ಎಲೆಕ್ಟ್ರಿಕ್ ಸ್ಕೂಟರ್ ಗೆ ದಂಡ ವಿಧಿಸಿ ಅಪಹಾಸ್ಯಕ್ಕೆ ಈಡಾದ ಟ್ರಾಫಿಕ್ ಪೊಲೀಸ್

ಪೊಲೀಸರು ಎಲೆಕ್ಟ್ರಿಕ್‌ ಸ್ಕೂಟರ್‌ ಮಾಲೀಕರಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವನ್ನು ಹೊಂದಿಲ್ಲದ ಕಾರಣಕ್ಕೆ ದಂಡ ಹಾಕಿ ಸುದ್ದಿಯಾಗಿ ಅಪಹಾಸ್ಯಕ್ಕೆ ಮತ್ತು ಆಕ್ರೋಶಕ್ಕೆ ಗುರಿ ಆಗಿದ್ದಾರೆ ಇಲ್ಲಿನ ಪೊಲೀಸರು.

ಸೆಪ್ಟೆಂಬರ್ 6ರಂದು ಏಥರ್ 450X (Ather 450X) ಸ್ಕೂಟರ್‌ ಮಾಲೀಕರಿಗೆ 250 ರೂ. ದಂಡ ವಿಧಿಸಿದ್ದಾರೆ. ಪೊಲೀಸರು ನೀಡಿದ ಚಲನ್‌ ಪ್ರತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಚೇರಿಯಲ್ಲಿ ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 213 (5) (ಇ) ಅಡಿ ದಂಡ ವಿಧಿಸಲಾಗಿದೆ. ನೆಟ್ಟಿಗರು ಈಗ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಟ್ಯಾಗ್‌ ಮಾಡಿ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಬೇಕೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಪೊಲೀಸರು ಇಂತಹ ವಿಚಿತ್ರ ಚಲನ್ ನೀಡುತ್ತಿರುವುದು ಇದೇ ಮೊದಲಲ್ಲ. ಜುಲೈನಲ್ಲಿ ಕೇರಳದ ವ್ಯಕ್ತಿಯೊಬ್ಬರು ಸಾಕಷ್ಟು ಇಂಧನವಿಲ್ಲದೆ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಚಲಾಯಿಸಿದ್ದಕ್ಕಾಗಿ ದಂಡವನ್ನು ಹಾಕಿದ್ದರು.

ಏಥರ್ ಸ್ಕೂಟರ್ 5.4 kW ಬ್ರಶ್‌ಲೆಸ್ ಎಲೆಕ್ಟ್ರಿಕ್ ಮೋಟರ್ ಹೊಂದಿದ್ದು, 2.4 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು, ಇದಕ್ಕೆ ಮಾಲಿನ್ಯ ಪ್ರಮಾಣಪತ್ರ ಬೇಕಾಗೋದಿಲ್ಲ. ಎಲ್ಲಾ ಎಲೆಕ್ಟ್ರಿಕ್ ವಾಹನಗಳಿಗೂ ಮಾಲಿನ್ಯ ಪ್ರಮಾಣಪತ್ರ ಬೇಕಿಲ್ಲ. ಆದರೂ ಪೊಲೀಸರು ಚಲನ್ ನೀಡಿದ್ದು, ಈಗ ಕೇರಳ ಪೊಲೀಸರ ಈ ಕ್ರಮಕ್ಕೆ ಜನಸಾಮಾನ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave A Reply