Day: January 12, 2022

ಮೇಕೆದಾಟು ಪಾದಯಾತ್ರೆಗೆ ಹೈಕೋರ್ಟ್ ಗುದ್ದು | ಪಾದಯಾತ್ರೆ ಮೊಟಕುಗೊಳಿಸಿದ ಸಿದ್ದು

ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಕುರಿತು ಹೈಕೋರ್ಟ್ ತರಾಟೆ ತೆಗೆದುಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ತಳಮಳ ಆರಂಭವಾಗಿದೆ. ಮಾಜಿ ಸೀಎಂ. ವಿಪಕ್ಷ ನಾಯಕ ಸಿದ್ದರಾಮಯ್ಯ , ಪಾದಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದು, ಪಾದಯಾತ್ರೆ ನಿಯಂತ್ರಣಕ್ಕೆ ಸರಕಾರವೂ ಸಿದ್ದತೆ ನಡೆಸಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ತುರ್ತು ಸಭೆ ಆರಂಭವಾಗಿದೆ. ಹೈಕೋರ್ಟ್ ಚಾಟಿ ಏಟು ನೀಡಿದ ಬೆನ್ನಲ್ಲೆ ಕೆಪಿಸಿಸಿ ಕಾನೂನು ವಿಭಾಗದ ಮುಖ್ಯಸ್ಥ ಪೊನ್ನಣ್ಣ ಜೊತೆ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಚರ್ಚೆ ನಡೆಸಿದರು. ಪೊನ್ನಣ್ಣ ಜೊತೆ …

ಮೇಕೆದಾಟು ಪಾದಯಾತ್ರೆಗೆ ಹೈಕೋರ್ಟ್ ಗುದ್ದು | ಪಾದಯಾತ್ರೆ ಮೊಟಕುಗೊಳಿಸಿದ ಸಿದ್ದು Read More »

ಕಡಬ : ಆಸಿಡ್ ಸೇವಿಸಿ ರಬ್ಬರ್ ಟ್ಯಾಪರ್ ಆತ್ಮಹತ್ಯೆ

ಕಡಬ: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯವಿದ್ದ ಕೇರಳದ ಶ್ರೀಧರನ್ ಕಾಣಿ (55ವ) ಎಂಬವರು ಆಸಿಡ್ ಸೇವಿಸಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕುದ್ಮಾರಿನ ಹತ್ತನೆಕಲ್ಲು ಎಂಬಲ್ಲಿ ನಾರ್ಣಪ್ಪ ಗೌಡ ಎಂಬವರ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯವಿದ್ದು, ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಕೇರಳದ ಮೂಲದ ಶ್ರೀಧರನ್ ಕಾಣಿ ಎಂಬವರು ರಬ್ಬರ್ ಶೀಟ್ ಮಾಡಲು ಉಪಯೋಗಿಸುವ ಆಸಿಡ್‌ನ್ನು ಸೇವಿಸಿ ಆತ್ಮಹತ್ಯೆ ಮಾಡಲು ಯತ್ನಿಸಿದ್ದಾಗ ಶ್ರೀಧರನ್ ಜೊತೆಗಿದ್ದ ರೆಝಿ ಆರ್ ಸೋಮರಾಜ್ ಸ್ಥಳೀಯರಿಗೆ ಮಾಹಿತಿ ನೀಡಿ ಸ್ಥಳೀಯರ ಸಹಾಯದಿಂದ …

ಕಡಬ : ಆಸಿಡ್ ಸೇವಿಸಿ ರಬ್ಬರ್ ಟ್ಯಾಪರ್ ಆತ್ಮಹತ್ಯೆ Read More »

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ವಿಕಾಸ ಸಪ್ತಾಹ ಕಾರ್ಯಕ್ರಮ

ವಿವೇಕ ಚಿಂತನೆ ಅರ್ಥೈಸಿಕೊಂಡು ಅನುಷ್ಠಾನಗೊಳಿಸುವುದು ಅತ್ಯಗತ್ಯ- ರಾಹುಲ್ ಭಟ್ ಪುತ್ತೂರು: ವಿವೇಕಾನಂದ ಎನ್ನುವ ಹೆಸರೇ ಒಂದು ರೋಮಾಂಚನ, ಪ್ರೇರಣೆ, ಹುಮ್ಮಸ್ಸು, ಧೀರತನ. ಅವರು ಯುವ ಜನಾಂಗಕ್ಕೆ ಬೋಧಿಸಿದ ವಿವೇಕ ಮಾರ್ಗ ಅತ್ಯಂತ ಮೌಲ್ಯಯುತವಾದದ್ದು. ವಿವೇಕಾನಂದರ ವೈಚಾರಿಕತೆ ಮತ್ತು ಆಧ್ಯಾತ್ಮ ಅರಿವು ಎಂದೆಂದಿಗೂ ಅರ್ಥಪೂರ್ಣವಾಗಿದೆ. ಅವರ ಸಾಮಾಜಿಕ ನಿಲುವು, ವಿವೇಕ ಚಿಂತನೆ ಪೂರ್ಣವಾಗಿ ಅರ್ಥೈಸಿಕೊಂಡು ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು ಎಂದು ವಿಟ್ಲದ ಮೈತ್ರೇಯಿ ಗುರುಕುಲದ ಆಚಾರ್ಯ ರಾಹುಲ್ ಭಟ್ ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ …

