Day: July 6, 2022

ಬೆಳ್ತಂಗಡಿ | ಅಕ್ರಮ ಮರ ಸಾಗಾಟ, ಲಾರಿ ಮತ್ತು ಮರ ವಶಕ್ಕೆ

ಬೆಳ್ತಂಗಡಿ ತಾಲೂಕಿನ ಉಪ್ಪಿನಂಗಡಿ ಕಣಿಯೂರು ಎಂಬ ಪ್ರದೇಶದಲ್ಲಿ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ನಾಗರಿಕರು ತಡೆಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ಇಂದು ಸರಿಸುಮಾರು ಎಂಟು ಗಂಟೆಗೆ ನಡೆದಿದೆ. ಬೆಳಾಲು ಕಡೆಯಿಂದ ಉಪ್ಪಿನಂಗಡಿ ಮಾರ್ಗವಾಗಿ ಚಲಿಸುತ್ತಿದ್ದ ಲಾರಿಯು ಕಣಿಯೂರು ಪ್ರದೇಶದಲ್ಲಿ ರಿಕ್ಷಾ ಚಾಲಕರಿಗೆ ಮಾರ್ಗ ಬಿಡದೆ ರಿಕ್ಷಾ ಚಾಲಕರೊಂದಿಗೆ ವಾಗ್ವಾದಕ್ಕೆ ಲಾರಿ ಚಾಲಕ ಮುಂದಾದಾಗ ಊರಿನವರಲ್ಲಿ ಅನುಮಾನ ಬಂದ ಕಾರಣ ಲಾರಿ ತಡೆಹಿಡಿದರು. ಲಾರಿ ಚಾಲಕನಲ್ಲಿ ಯಾವುದೇ ಪರವನಿಗೆ ಇಲ್ಲ ಎಂದು ಲಾರಿ ಚಾಲಕ …

ಬೆಳ್ತಂಗಡಿ | ಅಕ್ರಮ ಮರ ಸಾಗಾಟ, ಲಾರಿ ಮತ್ತು ಮರ ವಶಕ್ಕೆ Read More »

Sleep Tips | ನಿಮಗೆ ನಿದ್ರಾ ಸಮಸ್ಯೆಗಳಿದ್ಯಾ? ಈ 5 ಆಹಾರಗಳನ್ನು ಸೇವಿಸಿ, ಮಗುವಿನಂತೆ ನಿದ್ರಿಸಿ

ಹೊಸ ಕನ್ನಡ ನ್ಯೂಸ್‌ : ಮೆಲಟೋನಿನ್ ಅನ್ನು ನಿದ್ರೆಯ ಹಾರ್ಮೋನ್ ಎಂದೂ ಕರೆಯಲಾಗುತ್ತದೆ, ಇದು ನಿದ್ರೆ-ಎಚ್ಚರದ ಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಹಾರ್ಮೋನ್ ಸ್ವಾಭಾವಿಕವಾಗಿ ಬೆಳಕಿಗೆ ಪ್ರತಿಕ್ರಿಯಿಸುತ್ತದೆ – ಆದ್ದರಿಂದ, ಕತ್ತಲೆ ಕೋಣೆಯಲ್ಲಿ, ಹಾರ್ಮೋನ್ ಮಟ್ಟಗಳು ಕಡಿಮೆ ಇರುತ್ತವೆ ಮತ್ತು ಪ್ರಕಾಶಮಾನವಾದ-ಬೆಳಕಿನ ಕೋಣೆಯಲ್ಲಿ, ಅದರ ಮಟ್ಟಗಳು ಹೆಚ್ಚಿರುತ್ತವೆ. ಆದರೆ ಮೆಲಟೋನಿನ್ ಮಟ್ಟವನ್ನು ನಿಯಂತ್ರಿಸಲು ಬೆಳಕು ಮಾತ್ರ ಮಾರ್ಗವಲ್ಲ. ಕೆಲವು ಆರೋಗ್ಯಕರ ಆಹಾರಗಳಿವೆ, ಅವುಗಳನ್ನು ಆಹಾರದಲ್ಲಿ ಸೇರಿಸಿದರೆ, ಉತ್ತಮ ಮತ್ತು ಆಳವಾದ ನಿದ್ರೆಯನ್ನು ಪಡೆಯಲು ನಿಮಗೆ ಸಹಾಯ …

