ಸೋಷಿಯಲ್ ಮೀಡಿಯಾ ವೈರಲ್ ಡಾಕ್ಟರ್ | ಹೀಗಾಗೋದಿಕ್ಕೆ ಒಂದು ಔಷಧದ ಚೀಟಿ ಕಾರಣ, ಏನಿದರ ವಿಶೇಷ ?

ಏಷ್ಟೋ ಬಾರಿ ಅನಾರೋಗ್ಯದಿಂದ ಹಾಸ್ಪಿಟಲ್ಗೆ ಹೋಗಿದ್ದಾಗ ವೈದ್ಯರು ಕೊಡುವ ಔಷಧ ಚೀಟಿಯನ್ನು ನೋಡಿ, ಈ ಅಕ್ಷರಗಳು ಬ್ರಹ್ಮನಿಗೆ ಅರ್ಥವಾಗಬೇಕು ಎಂದು ಗೊಣಗಿಕೊಂಡು, ಮೆಡಿಕಲ್ ಶಾಪ್ ನವರಿಗೆ ಹೇಗೆ ಇದು ಅರ್ಥವಾಗುತ್ತದೆ ಎಂಬ ಸಂದೇಹ ಹಲವರನ್ನು ಕಾಡುವುದು ಸಹಜ.

ಬಹುತೇಕ ವೈದ್ಯರು ಬರಹ ಅಸ್ಪಷ್ಟವಾಗಿರುತ್ತದೆ. ಹಾಗೆಂದು ಎಲ್ಲ ವೈದ್ಯರ ಬರಹವನ್ನು ಒಂದೇ ತಕ್ಕಡಿಯಲ್ಲಿ ತೂಗಿ ಸಮರ್ಥನೆ ನೀಡಲು ಸಾಧ್ಯವಿಲ್ಲ. ಕೆಲವು ವೈದ್ಯರ ಬರಹ ಸ್ಪಷ್ಟ ಹಾಗೂ ಸುಂದರವಾಗಿ ಇರುವುದು ವಿಶೇಷ. ಕೇರಳದ ಮಕ್ಕಳ ತಜ್ಞರೊಬ್ಬರು ಬರೆದಿರುವ ಔಷಧ ಚೀಟಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಸ್ಟಾರ್ ಆಗಿ ಸಿಕ್ಕಾಪಟ್ಟೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೇರಳದ ಪಾಲಕ್ಕಾಡ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಡಾ. ನಿತಿನ್ ನಾರಾಯಣನ್ ಅವರು ತಮ್ಮ ಔಷಧ ಚೀಟಿಯಿಂದಲೇ ಸಾಮಾಜಿಕ ಮಾಧ್ಯಮದಲ್ಲಿ ಹೀರೋ ಆಗಿ ಟ್ರೆಂಡ್ ರೂಪಿಸಿಕೊಂಡಿದ್ದಾರೆ. ವೈದ್ಯರು ಔಷಧ ಚೀಟಿಗಳನ್ನು ಬ್ಲಾಕ್ ಲೆಟರ್‌ಗಳಲ್ಲಿ ಬರೆಯಬೇಕೆಂದು ವಿವಿಧ ಏಜೆನ್ಸಿಗಳು ಕಡ್ಡಾಯಗೊಳಿಸಿದ್ದರೂ ಕೂಡ ಅನೇಕ ವೈದ್ಯರು, ಅದನ್ನು ಪಾಲಿಸದೇ , ಕಡೆಗಣಿಸಿ ಅಸ್ಪಷ್ಟ ಬರಹವನ್ನು ಮುಂದುವರಿಸುತ್ತಿದ್ದಾರೆ. ಆದರೆ, ನಿತಿನ್ ನಾರಾಯಣನ್ ಅವರು ಇದಕ್ಕೆ ತದ್ವಿರುದ್ಧವಾಗಿದ್ದು, ಔಷಧ ಚೀಟಿಯಲ್ಲಿ ತುಂಬಾ ಸ್ಪಷ್ಟವಾಗಿ ಕಾಣುವಂತೆ ಬ್ಲಾಕ್​ ಲೆಟರ್​ಗಳಲ್ಲಿಯೇ ಬರೆಯುತ್ತಾ ಅನೇಕ ವೈದ್ಯರಿಗೆ ಪ್ರೇರಣೆಯನ್ನು ನೀಡುತ್ತಿದ್ದಾರೆ ಎಂದರು ತಪ್ಪಾಗದು.

ಬಾಲ್ಯದಿಂದಲೂ ನಿತಿನ್​ ಅವರು ಉತ್ತಮ ಕೈಬರಹದ ಕೌಶಲ್ಯವನ್ನು ಹೊಂದಿದ್ದು, ಅಧ್ಯಯನಗಳು ಮುಗಿದ ನಂತರವೂ ಬರವಣಿಗೆಯ ಶೈಲಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.

ಡಾ. ನಿತಿನ್ ಅವರು ತ್ರಿಶೂರ್ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ಎಂಬಿಬಿಎಸ್ ಅನ್ನು ಪೂರ್ಣಗೊಳಿಸಿ, ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಎಜುಕೇಶನ್ ಆ್ಯಂಡ್ ರಿಸರ್ಚ್ ನಿಂದ ಎಂಡಿ ಕೂಡ ಪಡೆದಿದ್ದಾರೆ. ಇರಿಂಜಲಕುಡ ಬಳಿಯ ತ್ರಿಶೂರ್‌ನ ಪಡಿಯೂರಿನವರಾದ ಇವರು ಕಳೆದ ಮೂರು ವರ್ಷಗಳಿಂದ ಸಿಎಚ್‌ಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಬರವಣಿಗೆಯ ಮೂಲಕ ಜನಮಾನಸದಲ್ಲಿ ಹೆಸರು ಪಡೆಯುತ್ತಿರುವ ಡಾ.ನಿತಿನ್ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿ ಉಳಿದವರಿಗೂ ಮಾದರಿಯಾಗಿ ರುವುದು ಶ್ಲಾಘನೀಯ.

Leave A Reply

Your email address will not be published.