Day: February 28, 2022

ಕಡಬ: ಹೊಸಮಠ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿದ್ದ ಮೇರಿ ಇ.ಟಿ ಅವರಿಗೆ ಸೇವಾ ನಿವೃತ್ತಿ-ವಿದಾಯ ಕೂಟ

ಕಡಬ: ತಾಲೂಕಿನ ಹೊಸಮಠ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 19 ವರ್ಷಗಳಿಂದ ಪ್ರಭಾರ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದ ಮೇರಿ ಇ.ಟಿ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಫೆ.28 ರಂದು ಬೀಳ್ಕೊಡುಗೆ ಕಾರ್ಯಕ್ರಮ ಹೊಸಮಠ ಶಾಲೆಯಲ್ಲಿ ನೆರವೇರಿತು. 2003 ರಲ್ಲಿ ಕಿರಿಯ ಪ್ರಾಥಮಿಕ ಶಾಲೆಗೆ ನಿಯೋಜನೆಗೊಂಡಿದ್ದ ಮೇರಿ ಇ.ಟಿ ಅವರು ಸತತವಾಗಿ 19 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ಶಾಲೆಯನ್ನು ಮೇಲ್ದರ್ಜೆಗೇರಿಸುವಲ್ಲಿ ಉತ್ತಮ ಪಾತ್ರ ವಹಿಸಿದ್ದು, ವಿದಾಯ ಸನ್ಮಾನ ಮಾಡುವ ಮೂಲಕ ಅವರ ಕಾರ್ಯವೈಖರಿಯನ್ನು ಈ …

ಕಡಬ: ಹೊಸಮಠ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿದ್ದ ಮೇರಿ ಇ.ಟಿ ಅವರಿಗೆ ಸೇವಾ ನಿವೃತ್ತಿ-ವಿದಾಯ ಕೂಟ Read More »

ಬೆಳಾಲ್ ನಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಸಮಾರಂಭ : ಧರ್ಮದರ್ಶಿ ಹರೀಶ್ ಆರಿಕೋಡಿ ಅವರಿಗೆ ‘ ಬೆಳಾಲಿನ ಮುತ್ತು’ ಎಂಬ ಬಿರುದು

ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಶುಭ ಮುಹೂರ್ತದಲ್ಲಿ ದ.ಕ.ಅಮೇಚೂರು ಕಬಡ್ಡಿ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಮೋಹನ ಗೌಡ ಸ್ಮರಣಾರ್ಥವಾಗಿ ಬೆಳಾಲು ಗ್ರಾಮ ಮಟ್ಟದ 8 ತಂಡಗಳ ಪ್ರೊ. ಮಾದರಿಯ ಬಿಡ್ಡಿಂಗ್ ಕಬಡ್ಡಿ ಮತ್ತು 65 ಕೆಜಿ ವಿಭಾಗ್ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಬೆಳಾಲ್ ಫ್ರೆಂಡ್ಸ್ ಟ್ರೋಫಿ 2022 ಇದೇ ಫೆ.26 ರಂದು ಶನಿವಾರ ಶ್ರೀ‌ ಧ.ಮಂ.ಹೈಸ್ಕೂಲ್ ಮೈದಾನದಲ್ಲಿ ನಡೆದಿತ್ತು. 65 ಕೆಜಿ ವಿಭಾಗದಲ್ಲಿ ಆಹ್ವಾನಿತ 32 ತಂಡಗಳಿಗೆ ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ …

ಬೆಳಾಲ್ ನಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಸಮಾರಂಭ : ಧರ್ಮದರ್ಶಿ ಹರೀಶ್ ಆರಿಕೋಡಿ ಅವರಿಗೆ ‘ ಬೆಳಾಲಿನ ಮುತ್ತು’ ಎಂಬ ಬಿರುದು Read More »