Sleep Tips | ನಿಮಗೆ ನಿದ್ರಾ ಸಮಸ್ಯೆಗಳಿದ್ಯಾ? ಈ 5 ಆಹಾರಗಳನ್ನು ಸೇವಿಸಿ, ಮಗುವಿನಂತೆ ನಿದ್ರಿಸಿ Read More »

ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ಬಂದಿದ್ದ ಖ್ಯಾತ ಸ್ವಾಮಿಜಿಗೆ ಕಾರು ಅಪಘಾತ

ಬರ್ಬರವಾಗಿ ಹತ್ಯೆಯಾದ ಸರಳ ವಾಸ್ತು ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ತೆರಳಿದ್ದ ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ್ ಸ್ವಾಮೀಜಿ ಕಾರು ಅಪಘಾತವಾಗಿದೆ. ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಮುಗಿಸಿ ಹುಬ್ಬಳ್ಳಿಗೆ ವಾಪಸ್​ ಬರುವ ವೇಳೆ ತೇಗುರ ಕ್ರಾಸ್ ಬಳಿ ಸ್ವಾಮೀಜಿ ಕಾರು ಪಲ್ಟಿಯಾಗಿದೆ. ಸ್ವಾಮೀಜಿ ಅವರು ಬೆಳಗಾವಿಯ ಕೆ.ಎಲ್.ಈ ಆಸ್ಪತ್ರೆಗೆ ಬಂದಿದ್ದು, ಆರೋಗ್ಯ ತಪಾಸಣೆ ಬಳಿಕ ಮಠಕ್ಕೆ ತೆರಳಲಿರುವುದಾಗಿ ತಿಳಿದುಬಂದಿದೆ. ಅದೃಷ್ಟವಶಾತ್​ ಸ್ವಾಮೀಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಲಿಂಗೇಶ್ವರ್ ಸ್ವಾಮೀಜಿ ಅವರು,ಬೆಳಗಾವಿ‌ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿಯ ಪ್ರಸಿದ್ಧ ದುರದುಂಡೇಶ್ವರ ಮಠದ ಸ್ವಾಮೀಜಿಯಾಗಿದ್ದಾರೆ. 

ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡ ಕಮೀಷನರ್ ಶಶಿಕುಮಾರ್

ಮಂಗಳೂರು : ರೌಡಿ ಪರೇಡ್ ನಲ್ಲಿ ಮಂಗಳೂರು ಕಮೀಷನರ್ ಶಶಿಕುಮಾರ್, ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿ ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಜುಲೈ 6 ರಂದು ಪೊಲೀಸ್ ಗ್ರಾಂಡ್ ನಲ್ಲಿ ರೌಡಿಗಳಿಗೆ ಮತ್ತು ಗಾಂಜಾ ಕಳ್ಳಸಾಗಣೆ ಮಾಡುವವರಿಗೆ ಪರೇಡ್ ನಡೆದಿತ್ತು. ಪರೇಡ್ ನಲ್ಲಿ ಡ್ರಗ್ಸ್ ಪ್ರಕರಣದ ಆರೋಪಿಯಾದ ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿಯ, ಅಂಗಿ ಬಿಚ್ಚಿಸಿ ಮೈ ಮೇಲೆ ಇರುವ ಟ್ಯಾಟೂ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ‘ತನ್ನ ಅಮ್ಮನ ಟ್ಯಾಟೂ ಹಾಕಿಸಿಕೊಂಡಿರುವುದಾಗಿ’ ಅಮನ್ ಉತ್ತರಿಸಿದಾಗ, ಮಾಡೋದೆಲ್ಲ ಮಾಡಿ …

ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡ ಕಮೀಷನರ್ ಶಶಿಕುಮಾರ್ Read More »

Breaking | ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ .ವೀರೇಂದ್ರ ಹೆಗಡೆ ನಾಮನಿರ್ದೇಶನ : ಪ್ರಧಾನಿ ಮೋದಿ ಘೋಷಣೆ