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿವೇಕ ವಿಕಾಸ ಸಪ್ತಾಹ ಕಾರ್ಯಕ್ರಮ Read More »

ಸವಣೂರಿನಲ್ಲಿ ಕಡಬ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ

ಒತ್ತಡ ನಿವಾರಣೆ, ಮಾನಸಿಕ ಧೈರ್ಯ ಹಾಗೂ ಜೀವನೋಲ್ಲಾಸ ವೃದ್ದಿಸಲು ಕ್ರೀಡೆ ಪೂರಕ – ಕೆ.ಸೀತಾರಾಮ ರೈ ಸವಣೂರು : ನೆಹರು ಯುವ ಕೇಂದ್ರ ಮಂಗಳೂರು,ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ.,ಕಡಬ ತಾಲೂಕು ಯುವಜನ ಒಕ್ಕೂಟ ,ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು, ಸವಣೂರು ಯುವಕ ಮಂಡಲದ ಜಂಟಿ ಆಶ್ರಯದಲ್ಲಿ ಜ.12ರಂದು ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಮಾತನಾಡಿ,ಕ್ರೀಡೆಯಿಂದ …

ಸವಣೂರಿನಲ್ಲಿ ಕಡಬ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ Read More »

ಅಸ್ವಾಭಾವಿಕ ಲೈಂಗಿಕ ಕ್ರಿಯೆಯ ತೀವ್ರ ಆಸಕ್ತಿಯ ಗಂಡನ ಹಲ್ಲು ಕಿತ್ತುಹಾಕುವಂತೆ ಕೋರ್ಟು ಹೇಳಿದ್ದು ಯಾಕೆ ಗೊತ್ತಾ ?ಕೋರ್ಟ್ ನ ಅಚ್ಚರಿಯ ತೀರ್ಪಿನ ಹಿಂದೆ ಇದೆ ಅದೊಂದು ಚುಚ್ಚುವ ಕಾರಣ !!

ಅಹಮದಾಬಾದ್ : ಪತ್ನಿಯೊಬ್ಬಳು ಪತಿಯ ಅಸ್ವಾಭಾವಿಕ ಲೈಂಗಿಕತೆಯ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದು, ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ಕುತೂಹಲದ ತೀರ್ಪೊಂದನ್ನು ನೀಡಿದೆ. ಈ ರೀತಿಯ ಅಸ್ವಾಭಾವಿಕ ಲೈಂಗಿಕತೆಗೆ ಕೃತಕ ಹಲ್ಲನ್ನು ಗಂಡ ಬಳಸುತ್ತಿದ್ದರಿಂದ ಆ ಹಲ್ಲನ್ನು ಕೀಳುವಂತೆ ಕೋರ್ಟ್ ಹೇಳಿದೆ! ಗುಜರಾತ್ ನ ದೊಡ್ಡ ಆಭರಣ ವ್ಯಾಪಾರಿಯೋರ್ವರ ಪತ್ನಿ ಕೋರ್ಟ್ ಮೊರೆ ಹೋಗಿದ್ದರು. ಈ ವ್ಯಾಪಾರಿಯ ಮೊದಲ ಪತ್ನಿ ಕೊರೊನಾ ಕಾರಣದಿಂದ ಮೃತಪಟ್ಟಿದ್ದರಿಂದ 67 ವರ್ಷ ವಯಸ್ಸಿನ ಈತ 40 ರ ಹರೆಯದವಳ ಜೊತೆ ಎರಡನೇ ವಿವಾಹವಾಗಿದ್ದ. ಮದುವೆಯ …

ಅಸ್ವಾಭಾವಿಕ ಲೈಂಗಿಕ ಕ್ರಿಯೆಯ ತೀವ್ರ ಆಸಕ್ತಿಯ ಗಂಡನ ಹಲ್ಲು ಕಿತ್ತುಹಾಕುವಂತೆ ಕೋರ್ಟು ಹೇಳಿದ್ದು ಯಾಕೆ ಗೊತ್ತಾ ?ಕೋರ್ಟ್ ನ ಅಚ್ಚರಿಯ ತೀರ್ಪಿನ ಹಿಂದೆ ಇದೆ ಅದೊಂದು ಚುಚ್ಚುವ ಕಾರಣ !! Read More »

ತನ್ನ ನಾಲ್ಕು ವರ್ಷದ ಮಗನನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ತಾಯಿ!!

