ಈ ರೀತಿ ಸಂಭೋಗದಿಂದ ಗಂಟಲು ಕ್ಯಾನ್ಸರ್ ಬರಬಹುದು ಎಚ್ಚರ !

ಕ್ಯಾನ್ಸರ್ ಗಂಟಲಿನ ವಿವಿಧ ಸ್ಥಳಗಳಲ್ಲಿ ಮತ್ತು ಗಂಟಲಿನ ಸುತ್ತಲೂ ಬೆಳೆಯಬಹುದು. ಕ್ಯಾನ್ಸರ್​ ಹರಡುವಿಕೆ ಬಗ್ಗೆ ಮತ್ತೊಂದು ಆಘಾತಕಾರಿ ಅಂಶವೊಂದು ಹೊರಬಿದ್ದಿದೆ.

ಗಂಟಲಿನ ಕ್ಯಾನ್ಸರ್​ಗೆ ಧೂಮಪಾನ ಮತ್ತು ಮದ್ಯಪಾನ ಜೊತೆಗೆ ಮೌಖಿಕ ಸಂಭೋಗ ಕಾರಣ ಆಗುತ್ತದೆ ಅನ್ನುವುದು ಈಗ ಪ್ರೂವ್ ಆಗಿದೆ. ಅಲ್ಲದೆ ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕದಿಂದಲೂ ಗಂಟಲಿನ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಬಾಯಿಯ ಸೆಕ್ಸ್ ನಿಂದಾಗಿ ಎಚ್ ಪಿವಿ ಸೋಂಕು ಬರುವ ಕಾರಣದಿಂದಾಗಿ ಇದು ಧ್ವನಿಪೆಟ್ಟಿಗೆ ಕ್ಯಾನ್ಸರ್ ಗೆ ಕಾರಣವಾಗಬಹುದು. ಮಾನವ ಪ್ಯಾಪಿಲೋಮವೈರಸ್ (ಹೆಚ್​​ಪಿವಿ) ಪ್ರಸರಣದಿಂದಾಗಿ ಈ ಕ್ಯಾನ್ಸರ್​​ ಕಂಡುಬರಬಹುದು ಎಂದು ಇತ್ತೀಚಿನ ಹೊಸ ಸಂಶೋಧನೆಗಳು ಒತ್ತಿಹೇಳುತ್ತಿವೆ.

ಗಂಟಲಿನ ಕ್ಯಾನ್ಸರ್ ಮೌಖಿಕ ಸಂಭೋಗದ ಮೂಲಕ ಹರಡುವುದನ್ನು ಒಳಗೊಂಡಿರುತ್ತದೆ. ಮಾಡರ್ನ್ ಜನರು, ಮುಖ್ಯವಾಗಿ ಯುವ ಜನರು ತಮ್ಮ ವಿರುದ್ಧ ಲಿಂಗಿಯ ಜನನಾಂಗವನ್ನು ಬಾಯಿಯ ಮೂಲಕ ಮುತ್ತಿಕ್ಕುವುದು, ನಾಲಗೆಯ ಮೂಲಕ ಸ್ಪರ್ಶಿಸುವುದು ಮತ್ತು ಪ್ರಚೋದಿಸುವುದನ್ನು ಮಾಡುತ್ತಾರೆ. ಸ್ತ್ರೀಯ ಜನನಾಂಗದ ಕ್ಲಿಟೋರಿಸ್ ಭಾಗವನ್ನು ಹಾಗೆ ಬಾಯಿ ಹಾಕಿ ಓರಲ್ ಸೆಕ್ಸ್ ಮಾಡುವಾಗ ಸ್ತ್ರೀಯ ಜನನಾಂಗದಲ್ಲಿರಬಹುದಾದ ವೈರಾಣುಗಳು ಪುರುಷರ ಗಂಟಲಿಗೆ ಹೋಗಿ ಅದು ಕ್ಯಾನ್ಸರ್ ಆಗುವ ಸಂಭವ ಹೆಚ್ಚು.

ಇತ್ತೀಚಿನ ವರ್ಷಗಳಲ್ಲಿ ಮಾನವ ಪ್ಯಾಪಿಲೋಮ ವೈರಸ್‌ (ಹೆಚ್​​ಪಿವಿ)ನಿಂದ ಉಂಟಾಗುವ ಗಂಟಲು ಕ್ಯಾನ್ಸರ್‌ ಪ್ರಕರಣಗಳ ಸಂಖ್ಯೆಯು ಹೆಚ್ಚಾಗಿದೆ ಎಂದು ಯುಜೆಡ್​ ಲ್ಯುವೆನ್‌ನ ಪ್ರಾಧ್ಯಾಪಕ ಡಾ.ಪಿಯರೆ ಡೆಲೇರೆ ತಿಳಿಸಿದ್ದಾರೆ. ಪುರುಷರು ಮತ್ತು ಮಹಿಳೆಯರಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಲೈಂಗಿಕವಾಗಿ ಹರಡುವ ಹೆಚ್​​ಪಿವಿ ಸೋಂಕು ಬಾಯಿಯ ಕುಹರದ ಹಿಂದೆ ಕ್ಯಾನ್ಸರ್​ನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ. ಬಹುಪಾಲು ಪ್ರಕರಣಗಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ದೇಹದಿಂದ ವೈರಸ್​ನ್ನು ತೆಗೆದುಹಾಕುತ್ತದೆ. ಅಂದರೆ ಕ್ಯಾನ್ಸರ್ ಬರದಂತೆ ನೋಡಿಕೊಳ್ಳುತ್ತದೆ. ಆದರೆ ಕೆಲ ಪ್ರಕರಣಗಳಲ್ಲಿ ಕ್ಯಾನ್ಸರ್ ಬರುವುದು ಖಚಿತವಾಗಿದೆ.

ಹಾಲಿವುಡ್ ನಟ ಮೈಕೆಲ್ ಡಗ್ಲಾಸ್ ತಾನು ಬಾಯಿಯ ಸೆಕ್ಸ್ ( ಮೌಖಿಕ) ಮಾಡಿ ತನಗೆ ಗಂಟಲ ಕ್ಯಾನ್ಸರ್ ಬಂತು ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಆತ ಹಲವು ಪಾರ್ಟ್ನರ್ ಗಳ ಜತೆ ಮೌಖಿಕವಾಗಿ, ಸ್ತ್ರೀಯರ ಜನನಾಂಗವನ್ನು ನಾಲಿಗೆ ಮತ್ತು ಬಾಯಿಯಿಂದ ಸ್ಪರ್ಶಿಸಿ ಪ್ರಚೋದಿಸಿದ್ದನಂತೆ. ಅದರಿಂದಾಗಿ ಆತನಿಗೆ ಗಂಟಲ ಕ್ಯಾನ್ಸರ್ ತಗುಲಿತ್ತು.

Leave A Reply

Your email address will not be published.