ಕಡಬ:15ಕ್ಕೂ ಹೆಚ್ಚು ಸ್ನೇಹಿತರ ಮೊಬೈಲ್ ಪಡೆದು ಯುವತಿಗೆ ಕಿರಿಕ್ ಮೆಸೇಜ್ ಮಾಡಿದ ಯುವಕ :ಯುವತಿ ಠಾಣೆಗೆ ದೂರು ಕೊಟ್ಟಾಗಲೇ ಬಯಲಾಯ್ತು ಯುವಕನ
ಕೆಟ್ಟ ಚಾಳಿ

ಕಡಬ:ಯುವಕನೊಬ್ಬ ತನ್ನ ಹದಿನೈದಕ್ಕೂ ಹೆಚ್ಚು ಸ್ನೇಹಿತರ ಮೊಬೈಲ್ ಪಡೆದು ಯುವತಿಯೊಬ್ಬಳಿಗೆ ಸಂದೇಶ ಮಾಡಿದ್ದು ಯುವತಿಯ ದೂರಿನ ಮೇರೆಗೆ ಹಲವರನ್ನು ಪೊಲೀಸರು ವಿಚಾರಣೆಗೆ ಕರೆದಿರುವ ಬಗ್ಗೆ ತಡವಾಗಿ ತಿಳಿದು ಬಂದಿದೆ. ಕೊಕ್ಕಡದ ಯುವಕ ಕಡಬದ ಯುವತಿಯೊಂದಿಗೆ ನಿತ್ಯ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು ಬಳಿಕ ಮೈಮನಸು ಉಂಟಾಗಿ ಆತನ ಕರೆ ಮತ್ತು ಸಂದೇಶ ಬಾರದಂತೆ ಯುವತಿ ಬ್ಲಾಕ್ ಮಾಡಿದ್ದಳು. ಹೀಗಾಗಿ ಯುವಕ ಹೋದಲ್ಲೆಲ್ಲ ಸಿಗುವ ಸ್ನೇಹಿತರ ಬಳಿ “ತುರ್ತು ಕರೆ ಮಾಡಲು ಇದೆ” , ಪೋನ್ ಜಾರ್ಜ್ ಖಾಲಿಯಾಗಿದೆ, ಎಂದು ಬೊಗಳೆ …

ಕಡಬ:15ಕ್ಕೂ ಹೆಚ್ಚು ಸ್ನೇಹಿತರ ಮೊಬೈಲ್ ಪಡೆದು ಯುವತಿಗೆ ಕಿರಿಕ್ ಮೆಸೇಜ್ ಮಾಡಿದ ಯುವಕ :ಯುವತಿ ಠಾಣೆಗೆ ದೂರು ಕೊಟ್ಟಾಗಲೇ ಬಯಲಾಯ್ತು ಯುವಕನ
ಕೆಟ್ಟ ಚಾಳಿ
Read More »

ತಮ್ಮ ಕುಟುಂಬದಿಂದ ದೂರವಾಗಿದ್ದ 21 ಬಾಲಕರನ್ನು ಮತ್ತೆ ತಮ್ಮ ಮನೆಗೆ ಸೇರಿಸಲು ಸೇತುವೆಯಾದ ಆಧಾರ್ ಕಾರ್ಡ್ !! | ಏನಿದು “ಮರಳಿ ಮನೆಗೆ” ಕಥೆ?? ಇಲ್ಲಿದೆ ನೋಡಿ

ತಮ್ಮ ಕುಟುಂಬ ಸದಸ್ಯರಿಂದ ದೂರವಿದ್ದು, ಅವರನ್ನು ಸೇರಲಾಗದೆ ಪರಿತಪಿಸುತ್ತಿದ್ದ 21 ಬಾಲಕರ ಬದುಕಿನಲ್ಲಿ ಹೊಸ ಬೆಳಕೊಂದು ಮೂಡಿದೆ. ಬೆಂಗಳೂರಿನ ಸರ್ಕಾರಿ ಸಂಸ್ಥೆಗಳಲ್ಲಿ ವಾಸಿಸುತ್ತಿದ್ದ 21 ಮಂದಿ ಬಾಲಕರು ಆಧಾರ್ ಕಾರ್ಡ್ ನೆರವಿನಿಂದಾಗಿ ತಮ್ಮ ಕುಟುಂಬ ಸದಸ್ಯರನ್ನು ಸೇರಿದ ಹೃದಯಸ್ಪರ್ಶಿ ಘಟನೆಯೊಂದು ಬೆಳಕಿಗೆ ಬಂದಿದೆ. ಕುಟುಂಬ ಸದಸ್ಯರೊಂದಿಗೆ ಮತ್ತೆ ಸೇರಿದ ಬಾಲಕರು ವಿವಿಧ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಈ ಪೈಕಿ ಕೆಲವರು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಮತ್ತೆ ಇನ್ನೂ ಕೆಲವರು ವಾಕ್-ಶ್ರವಣ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ರೀತಿ ಹಲವು ಸಮಸ್ಯೆಗಳನ್ನು …