ಮಾನ್ಯ ವೀರೇಂದ್ರ ಹೆಗ್ಗಡೆಯವರಿಗೆ ಕೇಂದ್ರದ ರಾಜ್ಯಸಭಾ ಸದಸ್ಯರಾಗುವ ಭಾಗ್ಯ ದೊರೆತಿದೆ. ಈ ಬಗ್ಗೆ ಖುದ್ದು ಟ್ವೀಟ್ ಮಾಡಿದ ಮೋದಿಯವರು, ಮಾನ್ಯ ವೀರೇಂದ್ರ ಹೆಗ್ಗಡೆಯವರು ಮುಂದೆ ನಿಂತು ಸಮಾಜಕ್ಕೆ ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದ್ದಾರೆ. ಮಾನ್ಯ ವೀರೇಂದ್ರ ಹೆಗ್ಗಡೆ ಅವರು ಪಾರ್ಲಿಮೆಂಟಿನ ಘನತೆಯನ್ನು ಹೆಚ್ಚಿಸುತ್ತಾರೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಆಮೂಲಕ ರಾಜ್ಯಸಭೆಗೆ ವೀರೇಂದ್ರ ಹೆಗ್ಗಡೆಯವರ ನಾಮಿನೇಷನ್ ಆಗಿದೆ. ಸಂಗೀತ ನಿರ್ದೇಶಕ ಇಳೆಯರಾಜ, ಓಟದ ರಾಣಿ ಪಿಟಿ ಉಷಾ ಮತ್ತು ವಿಜಯೇಂದ್ರ ಪ್ರಸಾದ್ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಇತರರು. ಅಪ್ರತಿಮ …

Breaking | ರಾಜ್ಯಸಭೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ .ವೀರೇಂದ್ರ ಹೆಗಡೆ ನಾಮನಿರ್ದೇಶನ : ಪ್ರಧಾನಿ ಮೋದಿ ಘೋಷಣೆ Read More »

ಸಂಖ್ಯಾ ಶಾಸ್ತ್ರ ನಂಬಿ ಚಿರಂಜೀವಿ  ಹೆಸರು ಬದಲಿಸಿಕೊಂಡರೇ ?

ಚಿರಂಜೀವಿ ಹೆಸರು ಬದಲಾವಣೆಗೆ ಸಂಬಂಧಿಸಿದ ಹಲವು ಸುದ್ದಿಗಳು ವೈರಲ್ ಆಗುತ್ತಿವೆ.ಮೆಗಾಸ್ಟಾರ್​ ಚಿರಂಜೀವಿ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಚಿರಂಜೀವಿ ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರ ಗಾಡ್ ಫಾದರ್ ಜೊತೆಗೆ ಫಸ್ಟ್ ಲುಕ್ ಹಾಗೂ ಟೀಸರ್ ಗ್ಲಿಂಪ್ಸ್ ಕೂಡ ಬಿಡುಗಡೆಯಾಗಿದೆ. ಆದರೆ ಈ ವಿಡಿಯೋದಲ್ಲಿ ಚಿರಂಜೀವಿ ಹೆಸರಲ್ಲಿ ಸಣ್ಣ ಬದಲಾವಣೆ ಕಂಡು ಬಂದಿದ್ದು, ಈ ಬಗ್ಗೆ ಚಿತ್ರರಂಗದಲ್ಲಿ ಹಲವು ಚರ್ಚೆಗಳು ಶುರುವಾಗಿವೆ. ಸತತ ಸೋಲುಗಳಿಂದಾಗಿ ಚಿರಂಜೀವಿ ತಮ್ಮ ಹೆಸರಿನಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ ಜನ. …

ಸಂಖ್ಯಾ ಶಾಸ್ತ್ರ ನಂಬಿ ಚಿರಂಜೀವಿ  ಹೆಸರು ಬದಲಿಸಿಕೊಂಡರೇ ? Read More »

ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ, ಉಪರಾಷ್ಟ್ರಪತಿ ಪಟ್ಟ ಅವರಿಗೇ ಪಕ್ಕಾ?

ದೆಹಲಿ: ಉಪರಾಷ್ಟ್ರಪತಿ ಹುದ್ದೆಗಾಗಿ ಎನ್ ಡಿಎ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಸಲಿದೆ ಎಂಬ ವರದಿಗಳ ಬೆನ್ನಲ್ಲೇ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಬಹುದು ಎಂಬ ಊಹಾಪೋಹದ ನಡುವೆ ಇಂದು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದರಿಂದಾಗಿ ಗುಮಾನಿ ದಟ್ಟವಾಗುತ್ತಿದೆ. ಅಮಾನತುಗೊಂಡ ಪಕ್ಷದ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಮಾಡಿದ ಕಾಮೆಂಟ್‌ಗಳಿಂದ ಬಿಜೆಪಿ ಸದ್ಯ ಭಾರೀ ಹಿನ್ನಡೆಯನ್ನು ಅನುಭವಿಸುತ್ತಿದೆ. …

ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ, ಉಪರಾಷ್ಟ್ರಪತಿ ಪಟ್ಟ ಅವರಿಗೇ ಪಕ್ಕಾ? Read More »

