KPSC : 1323 SDA ಹುದ್ದೆಗಳ ದಾಖಲೆ ಪರಿಶೀಲನೆ ದಿನಾಂಕ ನಿಗದಿ | ವೇಳಾಪಟ್ಟಿ ವಿವರ ಇಲ್ಲಿದೆ

ಕೆಪಿಎಸ್‌ಸಿ ( KPSC)ಯು 2019ನೇ ಸಾಲಿನ ರಾಜ್ಯದ ವಿವಿಧ ಇಲಾಖೆಗಳಲ್ಲಿನ ದ್ವಿತೀಯ ದರ್ಜೆ ಸಹಾಯಕರು / ಕಿರಿಯ ಸಹಾಯಕರು 1323 (1122+201) ಹುದ್ದೆಗಳ ಉಳಿಕೆ ಮೂಲ ವೃಂದದ ಮತ್ತು ಹೈದರಾಬಾದ್ ಕರ್ನಾಟಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಇದೀಗ ಮೂಲ ದಾಖಲೆಗಳ ಪರಿಶೀಲನೆಗೆ ಕೆಪಿಎಸ್‌ಸಿ ವೇಳಾಪಟ್ಟಿ ಬಿಡುಗಡೆ ಮಾಡಿದೆ.

2019ನೇ ಸಾಲಿನ 1323 ಎಸ್‌ಡಿಎ ಹುದ್ದೆಗಳಿಗೆ ಅರ್ಹತಾ ಪಟ್ಟಿಯನ್ನು ಆಗಸ್ಟ್ 26, 2022 ರಂದು ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿತ್ತು. ಈಗ ಈ ಪಟ್ಟಿಯಲ್ಲಿರುವ ಎಲ್ಲಾ ಅಭ್ಯರ್ಥಿಗಳು ಕೆಪಿಎಸ್‌ಸಿ ( KPSC) ನಿಗದಿ ಮಾಡಿದ ಈ ಕೆಳಗೆ ನೀಡಿರುವ ದಿನಾಂಕದಂದು ಹಾಗೂ ನಿಗದಿತ ಸ್ಥಳಕ್ಕೆ ಅಗತ್ಯ ಎಲ್ಲ ಮೂಲದಾಖಲೆಗಳನ್ನು ಪರಿಶೀಲನೆಗೆ ತೆಗೆದುಕೊಂಡು ಹೋಗಲು ಸೂಚಿಸಲಾಗಿದೆ.

ದಾಖಲೆ ಪರಿಶೀಲನೆ ಎಲ್ಲೆಲ್ಲಿ ನಡೆಯುತ್ತದೆ?
ಕೆಪಿಎಸ್‌ಸಿ ಕೇಂದ್ರ ಕಛೇರಿ ಬೆಂಗಳೂರು ಹಾಗೂ ಪ್ರಾಂತೀಯ ವಿಭಾಗಗಳಾದ ಮೈಸೂರು, ಕಲಬುರಗಿ, ಬೆಳಗಾವಿ ಮತ್ತು ಶಿವಮೊಗ್ಗಗಳಲ್ಲಿ ದಾಖಲೆ ಪರಿಶೀಲನೆ ನಡೆಯಲಿದೆ.

ದಾಖಲೆಗಳ ಪರಿಶೀಲನೆ ನಡೆಯುವ ದಿನಾಂಕ : 19-09 2022 ರಿಂದ 01-10-2022 ರವರೆಗೆ (ಸಾರ್ವತ್ರಿಕ ರಜಾ ದಿನ ಹೊರತುಪಡಿಸಿ). ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನಾ ಸೂಚನಾ ಪತ್ರಗಳನ್ನು ಕೆಪಿಎಸ್‌ಸಿ ಈಗಾಗಲೇ ರವಾನಿಸುವ ಕೆಲಸ ಆರಂಭಿಸಿದೆ.

ಮೂಲ ದಾಖಲೆಗಳ ಪರಿಶೀಲನೆ ಎಲ್ಲೆಲ್ಲಿ? ಯಾವಾಗ?
ಮೈಸೂರು: 19-09-2022 ರಿಂದ 27-09-2022
ರವರೆಗೆ.
ಶಿವಮೊಗ್ಗ: 19-09-2022 ರಿಂದ 29-09-2022 ರವರೆಗೆ.
ಕಲಬುರಗಿ :  19-09-2022 ರಿಂದ 26-09-2022 ರವರೆಗೆ.
ಬೆಂಗಳೂರು : 19-09-2022 ರಿಂದ 01-10-2022 ರವರೆಗೆ.
ಬೆಳಗಾವಿ :  19-09-2022 ರಿಂದ 30-09-2022
ರವರೆಗೆ.

ಅಭ್ಯರ್ಥಿಗಳು ವಿಭಾಗಾವಾರು ಅರ್ಹತಾ ಪಟ್ಟಿ, ದಿನಾಂಕ, ಸಮಯ ಮತ್ತು ವಿಳಾಸವನ್ನು ಕೆಪಿಎಸ್‌ಸಿ https://www.kpsc.kar.nic.in  ಸಹ ಚೆಕ್ ಮಾಡಿಕೊಳ್ಳಬಹುದು.

ಮೇಲಿನ ನಗರಗಳಲ್ಲಿ ಯಾವ ಕಚೇರಿಗಳಲ್ಲಿ (ವಿಳಾಸ) ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ ಎಂಬುದನ್ನು ತಿಳಿಯಲು ಈ ಕೆಳಗಿನ ಪ್ರಕಟಣೆಯ ಓದಿರಿ.


Leave A Reply

Your email address will not be published.