ಮೈಸೂರು :ದಿನದಿಂದ ದಿನಕ್ಕೆ ಕೊಲೆ, ಅತ್ಯಾಚಾರಗಳ ಪ್ರಕರಣ ಹೆಚ್ಚುತ್ತಲೇ ಇದೆ. ಆದ್ರೆ ಇಲ್ಲೊಂದು ಕಡೆ ತಾಯಿಯೇ ಹೆತ್ತ ಮಗನನ್ನು ಕೊಚ್ಚಿ ಕೊಲೆಗೈದ ಘಟನೆ ನಡೆದಿದೆ. ಹೌದು.ಈ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.ತಾಯಿ ಭವಾನಿ ಮಾನಸಿಕ ಅಸ್ವಸ್ಥರಾಗಿದ್ದು, 4 ವರ್ಷದ ಶ್ರೀನಿವಾಸ್ ಎಂಬ ಮಗನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದಿದ್ದಾಳೆ.ಪತಿ ಶಂಕರ್ ಮನೆಯಲ್ಲಿ ಇಲ್ಲದಿದ್ದಾಗ ಭವಾನಿ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದ್ದು,ಸದ್ಯ ಎಚ್.ಡಿ.ಕೋಟೆ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಬೂದನೂರಿನ ಶಂಕರ್ ಜೊತೆ …

ತನ್ನ ನಾಲ್ಕು ವರ್ಷದ ಮಗನನ್ನೇ ಮಚ್ಚಿನಿಂದ ಕೊಚ್ಚಿ ಕೊಂದ ತಾಯಿ!! Read More »

ಹೊಸ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡ ಮುಂಬೈ |ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆ ಪಡೆಯಲಿದೆ ಈ ನಗರ

ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ನಗರವೆಂದರೆ ಅದು ಭಾರತದ ಗೇಟ್ ವೇ ಮುಂಬೈ. ಇಂತಹ ಪ್ರಸಿದ್ಧ ಮುಂಬೈ ಇದೀಗ ಹೊಸ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆಗಳನ್ನು ಪಡೆಯಲಿರುವ ನಗರ ಎಂಬ ಖ್ಯಾತಿಗೆ ಮುಂಬೈ ಪಾತ್ರವಾಗಲಿದೆ. ದಕ್ಷಿಣ ಮುಂಬೈಯಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುವ ವಾಟರ್ ಟ್ಯಾಕ್ಸಿ ಸೇವೆ ಈ ತಿಂಗಳ ಅಂತ್ಯದ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆ ಇದೆ. ನವಿ ಮುಂಬೈನ ನೆರೂಲ್, ಬೆಲಾಪುಟ್ ಮತ್ತು ಜೆಎನ್‌ಪಿಟಿಗೆ ದಕ್ಷಿಣ ಮುಂಬೈನ …

ಹೊಸ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡ ಮುಂಬೈ |ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆ ಪಡೆಯಲಿದೆ ಈ ನಗರ Read More »

ಬಡ ಜೀವ ತನ್ನ ದಿನ ಸಾಗಿಸಲೆಂದು ಮಾರುತ್ತಿದ್ದ ಹಣ್ಣಿನ ಗಾಡಿಯಿಂದ ಪಪ್ಪಾಯಿ ಹಣ್ಣುಗಳನ್ನು ರಸ್ತೆಗೆ ಬಿಸಾಡಿದ ಸೊಕ್ಕಿನ ಮಹಿಳೆ !!|ಅಷ್ಟಕ್ಕೂ ಆಕೆ ಈ ರೀತಿ ಮಾಡಲು ಕಾರಣ ಏನು ಗೊತ್ತೇ??