ಕೊರೊನಾ ಲಸಿಕೆ ಅಂತರದಲ್ಲಿ ಮಹತ್ವದ ಬದಲಾವಣೆ

ಕೇಂದ್ರ ಆರೋಗ್ಯ ಸಚಿವಾಲಯ COVID-19 ಮುನ್ನೆಚ್ಚರಿಕೆ ಡೋಸ್‌ ಗಳ ಅಂತರವನ್ನು 9 ತಿಂಗಳಿಂದ 6 ತಿಂಗಳವರೆಗೆ ಕಡಿಮೆ ಮಾಡಿದೆ.18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರಸ್ತುತ 9 ತಿಂಗಳ ಅಂತರವನ್ನು 6 ತಿಂಗಳಿಗೆ ಇಳಿಕೆ ಮಾಡಲಾಗಿದೆ. 18-59 ವರ್ಷಗಳಿಂದ ಎಲ್ಲಾ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ಅನ್ನು 6 ತಿಂಗಳು ಅಥವಾ 26 ವಾರ ಪೂರ್ಣಗೊಳಿಸಿದ ನಂತರ ನೀಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಮಂತ್ರಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ. 2 ಡೋಸ್ ಮತ್ತು ಮುನ್ನೆಚ್ಚರಿಕೆ ಡೋಸ್ ನಡುವಿನ ಅವಧಿಯನ್ನು ಅಸ್ತಿತ್ವದಲ್ಲಿರುವ …

ಕೊರೊನಾ ಲಸಿಕೆ ಅಂತರದಲ್ಲಿ ಮಹತ್ವದ ಬದಲಾವಣೆ Read More »

ಈ ರೀತಿ ಸಂಭೋಗದಿಂದ ಗಂಟಲು ಕ್ಯಾನ್ಸರ್ ಬರಬಹುದು ಎಚ್ಚರ !

ಕ್ಯಾನ್ಸರ್ ಗಂಟಲಿನ ವಿವಿಧ ಸ್ಥಳಗಳಲ್ಲಿ ಮತ್ತು ಗಂಟಲಿನ ಸುತ್ತಲೂ ಬೆಳೆಯಬಹುದು. ಕ್ಯಾನ್ಸರ್​ ಹರಡುವಿಕೆ ಬಗ್ಗೆ ಮತ್ತೊಂದು ಆಘಾತಕಾರಿ ಅಂಶವೊಂದು ಹೊರಬಿದ್ದಿದೆ. ಗಂಟಲಿನ ಕ್ಯಾನ್ಸರ್​ಗೆ ಧೂಮಪಾನ ಮತ್ತು ಮದ್ಯಪಾನ ಜೊತೆಗೆ ಮೌಖಿಕ ಸಂಭೋಗ ಕಾರಣ ಆಗುತ್ತದೆ ಅನ್ನುವುದು ಈಗ ಪ್ರೂವ್ ಆಗಿದೆ. ಅಲ್ಲದೆ ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕದಿಂದಲೂ ಗಂಟಲಿನ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಬಾಯಿಯ ಸೆಕ್ಸ್ ನಿಂದಾಗಿ ಎಚ್ ಪಿವಿ ಸೋಂಕು ಬರುವ ಕಾರಣದಿಂದಾಗಿ ಇದು ಧ್ವನಿಪೆಟ್ಟಿಗೆ ಕ್ಯಾನ್ಸರ್ ಗೆ ಕಾರಣವಾಗಬಹುದು. ಮಾನವ ಪ್ಯಾಪಿಲೋಮವೈರಸ್ (ಹೆಚ್​​ಪಿವಿ) ಪ್ರಸರಣದಿಂದಾಗಿ ಈ …

ಈ ರೀತಿ ಸಂಭೋಗದಿಂದ ಗಂಟಲು ಕ್ಯಾನ್ಸರ್ ಬರಬಹುದು ಎಚ್ಚರ ! Read More »

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಜು. 7 ರಂದು ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ, ಸ್ನಾತಕೋತ್ತರ, ಐಟಿಐ, ಎಂಜಿನಿಯರಿಂಗ್ ಕಾಲೇಜು ಸಹಿತ ನಾಳೆ (ಜು.7) ರಂದು ರಜೆ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕಳೆದ 24 ತಾಸುಗಳಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿರುತ್ತದೆ. ಇದೇ ಹವಾಮಾನ …

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ Read More »

error: Content is protected !!
Scroll to Top