ತಮ್ಮ ಕುಟುಂಬದಿಂದ ದೂರವಾಗಿದ್ದ 21 ಬಾಲಕರನ್ನು ಮತ್ತೆ ತಮ್ಮ ಮನೆಗೆ ಸೇರಿಸಲು ಸೇತುವೆಯಾದ ಆಧಾರ್ ಕಾರ್ಡ್ !! | ಏನಿದು “ಮರಳಿ ಮನೆಗೆ” ಕಥೆ?? ಇಲ್ಲಿದೆ ನೋಡಿ Read More »

ರೀಲ್ಸ್ ವ್ಯಾಮೋಹದಿಂದ ಒಂದೇ ಕುಟುಂಬದ ಮೂವರು ಸಾವು!

ಚಿಕ್ಕಬಳ್ಳಾಪುರ:ಒಂದೇ ಕುಟುಂಬದ ಮೂವರು ಬಸ್ ನಡಿಗೆ ಬಿದ್ದು ಮೃತ ಪಟ್ಟಿರುವ ಹೃದಯವಿದ್ರಾಯಕ ಘಟನೆ ಚಿಕ್ಕಬಳ್ಳಾಪುರದಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೆಂಗಳೂರಿನ ಗೌಸ್ ಹಾಗೂ ಅವರ ಪತ್ನಿ ಅಮ್ಮಾಜಾನ್ ಹಾಗೂ ಮಗ ರಿಯಾನ್ ಮೃತ ಪಟ್ಟವರೆಂದು ತಿಳಿದು ಬಂದಿದೆ.ಅಪ್ಪ, ಅಮ್ಮ ಮತ್ತು ಮಗನನ್ನು ಬಸ್‌ವೊಂದು ಬಲಿ ಪಡೆದ ಭಾರಿ ಅಪಘಾತದ ಕಾರಣ ಬಹಿರಂಗಗೊಂಡಿದ್ದು, ರೀಲ್ಸ್‌ ವಿಡಿಯೋದ ವ್ಯಾಮೋಹವೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಮಾರಾಟ ಮಾಡೋ ಕೆಲಸದಲ್ಲಿರುವ ಗೌಸ್,ಸ್ಕೂಟಿಯಲ್ಲಿ ಪತ್ನಿ ಹಾಗೂ ಮಗನ …

ರೀಲ್ಸ್ ವ್ಯಾಮೋಹದಿಂದ ಒಂದೇ ಕುಟುಂಬದ ಮೂವರು ಸಾವು! Read More »

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹದಗೆಟ್ಟ ಆರೋಗ್ಯ : ಆಸ್ಪತ್ರೆಗೆ ದಾಖಲು

