ಸಂಖ್ಯಾ ಶಾಸ್ತ್ರ ನಂಬಿ ಚಿರಂಜೀವಿ  ಹೆಸರು ಬದಲಿಸಿಕೊಂಡರೇ ?

ಚಿರಂಜೀವಿ ಹೆಸರು ಬದಲಾವಣೆಗೆ ಸಂಬಂಧಿಸಿದ ಹಲವು ಸುದ್ದಿಗಳು ವೈರಲ್ ಆಗುತ್ತಿವೆ.ಮೆಗಾಸ್ಟಾರ್​ ಚಿರಂಜೀವಿ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ಚಿರಂಜೀವಿ ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರ ಗಾಡ್ ಫಾದರ್ ಜೊತೆಗೆ ಫಸ್ಟ್ ಲುಕ್ ಹಾಗೂ ಟೀಸರ್ ಗ್ಲಿಂಪ್ಸ್ ಕೂಡ ಬಿಡುಗಡೆಯಾಗಿದೆ. ಆದರೆ ಈ ವಿಡಿಯೋದಲ್ಲಿ ಚಿರಂಜೀವಿ ಹೆಸರಲ್ಲಿ ಸಣ್ಣ ಬದಲಾವಣೆ ಕಂಡು ಬಂದಿದ್ದು, ಈ ಬಗ್ಗೆ ಚಿತ್ರರಂಗದಲ್ಲಿ ಹಲವು ಚರ್ಚೆಗಳು ಶುರುವಾಗಿವೆ.

ಸತತ ಸೋಲುಗಳಿಂದಾಗಿ ಚಿರಂಜೀವಿ ತಮ್ಮ ಹೆಸರಿನಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ ಜನ. ಸಂಖ್ಯಾಶಾಸ್ತ್ರಜ್ಞರ ಸಲಹೆಯಂತೆ ಚಿರು ತಮ್ಮ ಹೆಸರಿಗೆ ‘ಇ’ ಎಂಬ ಇನ್ನೊಂದು ಅಕ್ಷರವನ್ನು ಸೇರಿಸಿದ್ದಾರೆ ಎನ್ನಲಾಗುತ್ತಿದೆ.

Leave A Reply