ತನ್ನ ಕಾರಿಗೆ ಹಣ್ಣು ಮಾರುತ್ತಿದ್ದ ತಳ್ಳು ಗಾಡಿ ತಾಗಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ಬಡಪಾಯಿ ವ್ಯಾಪಾರಿಯ ಗಾಡಿಯಲ್ಲಿದ್ದ ಪಪ್ಪಾಯಿ ಹಣ್ಣುಗಳನ್ನೆಲ್ಲಾ ಯರ್ರಾಬಿರ್ರಿ ರಸ್ತೆಗೆ ಎಸೆದ ವೀಡಿಯೋ ವೈರಲ್ ಆಗಿದೆ. ಹೌದು, ಈ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಕಾರಿಗೆ ತಳ್ಳು ಗಾಡಿ ತಾಗಿದ್ದರಿಂದ ಕೋಪಗೊಂಡ ಮಹಿಳೆ ಹಣ್ಣು ವ್ಯಾಪಾರಿಯ ಗಾಡಿಯಿಂದ ಪಪ್ಪಾಯಿ ಹಣ್ಣುಗಳನ್ನು ರಸ್ತೆಗೆ ಎಸೆಯುತ್ತಿರುವುದನ್ನು ಕಾಣಬಹುದು. ಡಿಕ್ಕಿ ಹೊಡೆದಿದ್ದಕ್ಕೆ ಹಣ್ಣು ಮಾರಾಟಗಾರನೊಂದಿಗೆ ಜಗಳವಾಡಿದ ಆಕೆ ಬಳಿಕ ಗಾಡಿಯಲ್ಲಿದ್ದ ಪಪ್ಪಾಯಿ ಹಣ್ಣುಗಳನ್ನು ಬೀಸಾಕಿದ್ದಾಳೆ. ಮಾರಾಟಗಾರ …

ಬಡ ಜೀವ ತನ್ನ ದಿನ ಸಾಗಿಸಲೆಂದು ಮಾರುತ್ತಿದ್ದ ಹಣ್ಣಿನ ಗಾಡಿಯಿಂದ ಪಪ್ಪಾಯಿ ಹಣ್ಣುಗಳನ್ನು ರಸ್ತೆಗೆ ಬಿಸಾಡಿದ ಸೊಕ್ಕಿನ ಮಹಿಳೆ !!|ಅಷ್ಟಕ್ಕೂ ಆಕೆ ಈ ರೀತಿ ಮಾಡಲು ಕಾರಣ ಏನು ಗೊತ್ತೇ?? Read More »

ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ|ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜ.20|ಕರ್ತವ್ಯ ಸ್ಥಳ ಮಂಗಳೂರು

ಕರ್ನಾಟಕ ಬ್ಯಾಂಕಿನಲ್ಲಿ ಮ್ಯಾನೇಜರ್ ಹುದ್ದೆಯ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ: ಮ್ಯಾನೇಜರ್ (Scale -2) ಚಾರ್ಟರ್ಡ್ ಅಕೌಂಟೆಂಟ್ಸ್ ಕರ್ತವ್ಯ ಸ್ಥಳ: ಮಂಗಳೂರು ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಚಾರ್ಟರ್ಡ್ ಅಕೌಂಟೆಂಟ್ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.01-12-2021ಕ್ಕೆ ಚಾರ್ಟರ್ಡ್ ಅಕೌಂಟೆಂಟ್ ಆಗಿರಬೇಕು. ವಯೋಮಾನ: ಅಭ್ಯರ್ಥಿಗಳಿಗೆ ದಿನಾಂಕ 01/12/2021ಕ್ಕೆ ಒಳಗೊಂಡಂತೆ ಗರಿಷ್ಠ 30 ವರ್ಷ ವಯೋಮಾನ ನಿಗದಿಪಡಿಸಲಾಗಿದೆ.(ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲಿಕೆ) ವೇತನ: ಮಾಸಿಕ ರೂ. …

ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ|ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜ.20|ಕರ್ತವ್ಯ ಸ್ಥಳ ಮಂಗಳೂರು Read More »

ಜ.31 ರವರೆಗೆ ರಜೆ ವಿಸ್ತರಣೆ : ಬಿ ಸಿ ನಾಗೇಶ್ ಘೋಷಣೆ

ಬೆಂಗಳೂರು : ಈಗಾಗಲೇ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರಕಾರದಿಂದ 1 ರಿಂದ 9 ನೇ ತರಗತಿವರೆಗೆ ಬೆಂಗಳೂರಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಆದೇಶವನ್ನು ಈಗ ಜನವರಿ 31 ರವರೆಗೆ ಮುಂದುವರಿಯಲಿದೆ ಎಂದು ಶಿಕ್ಷಣ ಸಚಿವರು ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು, ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನವರಿ 31, 2022 ರವರೆಗೆ 1 ರಿಂದ 9 ರವರೆಗೆ ರಜೆ ವಿಸ್ತರಣೆ …

ಜ.31 ರವರೆಗೆ ರಜೆ ವಿಸ್ತರಣೆ : ಬಿ ಸಿ ನಾಗೇಶ್ ಘೋಷಣೆ Read More »

error: Content is protected !!
Scroll to Top