ಕಳೆದ 2 ತಿಂಗಳಿನಿಂದ ಪಂಜಾಬ್, ಗೋವಾ ಸೇರಿದಂತೆ ಹಲವೆಡೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಇದೀಗ ಅನಾರೋಗ್ಯಕ್ಕೀಡಾಗಿದ್ದಾರೆ. ಚುನಾವಣೆ ಪ್ರಚಾರಕ್ಕೆ ತೆರಳಿದ ಪರಿಣಾಮ ಆಹಾರದಲ್ಲಿ ವ್ಯತ್ಯಾಸ ಉಂಟಾಗಿದ್ದು, ಚಿಕಿತ್ಸೆ ಪಡೆಯಲು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಅರವಿಂದ್ ಕೇಜ್ರಿವಾಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಮ್ಮು, ಸಕ್ಕರೆ ಖಾಯಿಲೆ, ಉಸಿರಾಟದ ತೊಂದರೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ‌. ಬೆಂಗಳೂರಿನ ಪ್ರಕೃತಿ ಕೇಂದ್ರ ಜಿಂದಾಲ್ ‌ನಲ್ಲಿ ಚಿಕಿತ್ಸೆ ಪಡೆದಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಈ ಬಾರಿ ಕುಟುಂಬ ಸಮೇತರಾಗಿ ಬಂದು ಜಿಂದಾಲ್ …

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹದಗೆಟ್ಟ ಆರೋಗ್ಯ : ಆಸ್ಪತ್ರೆಗೆ ದಾಖಲು Read More »

ಮನುಷ್ಯ ಸಾಯುವ ಕ್ಷಣ ಹೇಗಿರುತ್ತೆ ಗೊತ್ತಾ ?? | ಮೆದುಳಿನಲ್ಲಿ ಕೊನೆ ಕ್ಷಣದಲ್ಲಿ ನಡೆಯುತ್ತದೆಯಂತೆ ಈ ವಿಸ್ಮಯ !!

ಹುಟ್ಟಿದ ಪ್ರತಿ ಜೀವಿಗೂ ಸಾವು ಇದ್ದೇ ಇದೆ. ನಾವು ಮುಂದೊಂದು ದಿನ ಸಾಯುತ್ತೇವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಹೇಗೆ ಮತ್ತು ಯಾವಾಗ ಎಂಬುದು ಮಾತ್ರ ಗುಪ್ತ. ಅದಕ್ಕಿಂತ ಹೆಚ್ಚಾಗಿ, ಸಾಯುತ್ತಿರುವ ವ್ಯಕ್ತಿಯು ಸಾಯುವಾಗ ಯಾವ ರೀತಿಯ ಅನುಭವಕ್ಕೆ ಒಳಗಾಗುತ್ತಾನೆ ಎಂದು ಹೇಳುವುದು ಕಷ್ಟ. ಏಕೆಂದರೆ ಈ ರಹಸ್ಯವು ಅವರೊಂದಿಗೆ ಅಡಗಿಕೊಂಡು ಹೋಗುತ್ತದೆ. ಆದಾಗ್ಯೂ, ವಿಜ್ಞಾನಿಗಳು ಈಗ ಸಾಯುತ್ತಿರುವ ವ್ಯಕ್ತಿಯ ಮೆದುಳಿನ ಚಟುವಟಿಕೆಯನ್ನು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ನಾವು ಸತ್ತಾಗ ನಮ್ಮ ಮೆದುಳಿಗೆ ಏನಾಗುತ್ತದೆ ಎಂಬುದರ ಒಳನೋಟವನ್ನು ಈ …

ಮನುಷ್ಯ ಸಾಯುವ ಕ್ಷಣ ಹೇಗಿರುತ್ತೆ ಗೊತ್ತಾ ?? | ಮೆದುಳಿನಲ್ಲಿ ಕೊನೆ ಕ್ಷಣದಲ್ಲಿ ನಡೆಯುತ್ತದೆಯಂತೆ ಈ ವಿಸ್ಮಯ !! Read More »

ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಸ್ಲಿಂ ಮಹಿಳೆಯ ಬುರ್ಖಾದೊಳಗಿತ್ತು ಲಕ್ಷ ಬೆಲೆಬಾಳುವ ಚಿನ್ನ!! ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಆರೋಪಿ ಮಹಿಳೆ ವಶಕ್ಕೆ

