ಬಡ ಜೀವ ತನ್ನ ದಿನ ಸಾಗಿಸಲೆಂದು ಮಾರುತ್ತಿದ್ದ ಹಣ್ಣಿನ ಗಾಡಿಯಿಂದ ಪಪ್ಪಾಯಿ ಹಣ್ಣುಗಳನ್ನು ರಸ್ತೆಗೆ ಬಿಸಾಡಿದ ಸೊಕ್ಕಿನ ಮಹಿಳೆ !!|ಅಷ್ಟಕ್ಕೂ ಆಕೆ ಈ ರೀತಿ ಮಾಡಲು ಕಾರಣ ಏನು ಗೊತ್ತೇ??

ತನ್ನ ಕಾರಿಗೆ ಹಣ್ಣು ಮಾರುತ್ತಿದ್ದ ತಳ್ಳು ಗಾಡಿ ತಾಗಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ಬಡಪಾಯಿ ವ್ಯಾಪಾರಿಯ ಗಾಡಿಯಲ್ಲಿದ್ದ ಪಪ್ಪಾಯಿ ಹಣ್ಣುಗಳನ್ನೆಲ್ಲಾ ಯರ್ರಾಬಿರ್ರಿ ರಸ್ತೆಗೆ ಎಸೆದ ವೀಡಿಯೋ ವೈರಲ್ ಆಗಿದೆ.

ಹೌದು, ಈ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಕಾರಿಗೆ ತಳ್ಳು ಗಾಡಿ ತಾಗಿದ್ದರಿಂದ ಕೋಪಗೊಂಡ ಮಹಿಳೆ ಹಣ್ಣು ವ್ಯಾಪಾರಿಯ ಗಾಡಿಯಿಂದ ಪಪ್ಪಾಯಿ ಹಣ್ಣುಗಳನ್ನು ರಸ್ತೆಗೆ ಎಸೆಯುತ್ತಿರುವುದನ್ನು ಕಾಣಬಹುದು. ಡಿಕ್ಕಿ ಹೊಡೆದಿದ್ದಕ್ಕೆ ಹಣ್ಣು ಮಾರಾಟಗಾರನೊಂದಿಗೆ ಜಗಳವಾಡಿದ ಆಕೆ ಬಳಿಕ ಗಾಡಿಯಲ್ಲಿದ್ದ ಪಪ್ಪಾಯಿ ಹಣ್ಣುಗಳನ್ನು ಬೀಸಾಕಿದ್ದಾಳೆ. ಮಾರಾಟಗಾರ ನಾನು ಬಡವ ಎಂದು ಬೇಡಿಕೊಂಡು ಮನವಿ ಮಾಡಿದ್ದರೂ ಮಹಿಳೆ ಮನಸ್ಸು ಮಾತ್ರ ಕರಗಿಲ್ಲ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಮಹಿಳೆ ತನ್ನ ಕಾರನ್ನು ಪಾರ್ಕಿಂಗ್ ನಿಂದ ಹೊರತೆಗೆದು ರಸ್ತೆಗೆ ಬರುತ್ತಿದ್ದಂತೆ ತಳ್ಳು ಗಾಡಿ ಆಕೆಯ ಕಾರಿನ ಪಕ್ಕದಲ್ಲಿ ಹಾದುಹೋಗುತ್ತಿತ್ತು. ಆಗ ಆಕೆಯ ಕಾರಿನ ಹಿಂಭಾಗಕ್ಕೆ ಹಣ್ಣಿನ ಗಾಡಿ ತಾಗಿತು. ತನ್ನ ಕಾರಿಗೆ ಸ್ಕ್ರಾಚ್ ಆಗಿದ್ದನ್ನು ನೋಡಿದ ಮಹಿಳೆ ಕೋಪಗೊಂಡು ಆ ಗಾಡಿಯಲ್ಲಿದ್ದ ಹಣ್ಣುಗಳನ್ನು ಬಿಸಾಡಿದ್ದಾಳೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಿಳೆಯ ಈ ದುರ್ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಬೈಗುಳದ ಸುರಿಮಳೆ ಸುರಿಸಿದ್ದಾರೆ. ಆತ ಅಷ್ಟೊಂದು ಬೇಡುತ್ತಿದ್ದರೂ ಸಹ ಆತನ ಮಾತಿಗೆ ಕಿವಿಗೊಡದೆ ಹಣ್ಣುಗಳನ್ನೆಲ್ಲಾ ರಸ್ತೆಗೆಸೆದ ಆಕೆಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

error: Content is protected !!
Scroll to Top
%d bloggers like this: