‘ಜೀಸಸ್ ಸರ್ವೋಚ್ಚ’ ಎಂದದ್ದೇ ತಪ್ಪಾಯ್ತು, ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬನಿಗೆ ಗಲ್ಲು ಶಿಕ್ಷೆ ಬಿತ್ತು!      

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇವತ್ತಿನಿಂದ ಸರಿ ಸುಮಾರು ಐದು ವರ್ಷಗಳ ಹಿಂದೆ ಧರ್ಮನಿಂದೆಯ ಆರೋಪದ ಮೇಲೆ ಕ್ರಿಶ್ಚಿಯನ್ ಮೆಕ್ಯಾನಿಕ್‌ಗೆ ಪಾಕಿಸ್ತಾನದ ನ್ಯಾಯಾಲಯವು ಮರಣದಂಡನೆ ವಿಧಿಸಿದೆ. ತನ್ನ ಸೇವೆಗಳಿಗೆ ಹಣ ಪಾವತಿಸುವ ಬಗ್ಗೆ ಗ್ರಾಹಕನೊಂದಿಗೆ ಆದ ಸಣ್ಣ ವಾಗ್ಯುದ್ಧ ದ ನಂತರ ಅಶ್ಫಾಕ್ ಮಸಿಹ್ ಎಂಬಾತನನ್ನು ಜೂನ್ 2017 ರಲ್ಲಿ ಬಂಧಿಸಲಾಗಿತ್ತು.

ಮಸಿಹ್ ಲಾಹೋರ್‌ನಲ್ಲಿ ಗ್ಯಾರೇಜ್ ಇಟ್ಟುಕೊಂಡಿದ್ದ.ಆತ ಜೂನ್ 2017 ರಲ್ಲಿ ಲಾಹೋರ್‌ನಲ್ಲಿ ವ್ಯಕ್ತಿಯೊಬ್ಬನ ಬೈಕನ್ನು ರಿಪೇರಿ ಮಾಡಿದ್ದ. ವಾಹನ ರಿಪೇರಿ ಮಾಡಿದ ಬಳಿಕ ಹಣ ಪಾವತಿ ಮಾಡಲು ಕೇಳಿದ್ದಾನೆ. ಆದರೆ ಗ್ರಾಹಕ ಸಂಪೂರ್ಣ ಹಣ ಪಾವತಿಸದೆ, ಕೌಕಾಶಿಗೆ ಇಳಿದಿದ್ದಾರೆ. ಆಲ್ಲದೆ, ಆ ಮುಸ್ಲಿಂ ಗ್ರಾಹಕರು, ‘ನಾನೊಬ್ಬ ಧಾರ್ಮಿಕ ವ್ಯಕ್ತಿ. ಹೀಗಾಗಿ ನನಗೆ ರಿಯಾಯಿತಿ ನೀಡಬೇಕೆಂದು’ ಕೇಳಿದ್ದಾನೆ.

ಆದರೆ ಮಸಿಹ್ ಅದಕ್ಕೆ ನಿರಾಕರಿಸಿ, ‘ ತಾನು ಕ್ರಿಸ್ತನನ್ನು ಮಾತ್ರ ನಂಬುತ್ತೇನೆ. ಕ್ರಿಶ್ಚಿಯನ್ನರಿಗೆ ಜೀಸಸ್ ಸರ್ವೋಚ್ಚ ‘ ಎಂದು ಹೇಳಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಕೂಡಲೇ ಸ್ಥಳದಲ್ಲಿ ಗುಂಪು ಸೇರಿ ಪ್ರವಾದಿ ಮುಹಮ್ಮದ್ ಅವರನ್ನು ಮಸಿಹ್  ಅಗೌರವಿಸಿದ್ದಾನೆ ಎಂದು ಆರೋಪ ಮಾಡಿದ್ದಾರೆ.

ಕೂಡಲೇ, ಪೊಲೀಸರು ಸ್ಥಳಕ್ಕೆ ಆಗಮಿಸಿ, ಮಸಿಹ್‌ನನ್ನು ಬಂಧಿಸಿ ಆತನ ವಿರುದ್ಧ ಧರ್ಮನಿಂದನೆ ಪ್ರಕರಣ ದಾಖಲಿಸಿದ್ದಾರೆ. ಅಲ್ಲಿಂದ ಶುರುವಾದ ತನಿಖೆ ಮತ್ತು ಕೋರ್ಟು ಕಲಾಪ 2019 ರಿಂದ ಅನೇಕ ಬಾರಿ ಮುಂದೂಡಿಕೆಯಾಗಿತ್ತು. ಈಗ ಕ್ಷುಲ್ಲಕ ವೆನಿಸುವ ಕಾರಣಕ್ಕೆ ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

Leave A Reply

Your email address will not be published.