ಹೈದರಾಬಾದ್: ಮುಸ್ಲಿಂ ಮಹಿಳೆಯೊಬ್ಬಳು ತನ್ನ ಬುರ್ಕಾದೊಳಗೆ ಚಿನ್ನದ ಮಣಿಯನ್ನು ಜೋಡಿಸಿ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 18 ಲಕ್ಷ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ದುಬೈನಿಂದ ಸಾಗಿಸಿದ ಆರೋಪದಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ. ವಶಕ್ಕೆ ಪಡೆದುಕೊಳ್ಳುವ ಸಂದರ್ಭದಲ್ಲಿ ಆಕೆಯ ಬುರ್ಕಾದಲ್ಲಿ ಸುಮಾರು 350 ಗ್ರಾಂ ಚಿನ್ನವಿದ್ದು,ಆಕೆಯನ್ನು ವಶಕ್ಕೆ ಪಡೆದುಕೊಂಡ ಅಧಿಕಾರಿಗಳು ಪ್ರಕರಣಕ್ಕೆ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

‘ಮಹಾಶಿವರಾತ್ರಿ’ ಹಬ್ಬದ ಪ್ರಯುಕ್ತ ಮಾಂಸ ಮಾರಾಟ ಬಂದ್

ಬೆಂಗಳೂರು : ಶಿವನಿಗೆ ಮುಡಿಪಾಗಿರುವ ದಿನವೇ ‘ಮಹಾ ಶಿವರಾತ್ರಿ’.ಈ ಹಬ್ಬದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಾರ್ಚ್‌ 1 ರಂದು ನಡೆಯುವ ಶಿವರಾತ್ರಿ ಹಬ್ಬದಂದು ಯಾವುದೇ ಮಾಂಸ ಮಾರಾಟವನ್ನು ಮಾಡಬಾರದು ಎಂದು ಪಶುಪಾಲನೆ ಜಂಟಿ ನಿರ್ದೇಶಕರು ತಿಳಿಸಿದ್ದು,ಹೆಚ್ಚಿನ ಮಾಹಿತಿಗಾಗಿ ಮಾಂಸ ಮಾರಾಟ ನಿಷೇಧದ ಪ್ರತಿಯನ್ನು ಲಗತ್ತಿಸಿದೆ.

ಬಂಟ್ವಾಳ : ಬಿಲ್ ಪಾವತಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗ್ರಾ.ಪಂ.ಸದಸ್ಯನ ಮೇಲೆ ಅಧ್ಯಕ್ಷ ನಿಂದ ಹಲ್ಲೆ!!!

ಬಂಟ್ವಾಳ : ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಗ್ರಾ.ಪಂ.ಸದಸ್ಯನ ಮೇಲೆ ಅಧ್ಯಕ್ಷ ಹಲ್ಲೆ ನಡೆಸಲು ಮುಂದಾಗಿದ್ದಲ್ಲದೇ ಚೂರಿ ಇರಿಯಲು ಕೂಡಾ ಪ್ರಯತ್ನಿಸಿದ ಘಟನೆ ಗ್ರಾ.ಪಂ.ಸಭಾಂಗಣದೊಳಗೆ ನಡೆದಿದೆ. ನಾವೂರ ಗ್ರಾ.ಪಂ.ಸದಸ್ಯ ಜನಾರ್ಧನ ಎಂಬುವವರ ಮೇಲೆ ಗ್ರಾ.ಪಂ.ಅಧ್ಯಕ್ಷ ಉಮೇಶ್ ಕುಲಾಲ್ ಅವರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಾಮಗಾರಿ ವಿಷಯಕ್ಕೆ ಸಂಬಂಧಿಸಿದಂತೆ ಬಿಲ್ ಪಾವತಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಈ ರೀತಿ ಮಾಡಲು ಮುಂದಾಗಿದ್ದಾರೆ. ಸದಸ್ಯರ ಮಧ್ಯ ಪ್ರವೇಶದಿಂದ ಚೂರಿ ಇರಿತದಿಂದ ಬಚಾವ್ ಆಗಿದ್ದೇನೆ …

ಬಂಟ್ವಾಳ : ಬಿಲ್ ಪಾವತಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗ್ರಾ.ಪಂ.ಸದಸ್ಯನ ಮೇಲೆ ಅಧ್ಯಕ್ಷ ನಿಂದ ಹಲ್ಲೆ!!! Read More »

error: Content is protected !!
Scroll to Top