಾಗಲಿ ಅಂತಾ ಅದೆಷ್ಟೋ ಅಭಿಮಾನಿಗಳು ಆಶಿಸಿರುವುದುಂಟು. ಅದೀಗ ನಿಜವಾಗಲಿದೆ. ಈ ಮರುಮದುವೆಗೆ ಮುಹೂರ್ತ ಒದಗಿ ಬಂದದ್ದು ಮೊನ್ನೆ ಸಮಂತಾ ಸದ್ಗುರು ಜಗ್ಗಿ ಅವರನ್ನು ಭೇಟಿಯಾದ ನಂತರ. ಸಮಂತಾ ಇತ್ತೀಚೆಗೆ ಸದ್ಗುರು ಅವರನ್ನ ಭೇಟಿಯಾಗಿದ್ದಾರೆ. ಸದ್ಗುರು ಅವರ ಸಲಹೆಯಂತೆ ಮತ್ತೆ ನಾಗಚೈತನ್ಯ ಅವರನ್ನ ಮರು ಮದುವೆಯಾಗಲು ಸಮಂತಾ ಯೋಚಿಸಿದ್ದಾರಂತೆ. ಅಷ್ಟಕ್ಕೂ ಈ ಗುಡ್ ನ್ಯೂಸ್ ನಿಜಾನಾ ಎಂಬುದನ್ನ ಈ ಮಾಜಿ ದಂಪತಿ ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ. ಆದರೆ ತೆಲುಗು ಸಿನಿಪ್ರಿಯರು ಮತ್ತು ನಾಗಚೈತನ್ಯ ಮತ್ತು ಸಮಂತಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

Leave A Reply